ಎಂಟು ಸಿನಿಮಾ ತೆರೆಗೆ ಈ ವಾರ

ಎಂಟು ಸಿನಿಮಾ ತೆರೆಗೆ ಈ ವಾರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಲೈಫ್ ಜೊತೆ ಒಂದ್ ಸೆಲ್ಫಿ, ಒಂದಲ್ಲ ಎರಡಲ್ಲ ಸೇರಿದಂತೆ ಒಟ್ಟು ಎಂಟು ಚಿತ್ರಗಳು ತೆರೆಗೆ ಬಂದಿವೆ.

ಲೈಫ್ ಜೊತೆ ಒಂದು ಸೆಲ್ಫಿ

ಹೇಳಿ ಕೇಳಿ ಇದು ಸೆಲ್ಫಿ ಯುಗ. ಯುವಕರಿಗಷ್ಟೇ ಅಚ್ಚುಮೆಚ್ಚಿನ ಸೆಲ್ಫಿ ಅಲ್ಲ ಹಿರಿಯರು ಕೂಡಾ ಇದಕ್ಕೆ ಮರುಳಾಗಿಬಿಟ್ಟಿದ್ದಾರೆ. ಈಗಿನ ಟ್ರೆಂಡ್ ಜೊತೆ ಜೊತೆಯಲ್ಲಿ ಹೋಗುವುದು ದಿನಕರ್ ತೂಗುದೀಪ ಅವರಿಗೆ ಹೊಸದೇನಲ್ಲ. ದಿನಕರ್ ಅವರ ನಿರ್ದೇಶನದ ನಾಲ್ಕನೇ ಸಿನಿಮಾ ಇದು. ಈ ಹಿಂದೆ ಅವರು ಜೊತೆ ಜೊತೆಯಲಿ, ಸಾರಥಿ, ನವಗ್ರಹ ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ.

ಪ್ರೀತಿ ಸ್ನೇಹಗಳ ಸುತ್ತ ಹಣೆಯಲ್ಪಟ್ಟ ಸೂಕ್ಷ್ಮ ಕಥಾ ಹಂದರಕ್ಕೆ ನಿರ್ದೇಶಕ ದಿನಕರ್ ತೂಗುದೀಪ ಮುದ್ದಾದ ಪತ್ರವರ್ಗವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಹಿರಿಯ ನಟಿ ಸುಧಾರಾಣಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಇದ್ದಾರೆ. ಸಾಧು ಕೋಕಿಲ, ಚಿತ್ರ ಶೆಣೈ, ದೀಪಕ್ ಶೆಟ್ಟಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್‌ಕುಮಾರ್, ಮಾದಕ ಬೆಡಗಿ ಹರಿಪ್ರಿಯಾ ಹಾಗೂ ಸುಂದರ ಯುವಕ ಪ್ರಜ್ವಲ್ ದೇವರಾಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿ ಹರಿಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣವಿದೆ.

sarkari-_102

ಮೇ1

ಹಾರರ್, ಥ್ರಿಲ್ಲರ್ ಮತ್ತು ಕುತೂಹಲ ಮೂಡಿಸುವ ಮೇ೧ ಈ ವಾರ ಬಿಡುಗಡೆಗೊಂಡಿದೆ.ಸಿನೆಮಾದ ಕತೆಯಲ್ಲಿ ನಾಯಕ ಸ್ಟಾರ್ ಆಗಿದ್ದು, ಅಭಿಮಾನದ ಅತಿರೇಕ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಹೇಳಲಾಗಿದೆ.ನಿರ್ದೇಶನ, ಸಂಕಲನ ಜೊತಗೆ ಮೊದಲ ಬಾರಿ ಹಾಡಿಗೆ ಕೋರಿಯೋಗ್ರಾಫ್ ಮಾಡಿದ್ದು ಖುಷಿ ತಂದಿದೆ ಎಂದು ನಾಗೇಂದ್ರಅರಸ್ ಹೇಳಿಕೊಂಡರು. ಒಂದು ಹಂತದಲ್ಲಿ ಕೆಲಸ ಇಲ್ಲದೆ ಇರುವಾಗ ಹಠದ ಮೇಲೆ ಕತೆ ಬರೆದೆ. ಫ್ಯಾನ್ ಎಂದು ಟೈಟಲ್ ಇಡಲು ಯೋಚಿಸಲಾಗಿತ್ತು.  ಅಷ್ಟರಲ್ಲೆ  ಅದು ನೊಂದಣಿಯಾಗಿತ್ತು.

