ಮಹಿಳೆಯರನ್ನು ಕಾಡುವ ಸೊಂಟದ ನೋವು

ಸೊಂಟದ ನೋವು ಎಲ್ಲರಿಗೂ ಬರುವಂತಹ ಸಾಮಾನ್ಯ ನೋವಾಗಿದ್ದು ಇದು ಬೆನ್ನಿನ ಕೆಳಭಾಗದಲ್ಲಿ ಅಥವಾ ಸೊಂಟದಲ್ಲಿ ಸ್ವಲ್ಪದಿಂದ ಅತಿಯಾದ ನೋವನ್ನು ಕೊಡಬಹುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಲಂಬಾಗೋ ಎಂದೂ ಸಹ ಕರೆ ಯುತ್ತಾರೆ. ಸೊಂಟದ ನೋವನ್ನು ಅದರ ಇರುವಿಕೆಯ ಸಮಯದ ಆಧಾರದ ಮೇಲೆ ಅಲ್ಪಾವಧಿ, ಉಪ-ಅಲ್ಪಾವಧಿ ಮತ್ತು ಧೀರ್ಘಾವಧಿ, ಹೀಗೆ ಮೂರು ರೀತಿಯಾಗಿ ವಿಂಗಡಿಸಲಾಗಿದೆ.

 1. ಅಲ್ಪಾವಧಿಯ ಸೊಂಟ ನೋವು: ೬ ವಾರದವರೆಗೆ ಇರುತ್ತದೆ.
 2. ಉಪ-ಅಲ್ಪಾವಧಿಯ ಸೊಂಟ ನೋವು: ಇದರಲ್ಲಿ ನೋವು ೬ ವಾರದಿಂದ ೩ ತಿಂಗಳವರೆಗೂ ಇರಬಹುದು.
 3. ದೀರ್ಘಾವಧಿಯ ಸೊಂಟ ನೋವು: ಇದರಲ್ಲಿ ನೋವು ೩ ತಿಂಗಳಿಗಿಂತ ಹೆಚ್ಚು ಇರುವುದು.

ಸೊಂಟದ ನೋವು ಇದ್ದಾಗ ಸ್ನಾಯುಗಳಲ್ಲಿ ಸೆಳೆತ ಮತ್ತು ನೋವು ಉಂಟಾಗಿ ಸೊಂಟ ಹಿಡಿದುಕೊಂಡಂತೆ ಅಥವಾ ಬಿಗಿದಂತೆ ಆಗಿ ರೋಗಿಯು ತನ್ನ ದೇಹದ ನಿಲುವನ್ನು ಬದಲಿಸುತ್ತಾನೆ.

ಲಂಬಾಗೋ ಎಂದರೇನು?

ಲಂಬಾಗೋ, ಸೊಂಟದ ನೋವಿನ ವೈದ್ಯಕೀಯ ಹೆಸರಾಗಿದ್ದು ಇದು ಸಾಮಾನ್ಯ ಒತ್ತಡದಿಂದ ಹಿಡಿದು ಗೆಡ್ಡೆಗಳ ಕಾರಣದಿಂದ ಬರಬಹುದಾಗಿದೆ. ಇದರಲ್ಲಿ ಸೊಂಟ ಅಥವಾ ಬೆನ್ನಿನ ಕೆಳಭಾಗದಲ್ಲಿ ನೋವಿರುತ್ತದೆ.ಸೊಂಟದ ಹತ್ತಿರ ಒಟ್ಟಾರೆ ೫ ಬೆನ್ನೆಲುಬುಗಳಿದ್ದು ನಮ್ಮ ದೇಹದ ಸಂಪೂರ್ಣ ಮೇಲ್ಭಾಗದ ಭಾರವನ್ನು ಹೊರುತ್ತದೆ, ಹಾಗಾಗಿ ಇದರ ಮೇಲೆ ಹೆಚ್ಚು ಒತ್ತಡವಿದ್ದು ಬೇಗ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಸೊಂಟದ ನೋವಿಗೆ ಕಾರಣಗಳೇನು?

