24ಕ್ಕೆ ಓ ಮುದ್ದು ಹೂವೇ ಅಲ್ಬಮ್ ಸಾಂಗ್ ಬಿಡುಗಡೆ

ಹುಬ್ಬಳ್ಳಿ, ಸೆ 22- ಕನ್ನಡ ಕೋಗಿಲೆ ಸೆಕೆಂಡ್ ವಿನ್ನರ್ ಖಾಸಿಂ ಅಲಿ ಹಾಡಿರುವ ಓ ಮುದ್ದು ಹೂವೆ ಅಲ್ಬಂ ಸಾಂಗ್ ಇದೇ 24ರಂದು ಹಾವೇರಿಯ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಅಲ್ಬಮ್ ಸಾಂಗ್ ಸಂಗೀತ ಸಂಯೋಜಕ ವಿಕ್ರಮ ಕುಮಠ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಕರ್ನಾಟಕದ ಜನತೆಗೆ ಹಾಗೂ ಸಂಗೀತ ಪ್ರೀಯರಿಗೆ ಮನರಂಜನೆ ನೀಡುವ ಸದುದ್ದೇಶದಿಂದ ಆಲ್ಬಂ ಸಾಂಗ್ ರಚಿಸಲಾಗಿದೆ.ಸುಮಧುರ ಗೀತೆಗಳಿಂದ ಜನತೆಯನ್ನು ರಂಜಿಸುವ ಪ್ರಯತ್ನವನ್ನು ಸಂಗೀತದ ಮೂಲಕ ಮಾಡುತ್ತಿದ್ದೇವೆ ಎಂದರು.ಸಂಗೀತ ಸಂಯೋಜನೆ ಹಾಗೂ ವಿಡಿಯೋ ಡೈರೆಕ್ಷನ್ ಕೂಡ ನಾನೆ ಮಾಡಿದ್ದೇನೆ.ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಪೂರಕ ವೇದಿಕೆ ಕಲ್ಪಿಸುವ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಅವರು ಹೇಳಿದರು. ಆಲ್ಬಂ ಸಾಂಗನಲ್ಲಿ ವಾಣಿಶ್ರೀ ನಾಯಕ, ವಿನಾಯಕ,ಎಂ.ರಾಹುಲ್ ಸೇರಿದಂತೆ ದೊಡ್ಡ ತಾರಗಣವೇ ಅಭಿನಯಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಾಣಿಶ್ರೀ ನಾಯಕ, ವಿನಾಯಕ, ಎಂ.ರಾಹುಲ್ ಸೇರಿದಂತೆ ಇತರರು ಇದ್ದರು.

Leave a Comment