ಹೃದಯದ ಆರೋಗ್ಯಕ್ಕೆ ಟಿಪ್ಸ್

ವ್ಯಾಯಮ ಹೀಗಿರಲಿ

ವಾರದಲ್ಲಿ ಕನಿಷ್ಠ ೧೫೦ ರಿಂದ ೩೦೦ ನಿಮಿಷ ವಾಕಿಂಗ್ ಮಾಡಿದರೆ ಸಾಕು. ನಡೆಯುವಾಗ ಮಾತನಾಡಬೇಡಿ. ಗಮನವೆಲ್ಲ ನಡಿಗೆಯ ಮೇಲೇ ಇರಲಿ. ಮೈ ಪೂರ್ತಿ ಬೆವರಬೇಕು, ಏದುಸಿರುವ ಬರುವಂತಾಗಬೇಕು. ನಿಧಾನವಾಗಿ ಓಡುವುದು ಉತ್ತಮ. ವಾಕಿಂಗ್ ನಿತ್ಯದ ದಿನಚರಿಯಾಗಿರಲಿ.

1-h2

ಉಪ್ಪು ಕಡಿಮೆ ಇರಲಿ

ಆಧುನಿಕ ಜೀವನಶೈಲಿಯಲ್ಲಿ ಶೇಖರಿಸಿದ ಆಹಾರ ಹೆಚ್ಚಾಗಿ ಬಳಸುತ್ತೇವೆ. ಆಹಾರ ಕೆಡದಂತೆ ಇರಬೇಕಾದರೆ ಹೆಚ್ಚು ಉಪ್ಪು ಅಥವಾ ಸಕ್ಕರೆ ಹಾಕಬೇಕು. ಚಿಪ್ಸ್, ಹುರಿದ ಕಡಲೇಬೀಜ, ಕುರುಕುರು ತಿಂಡಿಗಳು, ಸಿಹಿತಿಂಡಿಗಳು, ಹೆಚ್ಚು ಉಪ್ಪು ಮತ್ತು ಸಕ್ಕರೆಯಿಂದ ಕೂಡಿವೆ. ಇದು ಹೃದಯದ ಆರೋಗ್ಯಕ್ಕೆ ಮಾರಕ. ಬೆಂಗಳೂರಿನಲ್ಲಿ ದೇಶದ ಎಲ್ಲಾ ಮೂಲೆಯ ಭಿನ್ನ ಸಂಸ್ಕೃತಿಯ ಜನ ಇದ್ದಾರೆ. ಎಲ್ಲಾ ಊರಿನ ತಿನಿಸುಗಳ ಹೋಟೆಲುಗಳೂ ಇಲ್ಲಿವೆ.

ಎಲ್ಲಾ ಹಬ್ಬಗಳನ್ನೂ ಆಚರಿಸುತ್ತೇವೆ. ಹಬ್ಬದ ದಿನ ಸಿಹಿ ಭಕ್ಷ್ಯ ಸೇವಿಸುತ್ತೇವೆ. ಬೇಕರಿಯಿಂದ ಕೊಂಡೊಯ್ಯುವ ಸಿಹಿ ತಿಂಡಿಗಳಲ್ಲಿ ಸಾಂದ್ರೀಕೃತ (ಕಾನ್ಸಂಟ್ರೇಟೆಡ್) ಸಕ್ಕರೆ ಪ್ರಮಾಣ ಹೆಚ್ಚು ಇರುತ್ತದೆ. ಹಾಗಾಗಿ ಒಂದು ತುಂಡು ಸ್ವೀಟ್ ತಿಂದರೂ ಹೆಚ್ಚು ಸಕ್ಕರೆ ಅಂಶ ದೇಹವನ್ನು ಸೇರುತ್ತದೆ.

ವಾಕಿಂಗ್ ಇರಲಿ

ವಾಕಿಂಗ್ ಬಾಲ್ಯದಿಂದಲೇ ಅಭ್ಯಾಸವಾದರೆ ಅದೊಂದು ಜೀವನ ಕ್ರಮವಾಗಿ ಬಿಡುತ್ತದೆ. ಆಗ ಯಾವ ಸಮಸ್ಯೆಯೂ ಬಾರದು. ಶಾಲೆಗಳಲ್ಲಿ ಶಿಕ್ಷಕರು ಈ ಬಗ್ಗೆ ಜಾಗೃತಿ ಮೂಡಿಸಬೇಕು. ಒಮ್ಮೆ ಹೃದಯದ ಕಾಯಿಲೆ ಬಂದರೆ ಅದಕ್ಕೆ ವ್ಯಯವಾಗುವ ಹಣ, ಸಮಯ ದೊಡ್ಡದು. ಅದು ಬಾರದ ರೀತಿಯಲ್ಲಿ ದಿನಚರಿ ರೂಪಿಸಿಕೊಂಡರೆ ಹಣದ ಖರ್ಚಿಲ್ಲದೆ ಆರೋಗ್ಯವಾಗಿವಂತರಾಗಬಹುದು.

