21 ರಿಂದ ರಂಗಪಯಣ ನಾಟಕೋತ್ಸವ

( ನಮ್ಮ ಪ್ರತಿನಿಧಿಯಿಂದ)
ಕಲಬುರಗಿ ಮೇ 19 : ಮೈಸೂರಿನ ರಂಗಾಯಣ ಕಲಾವಿದರು ಪ್ರಸ್ತುತ ಪಡಿಸುವ ಎರಡು ದಿನಗಳ ರಂಗ ಪಯಣ ನಾಟಕೋತ್ಸವವನ್ನು ಕಲಬುರಗಿ ರಂಗಾಯಣ ಹಮ್ಮಿಕೊಂಡಿದೆ.
ಮೇ 21 ಮತ್ತು 22 ರಂದು ಸಂಜೆ 6 ಗಂಟೆಗೆ ಡಾ ಎಸ್ ಎಂ ಪಂಡಿತರಂಗ ಮಂದಿರದಲ್ಲಿ ನಾಟಕೋತ್ಸವ ನಡೆಯಲಿದೆ ಎಂದು ಕಲಬುರಗಿ ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
21 ರಂದು ಗುಲಬರ್ಗ ವಿವಿ ಕುಲಸಚಿವ ಡಾ ದಯಾನಂದ ಅಗಸರ ಅವರು ನಾಟಕೋತ್ಸವ ಉದ್ಘಾಟಿಸುವರು. ಅಂದು ಚಂದ್ರಕಾಂತ ಕುಸನೂರ ಅವರು ರಚಿಸಿದ, ಸಂತೋಷ ಕುಸನೂರು ಅವರ ನಿರ್ದೇಶನದ ದಿಂಡಿ ನಾಟಕ ಪ್ರದರ್ಶನವಿದೆ.
22 ರಂದು ಸಂಜೆ 6 ಗಂಟೆಗೆ ಬಸಲಿಂಗಯ್ಯ ಹಿರೇಮಠ ಅವರು ರಚಿಸಿದ ವಿಶ್ವೇಶ್ವರಿ ಹಿರೇಮಠ ಅವರ ನಿರ್ದೇಶನದ ಸಂಗ್ಯಾ ಬಾಳ್ಯಾ ನಾಟಕವನ್ನು ಕಲಾವಿದರು ಅಭಿನಯಿಸುವರು ಎಂದರು
ಸುದ್ದಿಗೋಷ್ಠಿಯಲ್ಲಿ ರಂಗಪಯಣದ ಸಂಚಾಲಕ ಸಂತೋಷ ಕುಸನೂರ ಮತ್ತು ಸಂದೀಪ ಬಿ ಉಪಸ್ಥಿತರಿದ್ದರು

Leave a Comment