ಸೊಂಟದ ನೋವಿನಲ್ಲಿ ಹಲವು ಹಂತಗಳಿವೆ. ಸೊಂಟದ ನೋವನ್ನು ಅದರ ಇರುವಿಕೆಯ ಸಮಯದ ಆಧಾರದ ಮೇಲೆ ೩ ವಿಧಗಳಾಗಿ ವಿಂಗಡಿಸಲಾಗಿದೆ: ಅಲ್ಪಾವಧಿ, ಉಪ-ಅಲ್ಪಾವಧಿ ಮತ್ತು ಧೀರ್ಘಾವಧಿ. ಇದಕ್ಕೆ ಹಲವಾರು ಕಾರಣಗಳಿದ್ದು, ನಿಖರ ಕಾರಣ ಹೇಳುವುದು ಅಸಾಧ್ಯವಾಗಿದೆ. ಕೇವಲ ೫ ಪ್ರತಿಶತ ಪ್ರಕರಣಗಳು ಧೀರ್ಘಾವಧಿಗೆ ತಿರುಗಿ ಅದನ್ನು ವಿವಿಧ ಚಿಕಿತ್ಸಾ ವಿಧಾನವನ್ನು ಅನುಸರಿಸಿ ಸಂಪೂರ್ಣವಾಗಿ ಗುಣಪಡಿಸಬಹುದು.

ಪ್ರಮುಖ ಕಾರಣಗಳೆಂದರೆ:

 1. ಹರ್ನಿಯಾ ಅಥವಾ ಬೇರೆ ಅಸ್ಥಿ ರಂಧ್ರತೆ ಕಾಯಿಲೆಗಳಿಂದಾಗುವ ಬೆನ್ನೆಲು ಬಿನ ಹಾನಿ. ಕ್ರೀಡಾಪಟುಗಳಲ್ಲೂ ಸಹ ಅಧಿಕ ಒತ್ತಡ ಮತ್ತು ಪರಸ್ಪರ ಮೂಳೆಗಳ ಉಜ್ಜುವಿಕೆಯಿಂದಾಗಿ ಈ ಸಮಸ್ಯೆಯನ್ನು ಕಾಣಬಹುದು.
 2. ತಪ್ಪು ಭಂಗಿಯಲ್ಲಿ ಕೆಲಸ ಮಾಡುವುದು ಅಥವಾ ಅತಿಯಾದ ತೂಕವೂ ಸಹ ಬೆನ್ನೆಲುಬುಗಳ ಸವೆತಕ್ಕೆ ಕಾರಣವಾಗಬಹುದು.
 3. ಕೀಲುಗಳಿಗೆ ಹಾನಿ – ಹಲವು ವಿಧದ ಸಂಧಿವಾತದಿಂದ ಕೂಡ ಸೊಂಟದಲ್ಲಿ ನೋವು ಮತ್ತು ಬಿಗಿತ ಹೆಚ್ಚಾಗಬಹುದು.
 4. ಮೂಳೆಗಳಿಗೆ ಹಾನಿ – ಅಸ್ಥಿರಂಧ್ರತೆಯು ಮೂಳೆಮುರಿದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಮತ್ತೆ ಕೆಲವೊಮ್ಮೆಅನುವಂಶಿಕವಾಗಿ ಅಥವಾ ಗಾಯದಿಂದ ಮೂಳೆಗಳು ಒಂದರ ಮೇಲೊಂದು ಬೆಳೆದು ಅಸ್ತಿ ಪಂಜರಕ್ಕೆ ಮತ್ತು ಮೂಳೆಗಳಿಗೆ ಹಾನಿಯನ್ನುಂಟುಮಾಡುತ್ತದೆ.ಸ್ತ್ರೀರೋಗ ಸಮಸ್ಯೆಗಳು – ಮಹಿಳೆಯರ ಮುಟ್ಟಿನ ಸಮಯದ್ಲಲೂ ಸಹ ಸೊಂಟದ ನೋವು ಕಾಣಿಸಿಕೊಳ್ಳುತ್ತದೆ.