heartattack-2-650x450-soo1

ಲಕ್ಷಣಗಳು

ಹೃದಯಾಘಾತದ ಚಿಹ್ನೆ ಮತ್ತು ಲಕ್ಷಣಗಳಲ್ಲಿ ವ್ಯತ್ಯಾಸಗಳಿರುತ್ತವೆ. ಒಮ್ಮೊಮ್ಮೆ ಈ ಲಕ್ಷಣ ತೀವ್ರವಾಗಿದ್ದರೆ, ಕೆಲವೊಮ್ಮೆ ಲಘುವಾಗಿರುತ್ತವೆ.

ಕೆಲವು ಸಂದರ್ಭದಲ್ಲಿ ಯಾವುದೇ ಲಕ್ಷಣವಿಲ್ಲದೇ ಅಥವಾ ಲಘು ಲಕ್ಷಣಗಳೊಂದಿಗೆ ಸಂಭವಿಸುವ ಹೃದಯಾಘಾತ ತೀವ್ರ ಎದೆನೋವಿನಂಥ ಮಾರಣಾಂತಿಕ ಪರಿಣಾಮಗಳಷ್ಟೇ ಅಪಾಯ ತಂದೊಡ್ಡುತ್ತವೆ.

ಬೋರಲಾಗಿ ಮಲಗಬೇಡಿ!

ಬೋರಲಾಗಿ ಮಲಗುವವರಲ್ಲೂ ಹೃದಯಾಘಾತ ಸಂಭವ ಜಾಸ್ತಿ! ಒತ್ತಡದ ಜೀವನ, ದೇಹದಲ್ಲಿ ಹೆಚ್ಚಿನ ಕೊಬ್ಬಿನಂಶ ಹೃದಯಾಘಾತಕ್ಕೆ ಪ್ರಮುಖ ಕೊಡುಗೆ ನೀಡುತ್ತಿವೆ.

ಕೂತಲ್ಲೆ ಕೆಲಸ, ವಿಶ್ರಾಂತಿ ರಹಿತ ದುಡಿಮೆ, ದೈಹಿಕ ಚಟುವಟಿಕೆ ಇಲ್ಲದ ಜಡ ಜೀವನಶೈಲಿ, ಧೂಮಪಾನ, ಮದ್ಯಪಾನ ಹವ್ಯಾಸಗಳು ಹೃದಯಾಘಾತ ಹೆಚ್ಚಲು ಪ್ರಮುಖ ಕಾರಣವಾಗಿವೆ.

ನೀವು ಸೇವಿಸುವ ಊಟದ ಮೇಲೆ ನಿಯಂತ್ರಣ ಇರಲಿ, ಹಣ್ಣು, ಹಂಪಲು, ಹಸಿರು ತರಕಾರಿ, ಹಸಿಕಾಳು ಮುಂತಾದ ಕೊಬ್ಬು ರಹಿತ ಪದಾರ್ಥಗಳ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮ.

ನಿಯಮಿತವಾಗಿ ದೇಹತೂಕ ತಪಾಸಣೆ ಹಾಗೂ ಪ್ರತಿನಿತ್ಯ ೪೫ ನಿಮಿಷಗಳ ವೇಗದ ನಡಿಗೆ ಹೃದಯ ಸಂಬಂಧಿ ರೋಗಗಳನ್ನು ನಿಯಂತ್ರಿಸುತ್ತದೆ.
ಕಾಳಜಿ ಕೊಬ್ಬಿನ ಆಹಾರ ಪದಾರ್ಥಗಳಿಂದ ದೂರ ಇರಿ. ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತನ್ನಿ.

ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಿ. ಧೂಮಪಾನ, ಮದ್ಯಪಾನ ತ್ಯಜಿಸಿ. ತೂಕ ಇಳಿಸಿ. ನಿತ್ಯ ವ್ಯಾಯಾಮ ತಪ್ಪಿಸದಿರಿ. ಹೆಚ್ಚು ಹಣ್ಣು, ಹಂಪಲು ಮತ್ತು ಹಸಿರು ತರಕಾರಿ ಸೇವಿಸಿ.

