ಸಿಧು ತಲೆ ಕತ್ತರಿಸಿದ್ದರೇ ೫ ಲಕ್ಷ ರೂ ಬಹುಮಾನ

ಲಕ್ನೋ, ಆ ೨೧- ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನ ಸಮಾರಂಭಕ್ಕೆ ತೆರಳಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧುರವರ ತಲೆ ಕತ್ತರಿಸಿ ತಂದವರಿಗೆ ೫ ಲಕ್ಷ ರೂ. ಬಹುಮಾನ ನೀಡಲಾಗುವುದೆಂದು ಬಜರಂಗದಳದ ಸಂಜಯ್ ಜಾಟ್ ಘೋಷಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಆಗ್ರಾದ ಭಜರಂಗ ದಳ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ್, ಇಮ್ರಾನ್ ಖಾನ್ ಪದಗ್ರಹಣದಲ್ಲಿ ಭಾಗವಹಿಸಿರುವ ಸಿಧು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್‌ರನ್ನು ಆತ್ಮೀಯವಾಗಿ ಆಲಂಗಿಸಿದ್ದರು. ಈ ಹಿನ್ನಲೆಯಲ್ಲಿ ಸಿಧು ಅವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಗುಡುಗಿದ್ದಾರೆ.

ಸಂಜಯ್ ಜಾಟ್ ಅವರ ಈ ವಿವಾದಾತ್ಮಕ ಹೇಳಿಕೆಯುಳ್ಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನವಜೋತ್ ಸಿಂಗ್ ಸಿಧು ಒಂದು ವೇಳೆ ಆಗ್ರಾಗೆ ಬಂದರೆ ಅವರಿಗೆ ಚಪ್ಪಲಿಗಳ ಹಾರ ಹಾಕಲಾಗುವುದು. ಸಿಧು ತಲೆ ಕತ್ತರಿಸಿ ತಂದವರಿಗೆ ೫ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.

Leave a Comment