33 ಕೋಟಿ ಜನರಿಂದ ಭಾರತ – ಪಾಕ್ ಪಂದ್ಯ ವೀಕ್ಷಣೆ !

ಲಂಡನ್, ಜೂ. ೧೮- ಇಂದು ಭಾರತ – ಪಾಕ್ ನಡುವೆ ನಡೆದಿರುವ ಛಾಂಪಿಯನ್ಸ್ ಟ್ರೋಫಿ ಫೈನಲ್ಸ್ ಪಂದ್ಯ ಇತಿಹಾಸ ಸೃಷ್ಟಿಸಿದೆ. ಐಸಿಸಿ ಲೆಕ್ಕಾಚಾರದ ಪ್ರಕಾರ ಇಂದಿನ ಪಂದ್ಯವನ್ನು ಸುಮಾರು 32 ಕೋಟಿ 40 ಲಕ್ಷ ಜನ ವೀಕ್ಷಿಸುತ್ತಿದ್ದಾರೆ. ಇದು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿರುವ ಮೂರನೇ ಅತಿ ದೊಡ್ಡ ವೀಕ್ಷಕರ ಸಂಖ್ಯೆ.

ಹಿಂದೆ 2011 ರಲ್ಲಿ ಒಂದು ದಿನದ ವಿಶ್ವ ಕಪ್ ಫೈನಲ್ಸ್ ಪಂದ್ಯ ಭಾರತ – ಶ್ರೀಲಂಕಾ ನಡುವೆ ನಡೆದಾಗ 55 ಕೋಟಿ 80 ಲಕ್ಷ ಜನ ವೀಕ್ಷಿಸಿದ್ದರು. ಇದರ ಹಿಂದೆ ಅದೇ ವರ್ಷ ನಡೆದ ಭಾರತ – ಪಾಕ್ ನಡುವಣ ಸೆಮಿಫೈನಲ್ಸ್ ಪಂದ್ಯವನ್ನು 49 ಕೋಟಿ 50 ಲಕ್ಷ ಜನ ವೀಕ್ಷಿಸಿದ್ದರು.

ಇಂದಿನ ಪಂದ್ಯ ಬಹುತೇಕ ಭಾರತದ ಬ್ಯಾಟ್ಸ್‌ಮನ್‌ಗಳು ಮತ್ತು ಪಾಕಿಸ್ತಾನದ ಬೌಲರ್‌ಗಳು ನಡುವಿನದು ಎಂದು ಕ್ರಿಕೆಟ್ ಪಂಡಿತರು ಈಗಾಗಲೇ ನಿರ್ಧರಿಸಿದ್ದಾರೆ.

ಕೆನ್ಸಿಂಗ್ ಟನ್ ಓವರ್‌ನಲ್ಲಿ ರನ್ ಚೇಸ್ ಮಾಡುವ ತಂಡಕ್ಕೆ ಶೇ. 60 ರಷ್ಟು ಬಾರಿ ಜಯ ಲಭಿಸಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನದ ವೇಗಿ ಜುನೈದ್ ಅವರ 22 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿದ್ದಾರೆ. 3 ಬಾರಿ ಔಟಾಗಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಸೇಡು ತೀರಿಸಿಕೊಳ್ಳುವರೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment