ಧಾರವಾಡ, ಸೆ 12- ಡಾ. ಮಲ್ಲಿಕಾರ್ಜುನ ಮನ್ಸೂರ ಅವರ ಪುಣ್ಯಸ್ಮರಣೆ ನಿಮಿತ್ತ ಪ್ರತಿವರ್ಷ ಆಯೋಜಿಸಲಾಗುತ್ತಿದ್ದ ಸಂಗೀತೋತ್ಸವನ್ನು ಜಿಲ್ಲೆಯ ನೆರೆಹಾವಳಿ, ಹಾನಿಯಿಂದ ಮುಂದೂಡಲಾಗಿತ್ತು. ಟ್ರಸ್ಟ ಸದಸ್ಯರ ಆಶಯದಂತೆ ಸಂಗೀತೋತ್ಸವವನ್ನು ಮುಂದಿನ ವರ್ಷ ಮತ್ತೆ ಮುಂದುವರೆಸಲಾಗುವುದೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ನಗರದಲ್ಲಿಂದು ಡಾ. ಮಲ್ಲಿಕಾರ್ಜುನ ಮನ್ಸೂರ ಅವರ 27ನೇ ಪುಣ್ಯಸ್ಮರಣೆ ನಿಮಿತ್ತ ಅವರ ಸಮಾದಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಿ.ವಾಯ್.ಎಸ್.ಪಿ. ಶಿವಾನಂದ, ಜೆಸಿ ಟ್ರಸ್ಟ ಸದಸ್ಯ ಶಂಕರ ಕುಂಬಿ, ಕೆಸಿಡಿ ಸಂಗೀತ ಮಹಾವಿದ್ಯಾಲಯದ ಅಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment