ಭ್ರಷ್ಟ ನೌಕರರನ್ನು ಶಿಕ್ಷಿಸುವ ಅಧಿಕಾರ ಸಿಬ್ಬಂದಿ ಇಲಾಖೆಗೆ

ನವದೆಹಲಿ, ಮೇ ೧೬: ಭ್ರಷ್ಟಾಚಾರ ಎಸಗಿ ಸಿಕ್ಕಿಬಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಶಿಕ್ಷೆಯನ್ನು ನಿರ್ಧರಿಸುವ ಅಥವಾ ಶಿಕ್ಷೆಗೆ ಮಂಜೂರಾತಿ ನೀಡುವ ಅಂತಿಮ ಅಧಿಕಾರವನ್ನ ಇನ್ನುಮುಂದೆ ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (ಡಿಓಪಿಟಿ) ನಿರ್ವಹಿಸಲಿದೆ. ಭ್ರಷ್ಟ ಸಕಾರಿ ನೌಕರರನ್ನು ಶಿಕ್ಷಿಸುವ ಸಂಬಂಧ ಕೇಂದ್ರ ಸರ್ಕಾರದ ಯಾವುದೇ ಇಲಾಖೆಗಳು ಹಾಗೂ ಕೇಂದ್ರ ಗುಪ್ತಚರ ಆಯೋಗದ ನಡುವೆ ಭಿನ್ನಾಭಿಪ್ರಾಯಗಳು ಉದ್ಭವವಾದ ಸಂದರ್ಭದಲ್ಲೂ ಡಿಓಪಿಟಿಯೇ ಮಾರ್ಗದರ್ಶಿ ಸೂತ್ರಗಳನ್ನು ನೀಡಲಿದೆ ಎಂದು ಸರ್ಕಾರದ ಆದೇಶವೊಂದರಲ್ಲಿ ತಿಳಿಸಲಾಗಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-೧೯೮೮ಕ್ಕೆ ಕಳೆದ ವರ್ಷ ಕೆಲವು ಮಾರ್ಪಾಡುಗಳನ್ನು (ತಿದ್ದುಪಡಿ) ಮಾಡಿದ ನಂತರ ಈ ಸರ್ಕಾರಿ ಆದೇಶ ಹೊರಬಿದ್ದಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಸರ್ಕಾರಿ ನೌಕರನೊಬ್ಬನನ್ನು ಶಿಕ್ಷಿಸಲು ಅಗತ್ಯವಾದ ಮಂಜೂರಾತಿ ನೀಡುವ ಸಂಬಂಧ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಈ ತಿದ್ದುಪಡಿ ಕಾಯ್ದೆಯಲ್ಲಿ ಸೂಚಿಸಲಾಗಿದೆ.

 

Leave a Comment