ಪಾಕ್‌ಗೆ ಸೇರಿದ ೨ ದೋಣಿ ಜಪ್ತಿ
೨೫ ವಿಎನ್ ೨
ಕಚ್,( ಗುಜರಾತ್), ಆ ೨೫- ಗಡಿಭದ್ರತಾ ಪಡೆ ಕಾರ್ಯಾರಣೆ ನಡೆಸಿ ಪಾಕಿಸ್ತಾನಕ್ಕೆ ಸೇರಿದ ಎರಡು ಮೀನುಗಾರಿಕಾ ದೋಣಿಯನ್ನು ವಶಪಡಿಸಿಕೊಂಡಿದೆ. ಗುಜರಾತ್‌ನ ಕಚ್ ಜಿಲ್ಲೆಯ ಹರ್ಮಾನಿ ನಲ್ಲಾ ಪ್ರದೇಶದಲ್ಲಿ ಈ ದೋಣಿಗಳನ್ನು ಜಪ್ತಿ ಮಾಡಿದೆ.
ಒಂದು ಇಂಜಿನ್ ಇರುವ ಎರಡು ದೋಣಿಗಳನ್ನು ವಶಪಡಿಸಿಕೊಂಡ ಬಳಿಕ ಗಡಿಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧನಾ ಕಾರ್ಯವನ್ನು ತೀವ್ರಗೊಳಿಸಿವೆ. ಆ. ೨೪ ರಂದು ಬೆಳಗ್ಗೆ ೬.೩೦ ರ ಸಮಯದಲ್ಲಿ ಬಿಎಸ್‌ಎಫ್ ಕಾವಲು ಕಾಯುತ್ತಿದ್ದ ಸಂದರ್ಭಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ,
ಈ ಪ್ರದೇಶದಲ್ಲಿ ಶೋಧನಾ ಕಾರ್ಯ ನಡೆಸಿದ ವೇಳೆ ಯಾವುದೇ ಶಂಕಿತ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿಲ್ಲ. ಈ ಸಂಬಂಧ ತನಿಖೆ ಮುಂದವರೆದಿದೆ.

Leave a Comment