30 ರಿಂದ ನೀಲೂರಿನಲ್ಲಿ ಪುರಾಣ ಪ್ರಾರಂಭ

 

ಕಲಬುರಗಿ ಜ 28:ಅಫಜಲಪುರ ತಾಲೂಕಿನ ನೀಲೂರ ಗ್ರಾಮದಲ್ಲಿ ಬಂಗಾರ ಜಡೆ ನೀಲಕಂಠೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಜನವರಿ 30 ರಿಂದ ಫೆಬ್ರವರಿ 9 ರವರೆಗೆ ಶಿವಶರಣೆ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ ನಡೆಯಲಿದೆ. ಬಡದಾಳ ತೇರಿನಮಠದ ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಮತ್ತು ಶ್ರೀನಿವಾಸ ಸರಡಗಿಯ ಡಾ.ಅಪ್ಪಾರಾವ ದೇವಿ ಮುತ್ತ್ಯಾ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಗೋಣಿ ರುದ್ರೇಶ್ವರ ಹಿರೇಮಠದ ಧರ್ಮಾಧಿಕಾರಿಗಳಾದ ಶರಣಯ್ಯ ಹಿರೇಮಠ ಸ್ವಾಮಿಗಳು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿದಿನ ರಾತ್ರಿ 8 ಗಂಟೆಗೆ ತಾಳಿಕೋಟೆ ಹಿರೂರ ಗ್ರಾಮದ ಗುರು ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪುರಾಣ ನಡೆಸಿಕೊಡುವರು.ಗೌಡಗಾಂವದ ವೇದಮೂರ್ತಿ ಶಿವರುದ್ರಯ್ಯ ಸ್ವಾಮಿಯವರು ಸಂಗೀತ ಕಾರ್ಯಕ್ರಮ ಮತ್ತು ಜೇರಟಗಿಯ ಶಾಂತಕುಮಾರ ಅವರು ತಬಲಾ ಸಾಥಿ ನೀಡುವರು

ಜ 30 ರಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಪುರಾಣಪ್ರವಚನ ಉದ್ಘಾಟಿಸುವರು.ಫೆ 9 ರಂದು ರಾತ್ರಿ 8 ಗಂಟೆಗೆ ಪುರಾಣ ಮಂಗಲ ನಡೆಯಲಿದೆ.ಫೆ 8 ಮತ್ತು 9 ರಂದು ಪುರಾಣ ಕಾರ್ಯಕ್ರಮದ ನಂತರ ನಗೆಹಬ್ಬ ಮತ್ತು ಜಾದೂ ಕಾರ್ಯಕ್ರಮ ನಡೆಯಲಿವೆ.ವಿವಿಧ ಮಠಾಧೀಶರು ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿನಾಥ ಹಾಳಮಳ್ಳಿ,  ಶರಣಗೌಡ ಪಾಟೀಲ, ಸಾಯಿಬಣ್ಣ,ಮಲ್ಲಿನಾಥ ಭಾಸಗಿ,ವಿಶ್ವನಾಥ ಅಷ್ಟಗಿ ಸೇರಿದಂತೆ ಹಲವರಿದ್ದರು..

Leave a Comment