@fil = I:\09-22\22SM14-S.UXT>\NEWS
ನಾರಾಯಣ ಗುರು ಆದರ್ಶ
ಪಾಲನೆಗೆ ಹರಿಪ್ರಸಾದ್ ಕರೆ
ಬೆಂಗಳೂರು, ಸೆ.೨೨- ಅಸ್ಪೃಶ್ಯತೆಯ ಪಿಡುಗಿನ ವಿರುದ್ಧ ಆಧ್ಯಾತ್ಮಿಕ ಕ್ರಾಂತಿ ಮಾಡಿದ ಸಮಾಜ ಸುಧಾರಕ ನಾರಾಯಣ ಗುರು ಅವರ ಆದರ್ಶಗಳನ್ನು ಯುವ ಜನರು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದರು.
ನಗರ ಪುರಭವನದ ಸಭಾಂಗಣದಲ್ಲಿ ಇಂದು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ ಆಯೋಜಿಸಿದ್ದ, ಶ್ರೀ ನಾರಾಯಣ ಗುರು ಜಯಂತ್ಸೋವ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು- ಎಂದು ತಳವರ್ಗದ ಜನರಿಗೆ ಬೋಧಿಸುವ ಮೂಲಕ ಜನರು ವಿದ್ಯಾವಂತರು, ನೀತಿವಂತರು, ಪ್ರಜ್ಞಾವಂತರಾಗಬೇಕು ಎಂಬ ಉದ್ದೇಶದಿಂದ ನಾರಾಯಣ ಗುರು ಅವರು ಕಾಲ್ನಡಿಗೆಯಲ್ಲಿ ಸಂಚರಿಸಿ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು.
ಮಹಿಳೆಯರನ್ನು ಹೀನಾಯವಾಗಿ ನೋಡುತ್ತಿದ್ದ ಕಾಲದಲ್ಲಿ ಮಹಿಳೆಗೆ ಘನತೆ ದೊರಕಿಸಿಕೊಡಲು ಶ್ರಮಿಸಿದರು’ ಎಂದು ಅಭಿಪ್ರಾಯಪಟ್ಟರು.
ಕಾರ್ಕಳ ಆಶ್ರಮದ ಗುರುಕೃಪಾ ವಿಖ್ಯಾತನಂದ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಮನುಷ್ಯತ್ವವೇ ಜಾತಿ ಎಂದು ತಿಳಿಸಿಕೊಟ್ಟವರು ನಾರಾಯಣ ಗುರು. ಶಾಂತಿ ಸೌಹಾರ್ದತೆಯನ್ನು ಜಗತ್ತಿಗೆ ಸಾರಿದ್ದಾರೆ. ಅವರ ಜೀವನ ಸಂದೇಶ ಪಾಲಿಸುವಲ್ಲಿ ನಾವು ವಿಫಲವಾಗಿದ್ದೇವೆ. ಬಿಲ್ಲವ ಸಮಾಜ ಇಷ್ಟು ಏಳಿಗೆ ಕಾಣಲು ಸಾಧ್ಯವಾಗಿರುವುದು ನಾರಾಯಣ ಗುರುಗಳಿಂದ ಎಂದರು.
೧೯೦೮ರಲ್ಲೇ ಗುರುಗಳು ವಿಶ್ವ ಸ್ಪರ್ಧಾತ್ಮಕವಾಗಿ ಬೆಳೆಯುತ್ತದೆ. ಜಗತ್ತು ಪುಟ್ಟದಾಗುತ್ತದೆ ಎಂದು ಶೈಕ್ಷಣಿಕ ರಂಗಕ್ಕೆ ಹೆಚ್ಚಿನ ಕೊಡುಗೆ ನೀಡಿದರು. ಜಾತಿ ಯಾವುದಾದರೇನು ಮನುಷ್ಯ ಓಳ್ಳೆಯವನಾಗಿರಬೇಕೆಂದು ಗುರುಗಳು ಸಾರಿದ್ದರು ಎಂದು ಅವರು ನುಡಿದರು.
ರಾಜ್ಯಾಧ್ಯಕ್ಷ ಸೈದಪ್ಪ ಕೆ. ಗುತ್ತೇದಾರ ಮಾತನಾಡಿ, ನಾರಾಯಣ ಗುರು ಶೋಷಿತರ ಧ್ವನಿಯಾಗಿ ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಗುರುಗಳ ಬರಹಗಳು ಮಲಯಾಳಂನಲ್ಲಿವೆ. ಇವುಗಳನ್ನು ಇಂಗ್ಲಿಷ್‌ನಲ್ಲಿ ತರಬೇಕು. ಆಗ ವಿಶ್ವ ಮಾನ್ಯವಾಗುತ್ತಿತ್ತು ಎಂದು ಹೇಳಿದರು.

ಜೆಪಿ ನಾರಾಯಣ ಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ್ ಮಾತನಾಡಿ, ನಾರಾಯಣ ಗುರುಗಳು ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ ಶೋಷಿತ ಸಮಾಜ ಸುಧಾರಣೆಗಾಗಿ ಜೀವನವಿಡೀ ಶ್ರಮಿಸಿದ್ದಾರೆ. ಮೌಢ್ಯಗಳ ವಿರುದ್ಧ ಹೋರಾಟ ಮಾಡಿ ಸಮಾಜ ಸುಧಾರಕರಾಗಿ, ಮಾನವತೆಯ ಏಕತೆಗಾಗಿ ಶ್ರಮಿಸಿದ್ದಾರೆ ಎಂದು ನುಡಿದರು.
ಖeಠಿಟಥಿ

Leave a Comment