ಧಾರವಾಡ ಜ.22- ಆಂಗ್ಲ ಭಾಷೆ ಹಾಗೂ ರಾಜ್ಯಶಾಸ್ತ್ರ ವಿಷಯವು ಜಾಗತಿಕ ಮಟ್ಟದ ವಿಷಯಗಳಾಗಿವೆ. ಆಂಗ್ಲ ಭಾಷಾ ಶಿಕ್ಷಕರು ಆಂಗ್ಲ ಸಾಹಿತ್ಯವನ್ನು ತಿಳಿದಿರಬೇಕು ಹಾಗೂ ಬೋಧಿಸಬೇಕು. ವಿದ್ಯಾರ್ಥಿಗಳುಆಂಗ್ಲ ಭಾಷೆಯನ್ನು ಆಸಕ್ತಿಯಿಂದ ಕಲಿಯುವಂತೆ ಸ್ಪೂರ್ತಿಸಬೇಕುಎಂದು ನಿವೃತ್ತ ಪ್ರಾಧ್ಯಾಪಕರು ಇ ಎಫಎಲ್‍ಯು, ಹೆಸರಾಂತ ಸರೋದವಾದಕ ಡಾ.ರಾಜೀವತಾರಾನಾಥ ಹೇಳಿದರು. ಅವರುಕಾಲೇಜು ಶಿಕ್ಷಣ ಇಲಾಖೆಯಉನ್ನತ ಶಿಕ್ಷಣ ಅಕಾಡೆಮಿಧಾರವಾಡದಲ್ಲಿಆಂಗ್ಲ ಭಾಷೆ ಮತ್ತುರಾಜ್ಯಶಾಸ್ತ್ರ ವಿಷಯದ ಸಹಾಯಕ ಪ್ರಾಧ್ಯಾಪಕರುಗಳಿಗೆ 21 ದಿನಗಳ ವೃತ್ತಿ ಬುನಾದಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.ಅವರು ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನುಗುರುತಿಸುವ ಮಹತ್ವದಜವಾಬ್ದಾರಿಯಿದೆ.ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸಿಗೆ ಮುಟ್ಟುವಂತೆ ಬೋಧಿಸಬೇಕುಎಂದು ಹೇಳಿದರು.
ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕರಾದ ಪ್ರೊ.ಎಸ್.ಎಂ.ಶಿವಪ್ರಸಾದ ಮಾತನಾಡಿ ಶಿಕ್ಷಕರ ವ್ಯಕ್ತಿತ್ವವು ಸಮಾಜಕ್ಕೆ ಮಾದರಿಯಾಗುವುದಲ್ಲದೆ, ಯಾವಾಗಲೂ ಅತ್ಯುತ್ತಮ ಶಿಕ್ಷಕರಾಗಲು ಪ್ರಯತ್ನಿಸಬೇಕು ಎಂದುಅಧಕ್ಷೀಯ ನುಡಿಯಲ್ಲಿ ಹೇಳಿದರು.ಉನ್ನತ ಶಿಕ್ಷಣ ಅಕಾಡೆಮಿಯ ಜವಾಬ್ದಾರಿಯನ್ನು ತಿಳಿಸಿದರು.
ಅಕಾಡೆಮಿಯ ಡೀನರಾದ ಡಾಅರುಂಧತಿ ಕುಲಕರ್ಣಿಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರುಪಿಸಿದರು.ಡಾ.ಎಚ್. ಬಿ.ನೀಲಗುಂದ ವಂದಿಸಿದರು, ಅಕಾಡೆಮಿಯ ಡೀನರಾದ ಡಾಎ.ಆರ್.ಜಗತಾಪ, ಡಾ.ಆಯ್.ಬಿ.ಸಾತೀಹಾಳ, ಗ್ರಂಥಪಾಲಕರಾದಡಾ.ಮಲ್ಲಿಕಾರ್ಜುನ ಮೂಲಿಮನಿ, ಹಾಗೂ ಅಕಾಡೆಮಿಯ ಸಿಬ್ಬಂದಿ ಹಾಜರಿದ್ದರು.

Leave a Comment