22 ರಂದು ಕೆಪಿಆರ್‍ಎಸ್ ಪ್ರತಿಭಟನೆ

 

ಕಲಬುರಗಿ ಜು 18: ಕೇಂದ್ರ ಸರ್ಕಾರ ಬರಗಾಲ ಘೋಷಣೆಗೆ ಹಳೆಯ ಕಾಲದ ನಿಧಾನಗತಿಯ ಪದ್ಧತಿ ಕೈ ಬಿಟ್ಟು ಅತ್ಯಾಧುನಿಕ ತಂತ್ರಜ್ಞಾನ ಬಳಸಲು ಆಗ್ರಹಿಸಿ ಮತ್ತು ಅರಣ್ಯ ಹಕ್ಕುಕಾಯಿದೆ ದುರ್ಬಲಗೊಳಿಸುವ ಉದ್ದೇಶ ವಿರೋಧಿಸಿ  ಕರ್ನಾಟಕ ಪ್ರಾಂತ ರೈತ ಸಂಘ ( ಕೆಪಿಆರ್‍ಎಸ್)ಜುಲೈ 22 ರಂದು ಮಧ್ಯಾಹ್ನ 12 ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ.2

ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಗಂಭೀರವಾಗಿದ್ದು ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ನೀಡಬೇಕು. ಜಾನುವಾರುಗಳಿಗೆ ಮೇವು ಒದಗಿಸಬೇಕು ಎಂದು ಕೆಪಿಆರ್‍ಎಸ್ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಇಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. 1927 ರ ಭಾರತೀಯ ಅರಣ್ಯ ಕಾಯಿದೆಗೆ ತಿದ್ದುಪಡಿ ಅಂಗೀಕರಿಸುವ  ಮೂಲಕ ಕೇಂದ್ರ ಸರ್ಕಾರ ಅರಣ್ಯ ಹಾಗೂ ಖನಿಜ ಸಂಪತ್ತನ್ನು ಲೂಟಿ ಮಾಡಲು ಕಾರ್ಪೋರೇಟ್ ಕಂಪನಿಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ದೂರಿದರು.ಜುಲೈ 11 ರಿಂದ 14 ರವರೆಗೆ ಹೈದರಾಬಾದಿನಲ್ಲಿ ನಡೆದ ಅಖಿಲ ಭಾರತ ಕಿಸಾನ್ ಕೌನ್ಸಿಲ್ ಕೇಂದ್ರದ ಈ ನಡೆಯನ್ನು ತೀವ್ರವಾಗಿ ಖಂಡಿಸಿದೆ. ಬಹುಕಾಲದಿಂದ ಅರಣ್ಯದಲ್ಲಿ ಉಳುಮೆ ಮಾಡಿಕೊಂಡಿರುವ ಅರಣ್ಯವಾಸಿಗಳಲ್ಲದವರಿಗೂ ಭೂಮಿ ಹಕ್ಕು ದೊರಕಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಶಾಂತಪ್ಪ ಪಾಟೀಲ,ಶರಣಬಸಪ್ಪ ಮಮಶೆಟ್ಟಿ,ಅಶೋಕ ಮ್ಯಾಗೇರಿ,ಪಾಂಡುರಂಗ ಮಾವಿನ ಉಪಸ್ಥಿತರಿದ್ದರು..

Leave a Comment