ಎಚ್ಚರ ವಹಿಸಿ

ಎದೆನೋವು, ಹೃದಯ ಭಾರವಾಗುವಿಕೆ ಉಸಿರಾಟದಲ್ಲಿ ತೊಂದರೆ ಮಾನಸಿಕ ಕ್ಷೋಬೆ ಅಥವಾ ಒತ್ತಡದಂಥ ಲಕ್ಷಣಗಳು ಗೋಚರಿ ಸಿದರೆ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರ ಗಮನಕ್ಕೆ ತರಬೇಕು ಹೆಗಲು, ಭುಜ ಅಥವಾ ದವಡೆ ನೋವು ಪದೇ ಪದೇ ಕಾಡುವ ಅಸ್ವಸ್ಥತೆ ಕಡಿಮೆ ನಾಡಿಮಿಡಿತ ಅತಿಯಾಗಿ ಬೆವರುವಿಕೆ ತಲೆ ಸುತ್ತುವಿಕೆ ಹೃದಯಾಘಾತವಾದಾಗ ಏನು ಮಾಡಬೇಕು

ಆರೋಗ್ಯದ ಬಗ್ಗೆ ಎಂದೂ ಮನುಷ್ಯ ನಿರ್ಲಕ್ಷ್ಯ ಮಾಡಬಾರದು. ಅದರಲ್ಲೂ ಹೃದಯಾಘಾತದಂತಹ ಅಪಾಯಕಾರಿ ರೋಗಗಳ ಬಗ್ಗೆ ಸದಾ ಎಚ್ಚರದಿಂದಿರಬೇಕಾಗುತ್ತದೆ. ಹೃದಯಾಘಾತವಾದ ಐದು ನಿಮಿಷದೊಳಗೆ ಈ ಕೆಲಸ ಮಾಡಿದ್ರೆ ಮನುಷ್ಯ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ.

ಹೃದಯಾಘಾತವಾದ ವ್ಯಕ್ತಿಯನ್ನು ನೇರವಾಗಿ ಮಲಗಿಸಿ.ಬಟ್ಟೆಗಳನ್ನು ಸಡಿಲಗೊಳಿಸಿ. ಇದು ಸ್ವಲ್ಪ ಆರಾಮ ನೀಡುತ್ತದೆ.

ರೋಗಿಯನ್ನು ಜನರು ಸುತ್ತುವರಿಯದಂತೆ ನೋಡಿ ಕೊಳ್ಳಿ. ಸಾಧ್ಯವಾದಷ್ಟು ಆಮ್ಲಜನಕ ಸಿಗುವಂತೆ ಮಾಡಿ. ಹೃದಯಾಘಾತವಾದ ಕೆಲ ವ್ಯಕ್ತಿಗಳಿಗೆ ವಾಂತಿ ಬಂದಂತೆ ಭಾಸವಾಗುತ್ತದೆ. ಪಕ್ಕಕ್ಕೆ ತಿರುಗಿ ವಾಂತಿ ಮಾಡಲು ಹೇಳಿ. ಹೀಗೆ ಮಾಡಿದ್ರೆ ಶ್ವಾಸಕೋಶದಲ್ಲಿ ವಾಂತಿ ತುಂಬುವುದು ತಪ್ಪುತ್ತದೆ.

ರೋಗಿಯ ಕತ್ತಿನ ಭಾಗಕ್ಕೆ ಕೈ ಹಾಕಿ ನಾಡಿ ಬಡಿತವನ್ನು ಪರೀಕ್ಷಿಸಿ. ನಾಡಿ ಬಡಿತ ೬೦-೭೦ರಷ್ಟಿದ್ದಲ್ಲಿ ರೋಗಿಯ ರಕ್ತದೊತ್ತಡ ಕಡಿಮೆಯಾಗ್ತಿದೆ ಎಂದೇ ಅರ್ಥ. ನಾಡಿ ಬಡಿತ ಇನ್ನೂ ಕಡಿಮೆಯಾಗ್ತಿದ್ದರೆ ಆತನ ಕಾಲುಗಳನ್ನು ಮೇಲಕ್ಕೆತ್ತಿ. ಇದರಿಂದಾಗಿ ಕಾಲಿಗಾಗ್ತಿರುವ ರಕ್ತದ ಪೂರೈಕೆ ಹೃದಯದ ಕಡೆ ಬರುತ್ತದೆ.

Leave a Comment