ಮಂಗಳದ ಅಂಗಳದಲ್ಲಿ ರೋವರ್ ಅವಘಡ

ಉತ್ತನೂರು ವೆಂಕಟೇಶ್

ಮಂಗಳಗ್ರಹ ಶೋಧನೆಯಲ್ಲಿ ತೊಡಗಿರುವ ಕ್ಯೂರಿ ಯಾಸಿಟಿ ಮಾರ್ಸ್ ರೋವರ್ ಸಣ್ಣ ಅವಘಡಕ್ಕೆ ಒಳಗಾಗಿದೆ. ಸೆ.15 ರಂದು ರಾತ್ರಿ ರೋವರ್ ತಾನು ಕಾರ್ಯಾಚರಣೆಯಲ್ಲಿ ತೊಡಗಿರುವ ಗಾಲೆ ಕುಳಿ ಪ್ರದೇಶದಲ್ಲಿಯ ಕೊರಕಲಿಗೆ ಜಾರಿದೆ. ಈ ಕಾರಣದಿಂದಾಗಿ  ತನ್ನ ಶೋಧನಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಿದೆ ಎಂದು  ಕ್ಯೂರಿಯಾಸಿಟಿ ಯೋಜನೆಯ  ವಿಜ್ಞಾನಿ ಅಶ್ವಿನಿ ವಾಸವಾಡ ಹೇಳಿದ್ದಾರೆ.

ತಾನು ಸಾಗಬೇಕಾದ ಮಾರ್ಗ, ಅಪಾಯದ ಸಂದರ್ಭಗಳನ್ನು ಊಹಿಸುವ ತನ್ನ ಸೂಕ್ತ ಇರುವ ಯಾವುದೇ ಅಡೆ ತಡೆಯನ್ನು ಗುರುತಿಸುವ ಸುರಕ್ಷಿತ ಪಥದಲ್ಲಿ ಸಾಗಲು ಸೂಚಿಸುವ ಉಪಕರಣಗಳು ತನ್ನಲ್ಲಿದ್ದರೂ ಮೊನ್ನೆ ಸೆ.15 ರಂದು ರಾತ್ರಿ ಕ್ಯೂರಿಯಾ ಸಿಟಿ ರೋವರ್ ಎಡವಿ ಬಿದ್ದಿದೆ.  ಇದರಿಂದಾಗಿ ಇದರ ಶೋಧನಾ ಕಾರ್ಯಾ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು. ಭೂ ಕೇಂದ್ರಕ್ಕೆ ಇದರಿಂದ ರವಾನೆಯಾಗುವ ಮಾಹಿತಿಯಲ್ಲಿ ಕೊರತೆಯಾಗಿದೆ. ಇದು ತಾತ್ಕಾಲಿಕ ಅಡಚಣೆ ಮಾತ್ರ. ಇದನ್ನು ಸರಿಪಡಿಸಿದ ನಂತರ ರೋವರ್ ಎಂದಿನಂತೆ ಕಾರ್ಯಾಚರಣೆ ನಡೆಸಲಿದೆ ಎಂದು ನಾಸಾ ಹೇಳಿದೆ.

ಸಣ್ಣ ಅವಘಡದಿಂದಾಗಿ ರೋವರ್‌ನಿಂದ ಭೂ ಕೇಂದ್ರಕ್ಕೆ ರವಾನೆಯಾಗುವ ಮಾಹಿತಿಯಲ್ಲಿ ಕೊರತೆಯಾಗಿದ್ದು, ಲೋಪವನ್ನು ಸರಿಪಡಿಸಿದ ನಂತರ ರೋವರ್ ಎಂದಿ ನಂತೆ ತನ್ನ ಕಾರ್ಯದಲ್ಲಿ ತೊಡಗಲಿದೆ ಎಂದು ನಾಸಾ ಮೂಲಗಳು ಹೇಳಿವೆ .

23vichar2

ರೋವರ್ ೨೦೧೨ ಆಗಸ್ಟ್ ನಿಂದಲೆ ಗ್ರಹದ ಮೇಲ್ಬಾಗದ ಗಾಲೆ ಕುಳಿ ಪ್ರದೇಶದಲ್ಲಿ  ತನ್ನ ನಿಗಧಿತ ಶೋಧನಾ ಕಾರ್ಯದಲ್ಲಿ ತೊಡಗಿದೆ. ಈವರೆಗಿನ ತನ್ನ ಆರೂ ಚಿಲ್ಲರೆ ವರ್ಷದ ಕಾರ್ಯಾಚರಣೆಯಲ್ಲಿ ಮಂಗಳಗ್ರಹ ಕುರಿತಂತೆ ಸಾಕಷ್ಟು ಮಾಹಿತಿಯನ್ನು ರವಾನಿಸಿದೆ. ಗಾಲೆ ಕುಳಿ ಪ್ರದೇಶದಲ್ಲಿ ಕೋಟ್ಯಾಂತರ ವರ್ಷಗಳ ಹಿಂದೆ ಸರೋವರ ಹರಿದಿರುವ ಕುರುಹುಗಳು ಲಭಿಸಿರುವ ಕಾರಣ ಕೂರಿಯಾಸಿಟಿ ಆ ಭಾಗದಲ್ಲಿಯೇ ತನ್ನ ಶೋಧನಾ ಕಾರ್ಯದಲ್ಲಿ  ತೊಡಗಿದೆ.