ಮೇ ೧ ನನ್ನ ಹುಟ್ಟುಹಬ್ಬವಾಗಿದ್ದರಿಂದ ಅದನ್ನೆ ಇಡಲಾಯಿತು. ಆ ದಿನದಂದೆ ಘಟನೆ ನಡೆದು ಕತೆ ತೆರೆದುಕೊಳ್ಳುತ್ತದೆ.  ಸೂಪರ್ ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿನಯದ ಜೊತೆಗೆ ಸಂಭಾಷಣೆ, ಚಿತ್ರಕತೆ, ಸಹ ನಿರ್ದೇಶನ, ಪಾಲುದಾರಿಕೆ ಎಲ್ಲವನ್ನು ನಿಭಾಯಿಸಿದ್ದೇನೆ  ಎಂದರು ಜೆ.ಕೆ. ಮೀರಾ ಹೆಸರಿನಲ್ಲಿ  ಗೃಹಿಣಿಯಾಗಿ  ಕುಟುಂಬದೊಂದಿಗೆ ತನ್ನದೆ ಪ್ರಪಂಚದಲ್ಲಿ ಇರುವಾಗ ಆ ದಿನ ಯಾಕಾಯ್ತು ಎಂದು ಕೊರಗುವ ಪಾತ್ರದಲ್ಲಿ ಚಿಕ್ಕಮಗಳೂರಿನ ರಕ್ಷ ನಾಯಕಿ ಎಂದು ಪರಿಚಯಿಸಿಕೊಂಡರು.ಸಾಹಸ ನಿರ್ದೇಶಕ ಕುಂಘುಚಂದ್ರು, ನಟ ರೋಹಿತ್‌ನಾಯರ್, ಸಂಗೀತ ನಿರ್ದೇಶಕ ಸತೀಶ್‌ಬಾಬು  ಚಿತ್ರದ ಕುರಿತು ವಿಷಯಗಳನ್ನು ಬಿಚ್ಚಿಟ್ಟರು. ಪೋಸ್ಟರ್ ವಿನೂತನವಾಗಿರುವುದರಿಂದ ಚಿತ್ರಮಂದಿರದವರು ನಮಗೆ ಕೊಡಿ ಎಂದು ಕೇಳುತ್ತಿದ್ದಾರೆ. ಆ ಕರಾಳ ರಾತ್ರಿ ಹಿಟ್ ಆಗಿದ್ದರಿಂದ ಜೆಕೆ ಚಿತ್ರವೆಂದು  ವಿಶೇಷ ಬೇಡಿಕೆ ಬಂದಿರುವುದು ವಿತರಕ ವಿಜಯ್ ಖುಷಿಗೆ ಕಾರಣವಾಗಿತ್ತು.

ಧೂಳಿಪಟ’

ಕೆಡಕು, ದ್ವೇಷ ,ಅಸಮಾನತೆ,ಕೆಟ್ಟ ಭಾವನೆಗಳು ಶತ್ರುತ್ವವನ್ನು ಹೋಗಲಾಡಿಸಿ ಸುಂದರ ಸಮಾಜ ನಿರ್ಮಾಣದ ಆಶಯವನ್ನಿಟ್ಟಿಕೊಂಡಿರುವ ಧೂಳಿಪಟ ಈ ವಾರ ಬಿಡುಗಡೆಯಾಗಿದೆ.