ಸೊಂಟದ ನೋವಿನ ಲಕ್ಷಣಗಳೇನು?

ರೋಗಿಗಳು ಬೆಳೆಗ್ಗೆ ಏಳುವಾಗ ಸ್ನಾಯು ಸೆಳೆತ ಮತ್ತು ಸೊಂಟದ ಬಿಗಿತವನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ಪಾದ ಮತ್ತು ಕಾಲುಗಳಲ್ಲಿ ಇರುವ ಜುಮ್ಮೆನಿಸುವಿಕೆ ಸೊಂಟದ ಸುತ್ತಲೂ ಇರುತ್ತದೆ ಮತ್ತು ನೋವುಗಳಿಗೆ ದೇಹವು ಪ್ರತಿಕ್ರಿಯಿಸಿದಂತೆ ರೋಗಿಗಳು ಬೆನ್ನುಮೂಳೆಯ ವಕ್ರತೆಯನ್ನು ಬೆಳೆಸಿಕೊಳ್ಳಬಹುದು. ನಿಧಾನವಾಗಿ ಅಥವಾ ಇದ್ದಕ್ಕಿದ್ದ ಹಾಗೆ ಬರುವ ನೋವಿನ ಜೊತೆ ಬಿಗಿತ ಕೂಡ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ನೋವು ಕೆಲವೊಮ್ಮೆ ಒಂದೇ ಚಿಕ್ಕ ಜಾಗದಲ್ಲಿದ್ದರೆ ಕೆಲವೊಮ್ಮೆ ಪೂರ್ತಿ ಸೊಂಟ ಮತ್ತು ಕಾಲುಗಳ ಮೇಲೆ ಪರಿಣಾಮ ಮಾಡಬಹುದು. ಇನ್ನು ಕೆಲವೊಮ್ಮೆ ಒಂದೇ ಸಮನೆ ನೋವಿದ್ದರೆ, ಕೆಲವು ಸಲ ಭಂಗಿಗಳನ್ನು ಬದಲಾಯಿಸಿದಾಗ ಮಾತ್ರ ನೋವು ಕಾಣಿಸಿಕೊಳ್ಳುತ್ತದೆ. ಕೆಮ್ಮಿದಾಗ, ಸೀನಿದಾಗ, ಬಗ್ಗಿದಾಗ ಮತ್ತು ತಿರುಗಿದಾಗಲೂ ಸಹ ನೋವು ಜಾಸ್ತಿಯಾಗಬಹುದು.

ಇದು ಯಾವಾಗ ಗಂಭೀರ ಸಮಸ್ಯೆಯಾಗಬಹುದು?

 • ಮಲ ಮತ್ತು ಮೂತ್ರ ವಿಸರ್ಜನೆ ನಿಯಂತ್ರಣಕ್ಕೆ ಬರದೇ ಇರುವುದು
 • ನಡೆಯುವುದಕ್ಕೆ ಅಥವಾ ನಿಂತುಕೊಳ್ಳುವುದಕ್ಕೆ ಆಗದೆ ಇರುವುದು.
 • ಲೈಂಗಿಕ ಅಥವಾ ಗುದದ್ವಾರ ಜಾಗದಲ್ಲಿ ಜೋಮು ಅನಿಸುವುದು

ಕೆಲವೊಮ್ಮೆ ನೋವಿನಿಂದ ಮಾತ್ರ ಕಾಲು ಸುಸ್ತಾಗುವುದಿಲ್ಲ, ಸೊಂಟದ ನೋವಿದ್ದರೆ ಕೂಡ ಕಾಲುಗಳು ಸುಸ್ತಾಗಬಹುದು. ಅಂತಹವರು ಕಾಲು ಎತ್ತಲು, ಕುರ್ಚಿಯಿಂದ ಏಳುವುದಕ್ಕಾಗದೆ ಇರುವುದು, ಮೆಟ್ಟಿಲು ಹತ್ತಲು ಆಗದೆ ಇರುವುದು ಅಥವಾ ಕಾಲು ಮಡಚಲು ಆಗದೆ ಇದ್ದರೂ ಸಹ ವೈದ್ಯರನ್ನು ಭೇಟಿಯಾಗಬೇಕು.

