ನ್ಯೂಯಾರ್ಕ್.ಸೆ.೮- ವಿಶ್ವದ ನಂಬರ್ ಟೆನಿಸ್ ಆಟಗಾರ ರಫೆಲ್ ನಡಾಲ್ ತೀವ್ರ ಮೊಣಕಾಲು ನೋವಿನಿಂದಾಗಿ ಯುಎಸ್ ಓಪನ್ ಸೆಮಿ ಫೈನಲ್ಸ್ ಆಟದಿಂದ ಹಿಂದೆ ಸರಿದಿದ್ದಾರೆ.
ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ ಸೆಮಿ ಫೈನಲ್ಸ್‌ನಲ್ಲಿ ಅರ್ಜೆಂಟಿನಾದ ಜೌನ್ ಮಾರ್ಟಿನ್ ಡೆಲ್ ಪೊಟ್ರೋ ವಿರುದ್ಧ ನಡೆಯಬೇಕಿದ್ದ ಪಂದ್ಯ ವೇಳೆ ಗಂಭೀರ ಮೊಣಕಾಲು ನೋವಿನಿಂದಾಗಿ ಆಟದಿಂದ ಹಿಂದೆ ಸರಿದಿದ್ದಾರೆ.
ಈ ಮೂಲಕ ಅರ್ಜೆಂಟಿನಾದ ಜೌನ್ ಮಾರ್ಟಿನ್ ಡೆಲ್ ಪೊಟ್ರೋ ನೇರವಾಗಿ ಫೈನಲ್ಸ್‌ಗೆ ಪ್ರವೇಶ ಪಡೆದಿದ್ದಾರೆ.
ನಡಾಲ್ ಹಿಂದಿನ ಹತ್ತಾರು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ದಾಖಲೆಗಳನ್ನು ನಿರ್ಮಿಸಿದ್ದಾರೆ. ಹಿಂದೆ ಅರ್ಜೆಂಟಿನಾ ವಿರುದ್ಧ ನಡೆದ ಪಂದ್ಯದಲ್ಲೇ ನಡಾಲ್ ೧೧-೫ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಅವರ ದೈಹಿಕ ಸಮಸ್ಯೆ ಅವರ ಶಕ್ತಿಯನ್ನು ಕುಂದಿಸುತ್ತಾ , ಕ್ರೀಡಾ ಬದುಕನ್ನು ಕಸಿಯುತ್ತಿದೆ ಎಂಬ ಅಭಿಪ್ರಾಯ ಕ್ರೀಡಾ ಪ್ರೇಮಿಗಳಿಂದ ವ್ಯಕ್ತವಾಗಿದೆ.

Leave a Comment