ಪ್ಲಾಸ್ಟಿಕ್ ಮುಕ್ತ ಸಾಗರ ಕನಸು ಸಾಕಾರ

ಸಾಗರ ಜೀವರಾಶಿಗೆ ಅತಿ ಗಂಢಾಂತರವಾಗಿರುವ ಪ್ಲಾಸ್ಟಿಕ್ ಕಸವನ್ನು ಹೊರ ತೆಗೆಯುವ ಭಾರಿ ಸವಾಲಿನ ಸಾಹಸಕ್ಕೆ ನಿನ್ನೆ (ಸೆ. 8) ಚಾಲನೆ ಸಿಕ್ಕಿದೆ.

ಭೂಮಿಯ ಮೇಲಿನ ಕಸದ ಸಮಸ್ಯೆಯಂತೆಯೇ ಸಾಗರ ಮತ್ತು ಬಾಹ್ಯಾಕಾಶದ ಕಸವೂ ಜಾಗತಿಕ ಸಮಸ್ಯೆಯಾಗಿದೆ.
ಸಾಗರದಲ್ಲಿ ತೇಲಾಡುವ ಅಪಾರ ಪ್ರಮಾಣದ ಪ್ಲಾಸ್ಟಿಕ್ ಕಸವನ್ನು ಹೊರ ತೆಗೆಯುವ ಬೃಹತ್ ಯೋಜನೆ ನಿನ್ನೆ (ಸೆ. 8) ಕಾರ್ಯಾರಂಭಿಸಿದೆ.
ಈ ಯೋಜನೆಯ ರೂವಾರಿ ಡಚ್ ಸಂಶೋಧಕ 24 ವರ್ಷದ ಬೊಯಾನ್ ಸ್ಲಾಟ್. `ತಾನು 16 ವರ್ಷದವರಾಗಿದ್ದಾಗ ಗ್ರೀಸ್ ಸಮುದ್ರದಲ್ಲಿ ತಾನು ಕೈಗೊಂಡ ಯಾನ. ಅಲ್ಲಿ ಕಂಡ ಕಸವೇ ಸಾಗರ ಶುದ್ಧೀಕರಣಗೊಳಿಸುವ ತನ್ನ ಕನಸಿನ ಯೋಜನೆಗೆ ಪ್ರೇರಣೆಯಾಯಿತು’ ಎಂದು ಬೊಯಾನ್ ಸ್ಲಾಟ್ ಹೇಳಿದ್ದಾರೆ.

`ದೊಡ್ಡ ಸವಾಲಿಗೆ ಸಮನಾಗಿ ದೊಡ್ಡ ಪರಿಹಾರವೂ ಇರುತ್ತದೆ’ ಎನ್ನುವ ಗಾದೆಯಂತೆ ಸಾಗರದಲ್ಲಿ ತೇಲಾಡುತ್ತಿರುವ ಅಗಾಧ ಪ್ರಮಾಣದ ಪ್ಲಾಸ್ಟಿಕ್ ಕಸವನ್ನು ಹೊರ ತೆಗೆಯುವ ಸಾಹಸ ಯೋಜನೆ ಕಾರ್ಯಾರಂಭಗೊಂಡಿದೆ.

9vichara

ಈ ಯೋಜನೆಯ ರೂವಾರಿ ನೆದರ್‌ಲ್ಯಾಂಡ್ ಮೂಲದ 24 ವರ್ಷದ ಬೊಯಾನ್ ಸ್ಲಾಟ್ ಆಗಿದ್ದಾರೆ. ಸಾಗರವನ್ನು ಶುದ್ಧೀಕರಿಸುವ ಅವರ ಕನಸಿನ ಯೋಜನೆ ಕೊನೆಗೂ ಕಾರ್ಯಾರಂಭಗೊಂಡಿದೆ. `ತಾನು 16 ವರ್ಷದ ಯುವಕನಾಗಿದ್ದಾಗ ಗ್ರೀಸ್ ಸಮುದ್ರದಲ್ಲಿ ಯಾನ ಮಾಡಿದ ಸಂದರ್ಭದಲ್ಲಿ ತಾನು ಕಂಡ ಕಸ ಮತ್ತು ಜೀವರಾಶಿಯೇ ತಮ್ಮ ಸಾಗರ ಶುದ್ಧೀಕರಣ ಸಾಹಸಕ್ಕೆ ಪ್ರೇರಣೆಯಾಯಿತು’ ಎಂದು  24 ವರ್ಷದ ಬೊಯಾನ್ ಸ್ಲಾಟ್ ಹೇಳಿದ್ದಾರೆ.