ಮಂಗಳಗ್ರಹ ಶೋಧನೆಯಲ್ಲಿ ಇದು ನಾಸಾದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ನಾಸ ನವೆಂಬರ್ ೨೬ ರಂದು ಕೇಪ್ ಕನೆವರಾಲ್ ವಾಯುನಲೆಯಿಂದ  ಅಟ್ಲಾಸ್-ವಿ ರಾಕೆಟ್ ಮೂಲಕ ಕ್ಯೂರಿಯಾಸಿಟಿ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತ್ತು. ಅದು ೮ ತಿಂಗಳ ಕಾಲ  ೩೫ ಕೋಟಿ ಮೈಲುಗಳ  ಯಾನ ನಡೆಸಿ ಆಗಸ್ಟ್ ೨೦೧೨ರಲ್ಲಿ ನಿಗಧಿತ ಇಳಿಯುವ ತಾಣವಾದವಾದ ಗೇಲ್ ಕುಳಿಯಲ್ಲಿ ಇಳಿದು  ಶೋಧನಾಕಾರ್ಯದಲ್ಲಿ ತೊಡಗಿದೆ.

ಕ್ಯೂರಿಯಾಸಿಟಿ ಎಂಬ ಅಡ್ಡ ಹೆಸರಿನ ಮಾರ್‍ಸ್  ಸೈನ್ಸ್ ಲ್ಯಾಬೋರೇಟರಿ ೬೮೭ ದಿನಗಳಕಾಲ ಮಂಗಳನ ಅಂಗಳದಲ್ಲಿ  ಸುಮಾರು ೧೨ ಮೈಲುಗಲಷ್ಟು ದೂರ ಕ್ರಮಿಸಿ ಸಂಗ್ರಹಿಸಿದ ಮಾಹಿತಿಯನ್ನು  ಭೂ ಕೇಂದ್ರಕ್ಕೆ ರವಾನಿಸಲಿದೆ.  ಮಂಗಳನಲ್ಲಿ ನೀರಿನ ಅಂಶವಿದೆಯೇ,  ಜೀವಿಗಳಿಗೆ ವಾಸಯೋಗ್ಯ ವಾತಾವರಣವಿದೆಯೆ ಅಥವಾ ಕೋಟ್ಯಾಂತರ ವರ್ಷಗಳ ಹಿಂದೆ ಜೀವ ಯೋಗ್ಯ ವಾತಾವರಣ ಇದ್ದಿರಬಹುದೇ ಎಂಬುದರ ಶೋಧನೆಯೇ ಈ ಯಾನದ ಮುಖ್ಯ ಗುರಿ. ಮಂಗಳನಲ್ಲಿ ವಾತಾವರಣ ಅದರ ರಚನಾ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸುವ  ರೋವರ್ ನಲ್ಲಿ ಎಲ್ಲಾ ಅತ್ಯಾಧುನಿಕ ಸಾಧನ ಸಲಕರಣೆಗಳಿವೆ.

ಸಂಪೂರ್ಣವಾಗಿ ಪರಮಾಣು ಶಕ್ತಿ ಚಾಲಿತವಾಗಿರುವ ಕ್ಯೂರಿಯಾಸಿಟಿ ರೋವರ್‌ಗೆ ಚಾಲನಾಶಕ್ತಿ ನೀಡಲು ೧೦೦ ಪೌಂಡ್ ತೂಕದ ಪರಮಾಣು ಜನರೇಟರ್ ಇದರಲ್ಲಿದೆ. ಆರು ಚಕ್ರಗಳನ್ನು ಹೊಂದಿರುವ ರೋವರ್‌ನಲ್ಲಿ ತಾನು ಚಲಿಸುವ ಮಾರ್ಗದಲ್ಲಿಯ ಅಡೆ ತಡೆಗಳನ್ನು ಗುರುತಿಸಬಲ್ಲ, ಸುರಕ್ಷಿತ ಪಥದಲ್ಲಿ ಸಾಗಲು ಸೂಚಿಸುವ ಉಪಕರಣಗಳಿವೆ.

Leave a Comment