ನಿಮಗೇನಾದರೂ ಹೊಸ ರೀತಿಯ ವಿಪರೀತ ನೋವು ಕಾಣಿಸಿಕೊಂಡರೆ ಮತ್ತು ಇದು ಯಾವುದೇ ಒತ್ತಡ ಅಥವಾ ಚಲನೆ ವಲನೆಗಳಿಗೆ ಸಮಬಂಧಪಟ್ಟಿಲ್ಲವೆಂದಾದರೆ ಮತ್ತು ಇದರಲ್ಲಿ ಜ್ವರ, ಮೂತ್ರದಲ್ಲಿ ಉರಿ ಮತ್ತು ನೋವುಂಟಾಗುವುದು ಇದ್ದರೆ ಅದು ಮೂತ್ರನಾಳದ ಸೋಂಕಾಗಿರಬಹುದು.

ನಿಮ್ಮ ದೀರ್ಘಾವಧಿಯ ಸೊಂಟ ನೋವು ಇದ್ದಕ್ಕಿದ್ದ ಹಾಗೆ ಜಾಸ್ತಿಯಾಗುವುದು, ಯಾವುದಾದರೂ ಹೊಸ ಕೆಲಸ ಅಥವಾ ಚಟುವಟಿಕೆಯಿಂದಲೂ ಸಹ ಆಗಿರಬಹುದು.

ರೋಗ ನಿರ್ಣಯ:

ಸಾಧಾರಣವಾಗಿ ನೀವು ತಿಳಿಸಿದ ಲಕ್ಷಣಗಳ ವಿವರಗಳಿಂದ ನಿಮ್ಮ ವೈದ್ಯರು ನಿಮ್ಮ ಸಮಸ್ಯೆಯನ್ನು ಪತ್ತೆಮಾಡುವರು, ಆದರೆ ಕೆಲವೊಮ್ಮೆ ತೀವ್ರವಾದ ಸಮಸ್ಯೆಗಳಿದ್ದರೆ ಕ್ಷ-ಕಿರಣ, ಸ್ಕ್ಯಾನ್ ಅಥವಾ ರಕ್ತ ಪರೀಕ್ಷೆಗಳು ಸಹ ಮಾಡಿಸಬೇಕಾಗುತ್ತದೆ

ಗುಣಮುಖವಾಗಲು ಬೇಕಾದ ಸಮಯ

ಅಪರೂಪಕೊಮ್ಮೆ ಗಂಭೀರ ಕಾಯಿಲೆಗಳಿಂದ ಬರುವ ಬೆನ್ನು ನೋವು ಕೆಲವೇ ದಿನಗಳಲ್ಲಿ ಸರಿಹೋಗುತ್ತದೆ. ಆದರೆ ಇದು ಕೀಲುಗಳ ಪರಸ್ಪರ ಉಜ್ಜುವಿಕೆಯಿಂದಾದರೆ ಇದನ್ನು ಔಷಧಿಗಳಿಂದ ಸರಿಪಡಿಸಬೇಕು. ಅಲ್ಪಾವಧಿಯ ತೀವ್ರ ಸ್ವರೂಪದ ನೋವಿದ್ದರೆ ಒಂದೆರಡು ವಾರಗಳಲ್ಲಿ ತನ್ನತಾನೇ ಸರಿಹೋಗುತ್ತದೆ. ಒಟ್ಟಾರೆ ಯಾವುದೇ ರೀತಿಯ ನೋವು, ಬಂದ ಕೂಡಲೇ ವೈದ್ಯರನ್ನು ಬೇಟಿ ಮಾಡುವುದು ಅತ್ಯವಶ್ಯಕ.

