ಕಲಬುರಗಿ: ಕೊಲ್ಕತ್ತಾದ ಎನ್‍ಆರ್‍ಎಸ್ ಮೆಡಿಕಲ್ ಕಾಲೇಜು ವೈದ್ಯರ ಮೇಲಾದ  ಹಿಂಸಾತ್ಮಕ ಗುಂಪುದಾಳಿಯನ್ನು ಖಂಡಿಸಿ ವೈದ್ಯರ,ವೈದ್ಯಕೀಯ ಸಂಸ್ಥೆಗಳ ರಕ್ಷಣೆಗಾಗಿ ಕಾನೂನು ಜಾರಿಗೆ ಆಗ್ರಹಿಸಿ ಭಾರತೀಯ  ವೈದ್ಯಕೀಯ ಸಂಘ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದು ಇಂದು ಸಂಘದ ಜಿಲ್ಲಾ ಶಾಖೆವತಿಯಿಂದ  ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ಡಾ ವಿಜಯಕುಮಾರ ಕೆ,ಡಾ ಗುರುಲಿಂಗಪ್ಪ ಪಾಟೀಲ, ಡಾ. ಕಿರಣ ದೇಶಮುಖ,ಡಾ.ಎಸ್ ಬಿ ಕಾಮರೆಡ್ಡಿ, ಡಾ ಶಾಂತಾ ಪಾಟೀಲ,ಡಾ ಸಂಜೀವಪಾಟೀಲ,ಡಾ ಸಂತೋಷ ಕಾಮಶೆಟ್ಟಿ, ಡಾ. ವಿಜಯಾನಂದ ಧಾರವಾಡ ,ಡಾ ಮೇಘಾ ಕಮಲಾಪುರಕರ್, ಡಾ.ಗ್ರೀಷ್ಮಾ ಕುಲಕರ್ಣಿ ಸೇರಿದಂತೆ ಸಂಘದ ಪದಾಧಿಕಾರಿಗಳು ಪಾಲ್ಗೊಂಡರು..ಸಂಜೆವಾಣಿ ಚಿತ್ರ..

Leave a Comment