ವಿಶ್ವದ ಸಾಗರಗಳನ್ನು ಪ್ಲಾಸ್ಟಿಕ್ ಕಸದಿಂದ ಮುಕ್ತಗೊಳಿಸಲು ಅನುಸರಿಸಬೇಕಾದ ಮಾರ್ಗ, ಅದರಲ್ಲಿಯ ತಾಂತ್ರಿಕತೆಯ ಬಳಕೆ ಇತ್ಯಾದಿ ಕುರಿತಂತೆ 6 ವರ್ಷಗಳ ಕಾಲ ಅಧ್ಯಯನ ಮತ್ತು ಅಭಿವೃದ್ಧಿ ನಡೆಸಿದ್ದ ಬೊಯಾನ್ ಸ್ಲಾಟ್, ಕೊನೆಗೂ ಕಸಸಂಗ್ರಹಣೆ ಯಂತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಫಲರಾಗಿದ್ದಾರೆ.

ಸಾಗರದಲ್ಲಿ ಬಲೆ ಬೀಸಿ ಮೀನು ಹಿಡಿಯುವಂತೆ `ಯು’ ಆಕಾರದ ಬಲೆಯ ಸಾಗರವನ್ನು ಬಳಸಿ ಮೊದಲು ಕಸವನ್ನು ಸಂಗ್ರಹಿಸುವುದು, ಸಂಗ್ರಹವಾದ ಕಸವನ್ನು ಹಡಗಿನ ಮೂಲಕ ಹೊರ ಸಾಗಿಸಿ, ಅದನ್ನು ಸಂಸ್ಕರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಸ್ಯಾನ್‌ಫ್ರಾನ್ಸಿಸ್ಕೊ ಕೊಲ್ಲಿಯ ಗೋಲ್ಡನ್ ಸೇತುವೆ ಬಳಿ ನಿನ್ನೆ (ಸೆ. 8) ಯೋಜನಾ ಕಾರ್ಯವನ್ನು ಆರಂಭಿಸಲಾಗಿದೆ. `ಸಾಗರದ ಮೇಲ್ಭಾಗದಲ್ಲಿ 5 ತ್ರಿಳಿಯನ್ ಟನ್‌ನಷ್ಟು ಪ್ಲಾಸ್ಟಿಕ್ ಕಸ ತೇಲಾಡುತ್ತಿದೆ. ಇದು ಸಾಗರ ಜೀವಿಗಳನ್ನು ನಿಧಾನಲಾಗಿ ಕೊಲ್ಲುತ್ತದೆ. ಹೀಗೆ, ಸಾಗರ ಜೀವಿಗಳ ನಾಶದಿಂದ ವಾರ್ಷಿಕವಾಗಿ 13ಶತಕೋಟಿ ಡಾಲರ್‌ನಷ್ಟು ಮೊತ್ತ ನಷ್ಟವಾಗುತ್ತಿದೆ ಎಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

9vichara3

ಕ್ಯಾಲಿಫೋರ್ನಿಯಾ ಮತ್ತು ಹವಾಯಿ ದ್ವೀಪಗಳ ನಡುವಿನ 600,000 ಚದರಡಿ ಸಾಗರ ಭಾಗದಲ್ಲಿ ಶುದ್ಧೀಕಾರ್ಯಾಚರಣೆ ಪ್ರಾರಂಭವಾಗಿದೆ. ಪ್ರತಿವರ್ಷ 50 ಟನ್ ಕಸವನ್ನು ಸಂಗ್ರಹಿಸುವುದು, ಯೋಜನೆಯ ಸದ್ಯದ ಗುರಿಯಾಗಿದ್ದು, ಶುದ್ಧೀಕರಣ ಸಾಗರ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ವಾರ್ಷಿಕವಾಗಿ 14 ಸಾವಿರ ಟನ್ ಕಸ ಹೊರ ಹಾಕುವ ಅಂದಾಜನ್ನು ಈ ಯೋಜನೆ ಹೊಂದಿದೆ.

Leave a Comment