ಧೂಳಿಪಟ’ ಸಿನಿಮಾಗೆ ಕತೆ,ಚಿತ್ರಕತೆ ಬರೆದು ನಾಯಕನಾಗಿ ನಟಿಸಿರುವ ರೂಪೇಶ್.ಜಿ.ರಾಜ್  ಚಿತ್ರದಲ್ಲಿ ತನಗೆ ಬರುವ ಕಷ್ಟಗಳನ್ನು ಧೂಳಿಪಟದಂತೆ ಹೋಗಲಾಡಿಸುವ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರ ನೋಡಿದವರಿಗೆ ಇದು ತನ್ನದೆ ಘಟನೆ ಇರಬಹುದೆಂಬ ಭಾವನೆ ಬರಲಿದೆ  ಪ್ರೀತಿಯಲ್ಲಿ ಸೋತಿರುವ ಲೂಸ್ ಮಾದ ಯೋಗೀಶ್ ನಾಯಕನಿಗೆ ಬುದ್ದಿವಾದ ಹೇಳುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಎಂದರು ನಿರ್ದೇಶಕಿ ರಶ್ಮಿ.ಪಿ.ಕಾರ್ಚಿ. ಐಶ್ವರ್ಯ, ಅರ್ಚನಾ ಮತ್ತು  ಮುಕ್ತಿ ನಾಯಕಿಯರು.  ಎ.ಟಿ.ರವೀಶ್ ಹಿನ್ನಲೆ ಸಂಗೀತ,  ಶಿಷ್ಯ ಅರುಣ್‌ಶೆಟ್ಟಿ  ನಾಲ್ಕು ಹಾಡುಗಳಿಗೆ ಸಾಹಿತ್ಯ, ಸಂಗೀತ ಸಂಯೋಜಿಸಿದ್ದಾರೆ. ತಾರಬಳಗದಲ್ಲಿ ಟೆನ್ನಿಸ್‌ಕೃಷ್ಣ, ಮೈಸೂರುರಮಾನಂದ್, ಕುರಿರಂಗ ಮುಂತಾದವರು ಅಭಿನಯಿಸಿದ್ದಾರೆ.

ಬಾಗಲಕೋಟೆಯ ವಿ.ಶಿರಗಣ್ಣನವರು ನಿರ್ಮಾಪಕರು, ಗಿರೀಶ್.ಜಿ.ರಾಜ್, ನಿಂಗರಾಜ್ ಫಕೀರಪ್ಪಪಲ್ಲೇದ್ ಸಹ ನಿರ್ಮಾಪಕರುಗಳಾಗಿ ಸಿನಿಮಾ ಕೃಷಿಗೆ ಮೊದಲ ಬಾರಿ ಹಣ ತೊಡಗಿಸಿದ್ದಾರೆ.

ಮುಕ್ತಿ

ದೇಶ ಕಾಯುವ ವೇಳೆ ಸಿಯಾಚಿನ್‌ನ ಹಿಮಪಾತದಲ್ಲಿ ಆರು ದಿನಗಳ ಕಾಲ ಸಿಲುಕಿ ದೇಶಕ್ಕಾಗಿ ಪ್ರಾಣತೆತ್ತ ವೀರಯೋಧ ಕನ್ನಡಿಗ ಹನುಮಂತಪ್ಪ ಕೊಪ್ಪದ್ ಅವರ ಕನಸು ನನಸು ಮಾಡುವ ಸೈನಿಕರ ಸಮಸ್ಯೆಗಳಿಗೆ ಪರಿಹಾರ ಹೇಳುವ ’ಮುಕ್ತಿ’ ಚಿತ್ರವು ಈ ವಾರ ಬಿಡುಗಡೆಯಾಗಿದೆ.