ತಡೆಗಟ್ಟುವಿಕೆ ಸಲಹೆಗಳು

 • ನಿಮ್ಮ ದೇಹ ಮತ್ತು ಬೆನ್ನೆಲುಬನ್ನು ಆರೋಗ್ಯಕರವಾಗಿ ಮತ್ತು ಪ್ರಬಲ ವಾಗಿರಿಸಿಕೊಳ್ಳಲು ವ್ಯಾಯಾಮ ಮಾಡಿ
 • ಸೊಂಟ ನೋವು ಬಾರದ ಹಾಗೆ ಭಾರದ ವಸ್ತು ಎತ್ತುವುದನ್ನು ಕಲಿತುಕೊಳ್ಳಿ.
 • ಒಂದೇ ರೀತಿ, ಭಂಗಿಯಲ್ಲಿ ಮಲಗುವ ಬದಲು ಬೇರೆ ವಿಧದಲ್ಲಿ ಮಲಗಲು ಪ್ರಯತ್ನಿಸಿ.
 • ಅತಿ ಎತ್ತರ ಹಿಮ್ಮಡಿಯಿರುವ ಚಪ್ಪಲಿಗಳನ್ನು ಧರಿಸಬೇಡಿ
 • ನಿಮ್ಮ ಬೆನ್ನು ಮೂಳೆ ಮತ್ತು ಕಾಲುಗಳ ಮೇಲೆ ಹೆಚ್ಚು ಒತ್ತಡ ಬೀಳದೆ ಇರಲು ದೇಹದ ತೂಕದ ಮೇಲೆ ಗಮನವಿಡಿ
 • ಧೂಮಪಾನ ಮೂಳೆಯ ಸವೆತ ಮತ್ತು ನೋವಿನ ಸೂಕ್ಷ್ಮತೆ ಹೆಚ್ಚು ಮಾಡುವುದರಿಂದ ಧೂಮಪಾನ ಮಾಡುವುದನ್ನು ಬಿಡಿ.
 • ಮೂಳೆ ಮುರಿತ ಮತ್ತು ಸೊಂಟದ ನೋವು ತರುವ ಅಸ್ಥಿರಂಧ್ರತೆಯನ್ನು ತಪ್ಪಿಸಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೆಚ್ಚಿರುವಂತಹ ಆಹಾರ ಸೇವನೆ ಮಾಡಿ.
 • ಮನೆ, ಕೆಲಸ ಮತ್ತು ನಿಮ್ಮ ಜೀವನದಲ್ಲಿನ ಒತ್ತಡವನ್ನು ನಿಭಾಯಿಸುವುದನ್ನು ಕಲಿಯಿರಿ.

ಡಾಕ್ಟರ್‌ನ್ನು ಯಾವಾಗ ಕಾಣಬೇಕು

ಕೆಳಕಂಡ ಯಾವುದೇ ಲಕ್ಷಣಗಳು ಕಂಡರೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ ಕೆಲವು ದಿನಗಳಲ್ಲಿ ನೋವು ಹೋಗದೆ ಇದ್ದರೆ ಮತ್ತು ನೀವು ಮಲಗಿದ್ದಾಗ ಅಥವಾ ವಿಶ್ರಾಂತಿಯಲ್ಲಿದ್ದರೂ ನೋವು ಬರುವುದು ನಿಂತುಕೊಳ್ಳಲು ಅಥವಾ ನಡೆದಾಡಲು ಕಷ್ಟವಾಗುವುದು ಮತ್ತು ಕಾಲುಗಳಲ್ಲಿ ಸುಸ್ತು ಮತ್ತು ಜೋಮು ಇರುವುದು.

ಮಲ ಮತ್ತು ಮೂತ್ರ ವಿಸರ್ಜನೆ ನಿಯಂತ್ರಣಕ್ಕೆ ಬರದೇ ಇರುವುದು .

Leave a Comment