36 ಸಾವಿರ ರೂ. ವೆಚ್ಚದಲ್ಲಿ ಪುತ್ರನ ಮದುವೆ ಮಾಡಿದ ಅಧಿಕಾರಿ

ಹೈದರಾಬಾದ್: ಫೆ. ೮- ಇತ್ತೀಚಿನ ದಿನಗಳಲ್ಲಿ ಅದ್ದೂರಿ ವಿವಾಹ ಸಮಾರಂಭಗಳಿಗೆ ಕಡಿಮೆಯಿಲ್ಲ. ಅದರಲ್ಲಿಯೂ ಐಎಎಸ್ ಅಧಿಕಾರಿ, ಬ್ಯಾಂಕ್ ಮ್ಯಾನೆಜರ್ ಹೀಗೆ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಮದುವೆಗಳೆಂದರೆ ಪ್ರತಿಷ್ಠೆಗಳನ್ನೇ ಪಣಕ್ಕಿಟ್ಟು ವಿವಾಹ ಸಮಾರಂಭಗಳನ್ನು ವೈಭವಯುತವಾಗಿ ನೆರವೇರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಆಂಧ್ರಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಮಗನ ಮದುವೆಯನ್ನು ಕೇವಲ 36 ಸಾವಿರ ರೂ ನಲ್ಲಿ ನೆರವೇರಿಸಿ ಎಲ್ಲರಿಗೂ ಮಾದರಿ ಆಗಿದ್ದಾರೆ.

ವಿಶಾಖಪಟ್ಟಣ ಮೆಟ್ರೋಪಾಲಿಟನ್ ರೀಜನ್ ಡೆವಲಪ್‌ಮೆಂಟ್ ಅಥಾರಿಟಿ (ವಿಎಂಆರ್ಡಿಎ) ಉಸ್ತುವಾರಿ ವಹಿಸಿಕೊಂಡಿರುವ ಪಟ್ನಾಲಾ ಬಸಂತ್ ಕುಮಾರ್, ತಮ್ಮ ಮಗನ ಮದುವೆಗೆ ಕೇವಲ 36 ಸಾವಿರ ರೂ. ಖರ್ಚು ಮಾ‌ಡಿದ್ದಾರೆ. ಪಟ್ನಾಲಾ ಬಸಂತ್ ಕುಮಾರ್ ಮಗ ಅಭಿನವ್ ಆಂಧ್ರ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ವೈಜಾಗ್ ಮೂಲದ ವೃತ್ತಿಯಲ್ಲಿ ವೈದ್ಯರಾಗಿರುವ ಲಾವಣ್ಯ ಎಂಬುವವರನ್ನು ವಿವಾಹವಾಗಿದ್ದಾರೆ. ನಿನ್ನೆ ನಡೆದ ಈ ವಿವಾಹ ಸಮಾರಂಭದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಪಾಲರಾದ ಇ.ಎಸ್.ಎಲ್. ನರಸಿಂಹನ್ ಪಾಲ್ಗೊಂಡು ನವದಂಪತಿಗಳಿಗೆ ಶುಭ ಹಾರೈಸಿದರು.

ಬಸಂತ್ ಕುಮಾರ್ ಈ ಹಿಂದೆ 2017ರಲ್ಲಿ ತಮ್ಮ ಮಗಳ ಮದುವೆಗೆ ಕೇವಲ 16,100 ರೂ ಖರ್ಚು ಮಾಡಿ ಸರಳ ವಿವಾಹಕ್ಕೆ ಪ್ರಶಂಸೆ ಪಡೆದಿದ್ದರು. ಈಗ ಅದೇ ಮಾದರಿಯಲ್ಲಿ ಮಗನ ಮದುವೆಗೆ ಮುಂದಾಗಿದ್ದು, ವಧು- ವರರ ಕುಟುಂಬಸ್ಥರ ಊಟೋಪಚಾರಕ್ಕೆ 18 ಸಾವಿರ ವಿನಿಯೋಗಿಸುತ್ತಿದ್ದಾರೆ.

Leave a Comment