2050ಕ್ಕೆ ಮಾಯವಾಗಲಿರುವ ಜಕಾರ್ತಾ

ಜಕಾರ್ತಾ (ಇಂಡೋನೇಷ್ಯಾ), ಆ. ೧೩- ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ 10 ಲಕ್ಷ ಜನ ವಾಸಿಸುತ್ತಿದ್ದಾರೆ. ಆದರೆ 2050ರ ಹೊತ್ತಿಗೆ ಇಡೀ ನಗರ ಸಮುದ್ರದ ನೀರಿನಲ್ಲಿ ಮುಳುಗಿಹೋಗಲಿದೆ ಎಂದು ಸಂಶೋಧಕರು ಹೇಳಿದ್ದು, ಇಂದು ಜಕಾರ್ತಾ ಜಗತ್ತಿನ ಅತ್ಯಂತ ವೇಗವಾಗಿ ಮುಳುಗುತ್ತಿರುವ ನಗರ ಎಂದೂ ಹೇಳಿದ್ದಾರೆ.

ತೇವದ ಭೂಮಿಯಲ್ಲಿರುವ ಈ ನಗರಕ್ಕೆ ಜಾವಾ ಸಮುದ್ರದ ಅಲೆಗಳು ಅಪ್ಪಳಿಸುತ್ತಲೇ ಇವೆ. ಈ ಕಾರಣದಿಂದಲೇ ಜಕಾರ್ತಾದಲ್ಲಿ ಆಗಾಗ ಪ್ರವಾಹ ಪರಿಸ್ಥಿತಿ ಉದ್ಭವಿಸಿದರೆ ಅಚ್ಚರಿಯೇನಿಲ್ಲ. ಈಗ ಇದು ಮತ್ತಷ್ಟು ಉಲ್ಬಣಗೊಂಡಿದೆ. ಪ್ರವಾಹ ಮಾತ್ರವಲ್ಲ, ಇಡೀ ನಗರವೇ ಮಾಯವಾಗುವ ದಿನ ದೂರವಿಲ್ಲ!.

‘ಇದು ತಮಾಷೆಯ ಮಾತಲ್ಲ’ ಎಂದು ಕಳೆದ 20 ವರ್ಷಗಳಿಂದ ಬಾಂಡುಂಗ್ ತಾಂತ್ರಿಕ ಸಂಸ್ಥೆಯಲ್ಲಿ ಜಕಾರ್ತಾದ ಭೂ ಸ್ವಭಾವದ ಅಧ್ಯಯನ ನಡೆಸಿರುವ ವಿಜ್ಞಾನಿ ಹೆರಿ ಆಂಡ್ರಿಯನ್ ಹೇಳಿದ್ದಾರೆ.

ನಮ್ಮ ಮಾದರಿಗಳನ್ನು ಪರಿಶೀಲಿಸಿದರೆ, 2050ರ ಹೊತ್ತಿಗೆ ಜಕಾರ್ತಾದ ಶೇ. 95 ರಷ್ಟು ಭೂ ಪ್ರದೇಶ ಮುಳುಗಡೆಯಾಗಿರುತ್ತದೆ ಎಂದೂ ಅವರು ಹೇಳಿದ್ದಾರೆ.

ಇದು ಈಗಾಗಲೇ ಆರಂಭವಾಗಿದೆ. ಉತ್ತರ ಜಕಾರ್ತಾ ಕಳೆದ 10 ವರ್ಷಗಳಲ್ಲಿ 2.5 ಮೀಟರ್‌ಗಳಷ್ಟು ಮುಳುಗಿದೆ. ಕೆಲವೆಡೆ ವರ್ಷಕ್ಕೆ 25 ಸೆಂ.ಮೀ. ಗಳಷ್ಟು ಮುಳುಗುತ್ತಿದೆ. ಇದು ಜಾಗತಿಕ ಮುಳುಗಡೆ ಪ್ರಕ್ರಿಯೆಗಿಂತ ದುಪ್ಪಟ್ಟು.

Leave a Comment