ಅಲ್ ಖೈದಾ ಮುಖ್ಯಸ್ಥನ ಬಲಿ ಪಡೆದ ಅಮೇರಿಕಾ ಸೇನೆ
ಕಾಬೂಲ್, ಅ.೯- ದಕ್ಷಿಣ ಅಫ್ಘಾನಿಸ್ತಾನದ ಅಫ್ಘಾನಿಸ್ತಾನ ಮತ್ತು ಅಮೆರಿಕ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಲ್ ಖೈದಾ ಮುಖ್ಯಸ್ಥ ಆಸಿಮ್ ಓಮರ್ ಸಾವಿಗೀಡಾಗಿದ್ದಾನೆ ಎಂದು ಅಫ್ಘಾನಿಸ್ತಾನ ಮಾಧ್ಯಮಗಳು ಖಚಿತಪಡಿಸಿವೆ. ಸೆಪ್ಟೆಂಬರ್ ೨೩ರಂದು ಅಫ್ಘಾನಿಸ್ತಾನದ ಮುಸಾ ಖಾಲಾ ಎಂಬ ಜಿಲ್ಲೆಯ ಹೆಲ್ಮಾಂಡ್ ಎಂಬ ಪ್ರದೇಶದಲ್ಲಿ ಅಮೆರಿಕ ಮತ್ತು ಅಫ್ಘಾನಿಸ್ತಾನ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆತನನ್ನು ಕೊಲ್ಲಲಾಗಿದ್ದು ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಓಮರ್ ಜೊತೆಗೆ ಇನ್ನೂ ಆರು ಜನ ಮೋಸ್ಟ್ ಬವಾಂಟೆಡ್ ಉಗ್ರರನ್ನು ಕೊಲ್ಲಲಾಗಿದೆ ಎಂದು ಅಫ್ಘನ್ ಸ್ಥಳೀಯ ಪತ್ರಿಕೆಗಳು ವರದಿ ಮಾಡಿದ್ದು ಆ ಆರು ಉಗ್ರರು ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Leave a Comment