ರಜಾ ದಿನಗಳಲ್ಲಿ  ಹನುಮಂತಪ್ಪಕೊಪ್ಪದ್ ಊರಿಗೆ ಬಂದಾಗ ಗೆಳಯರೊಂದಿಗೆ ದೇಶದ ಅನಿಷ್ಟ ವಿಷಯಗಳನ್ನು ಚರ್ಚೆ ಮಾಡುತ್ತಾ ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕೆಂದು ಕನಸು ಕಂಡಿದ್ದರು. ಇದನ್ನು ತಿಳಿದ ನಿರ್ದೇಶಕ ಶಂಕರ್  ಚಿತ್ರಕ್ಕೆ ಕತೆ ಬರೆದು ತಂದೆ ಪಾತ್ರವನ್ನು ಸೃಷ್ಟಿಸಿದ್ದಾರೆ.

ಮುಖ್ಯ ಪಾತ್ರದಲ್ಲಿ ನಕುಲ್‌ಗೋವಿಂದ್ ಉಳಿದಂತೆ ದೀಪಿಕಾಗೌಡ, ಸತೀಶ್‌ಯಾದವ್, ರಘುರಂಜನ್ ನಟನೆ ಇದೆ. ನಿರ್ಮಾಪಕರುಗಳಾದ ಎಂ.ಎನ್.ಸುರೇಶ್, ಭಾಮಾ.ಹರೀಶ್, ಸಾಮ್ರಾಟ್‌ಅಶೋಕ್  ಉಪಸ್ತಿತರಿದ್ದು  ತಂಡಕ್ಕೆ ಶುಭ ಹಾರೈಸಿದರು.  ಸಿ.ಕೆ.ಕೃಷ್ಣಮೂರ್ತಿ ನಿರ್ಮಾಣ ಮಾಡಿರುವ ಚಿತ್ರವು ೪೫ ಕೇಂದ್ರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಪುನೀತ್ ಎಂ.ಎನ್ ನಿರ್ಮಿಸಿರುವ ಕವಿ ಚಿತ್ರ ಬಿಡುಗಡೆಯಾಗಿದೆ.

ಕವಿ

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದೊಂದು ಟ್ಯಾಲೆಂಟ್ ಇರುತ್ತದೆ.ಆ ವ್ಯಕ್ತಿ ಜಗತ್ತನ್ನೇ ಬೆಳಗುವ ವ್ಯಕ್ತಿಯಾಗುತ್ತಾನೆ. ಒಬ್ಬ ಪೊರ್ಕಿ ಯುವಕ ಹೇಗೆ ಕವಿಯಾಗುತ್ತಾನೆ ಎಂಬ ಕಥೆಯ ಅಂಶವನ್ನಿಟ್ಟುಕೊಂಡು ಎಂ.ಎಸ್. ತ್ಯಾಗರಾಜು ನಿರ್ದೇಶನ ಮಾಡಿದ್ದಾರೆ.

ಈಗಾಗಲೇ ಸಂಗೀತ ನಿರ್ದೇಶಕರಾಗಿ ಸಾಕಷ್ಟು ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿರುವವರು ತ್ಯಾಗರಾಜ್. ಕವಿ ಚಿತ್ರದ ಮೂಲಕ ಮೊದಲ ಬಾರಿಗೆ ತ್ಯಾಗರಾಜ್ ಚಿತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಶರತ್‌ಕುಮಾರ್, ಕಾರ್ತಿಕ್ ಶರ್ಮ ಛಾಯಾಗ್ರಹಣವಿದೆ. ತಾರಾಗಣದಲ್ಲಿ ಪುನೀತ್‌ಗೌಡ, ಶೋಭಿತಾ ಶಿವಣ್ಣ, ಸ್ನೇಹ, ಉಮೇಶ್, ರಾಕ್‌ಲೈನ್ ಸುಧಾಕರ್, ಮಹೇಶ್ ಮುಂತಾದವರಿದ್ದಾರೆ..

Leave a Comment