30 ರಿಂದ ಮೂರು ದಿನಗಳ ನಾಟಕೋತ್ಸವ

 

ಕಲಬುರಗಿ ಜ 28: ಸಾಣೆಹಳ್ಳಿಯ ಶಿವಕುಮಾರ ಕಲಾ ಸಂಘ  ತಂಡದಿಂದ ಜನವರಿ 30 ರಿಂದ ಫೆಬ್ರವರಿ 1 ರವರೆಗೆ ಮೂರು ದಿನಗಳ ನಾಟಕೋತ್ಸವವನ್ನು ಕಲಬುರಗಿಯ ಸಹಮತ ವೇದಿಕೆ ಆಯೋಜಿಸಿದೆ ಎಂದು ಸಂಚಾಲಕರಾದ ಡಾ.ಶ್ರೀಶೈಲ ಘೂಳಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿದಿನ ಸಂಜೆ 6 ಗಂಟೆಗೆ ನಗರದ ಜಿಲ್ಲಾ ನ್ಯಾಯಾಲಯ ಹತ್ತಿರದ ವಿಶ್ವೇಶ್ವರಯ್ಯ ಭವನದಲ್ಲಿ ನಾಟಕೋತ್ಸವ ನಡೆಯಲಿದೆ.

ಮೊದಲನೆಯ ದಿನ ಜ.30 ರಂದು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ ಮೋಳಿಗೆ ಮಾರಯ್ಯ ನಾಟಕ ( ನಿರ್ದೇಶನ: ಜಗದೀಶ ಆರ್) ನಡೆಯಲಿದ್ದು ಮಾಜಿ ಸಚಿವ ಡಾ ಶರಣಪ್ರಕಾಶ ಪಾಟೀಲ ಅವರುಚಾಲನೆ ನೀಡುವರು.ಜ.31 ರಂದು ಜಿ.ಬಿ ಜೋಶಿ ಅವರು ರಚಿಸಿದ ಕದಡಿದ ನೀರು (ನಿರ್ದೇಶನ:ಜಗದೀಶ ಆರ್) ನಾಟಕವನ್ನು ಹಿರಿಯ ಕಲಾವಿದ ಡಾ ವಿ.ಜಿ ಅಂದಾನಿ ಅವರು ಉದ್ಘಾಟಿಸುವರು. ಫೆ. 1 ರಂದು ನಡೆಯುವ ಡಾ.ನಟರಾಜ ಹುಳಿಯಾರ ರಚಿಸಿದ ಮುಂದಣ ಕಥನ ( ನಿರ್ದೇಶನ: ಮಾಲತೇಶ ಬಡಿಗೇರ)ನಾಟಕಕ್ಕೆ ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಅವರು ಚಾಲನೆ ನೀಡುವರು.ಅನೇಕ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವಾನಂದ ಪಾಟೀಲ, ರವೀಂದ್ರ ಶಾಬಾದಿ,ಸಿದ್ಧರಾಮ ಪ್ಯಾಟಿ ಉಪಸ್ಥಿತರಿದ್ದರು..

Leave a Comment