ವೈಭವೋಪೇತ ಮಂಗಳೂರು ದಸರಾ ಕಾರ್ಯಕ್ರಮ ನಿನ್ನೆ ಸಂಜೆಯಿಂದ ಅದ್ಧೂರಿ ಆರಂಭಗೊಂಡು ಇಂದು ಮುಂಜಾನೆ ಗಣಪತಿ ಸಹಿತ ನವದುರ್ಗೆಯರ ಮೂರ್ತಿ ವಿಸರ್ಜನೆ ಮೂಲಕ ಮುಕ್ತಾಯ ಕಂಡಿದೆ. ಕುದ್ರೋಳಿ ಕ್ಷೇತ್ರದಿಂದ ಹೊರಟ ದಸರಾ ಮೆರವಣಿಗೆ ಕಣ್ತುಂಬಿಕೊಳ್ಳಲು ಮೆರವಣಿಗೆ ಸಾಗುವ ೯ ಕಿ.ಮೀ. ದೂರದವರೆಗೆ ಲಕ್ಷಾಂತರ ಭಕ್ತರು ಸೇರಿದ್ದರು. ವಿವಿಧ ಟ್ಯಾಬ್ಲೋ, ವೇಷಧಾರಿಗಳು ಜನಾಕರ್ಷಣೆಗೆ ಪಾತ್ರವಾದವು.

Leave a Comment