2030 ಕ್ಕೆ ಎಲ್ಲರಿಗೂ ಅನಾರೋಗ್ಯ ಖಚಿತ

ಚಿತ್ರದುರ್ಗ.ಆ.3; 2020 ಕ್ಕೆ ಪ್ರಪಂಚದಲ್ಲಿರುವ ಎಲ್ಲರಿಗೂ ಆರೋಗ್ಯ ಖಚಿತ ಎಂಬ ಸಂದೇಶದೊಂದಿಗೆ ನಾವು ಸುಧಾರಣೆ ಕಡೆ ಹೆಜ್ಜೆ ಹಾಕಲು ಪ್ರಾರಂಭಿಸಿದೆವು, ಆದರೆ ಈಗ 2030 ಕ್ಕೆ ನಮಗೆಲ್ಲ ಅನಾರೋಗ್ಯ ಖಚಿತ ಎಂಬ ಸಂದೇಶವನ್ನು ಸಾರುವಂತಹ ಪರಿಸರ ನಿರ್ಮಾಣ ಮಾಡಿಕೊಂಡಿದ್ದೇವೆ. ಉತ್ತಮ ಗಾಳಿ, ನೀರು, ಬೆಳಕು, ಆಹಾರ, ಪರಿಸರ, ಇವೆಲ್ಲವೂ ಇದ್ದಾಗ ಮಾತ್ರ ಮನುಷ್ಯನಿಗೆ ಉತ್ತಮ ಆರೋಗ್ಯ ಸಾಧ್ಯ. ಗಾಳಿ, ನೀರು, ಮಣ್ಣು, ಆಹಾರವನ್ನು, ಮಾಲಿನ್ಯ ಪಡಿಸಿಕೊಂಡು, ಪೂರ್ಣ ಪ್ರಮಾಣದ ಆರೋಗ್ಯ ಸಾಧಿಸುವುದು ಅಸಾಧ್ಯವೆಂದು ಪರಿಸರವಾದಿ ಡಾ. ಎಚ್. ಕೆ .ಎಸ್. ಸ್ವಾಮಿ ತಿಳಿಸಿದರು.
ಅವರು ತರಳಬಾಳು ವಿದ್ಯಾಸಂಸ್ಥೆಯ, ಸಂಪಿಗೆ ಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ, ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಎಷ್ಟೇ ಆಸ್ಪತ್ರೆಗಳು, ಔಷಧಗಳು, ವೈದ್ಯರು, ಇದ್ದರೂ ಸಹ ಪರಿಸರದ ಮಾಲಿನ್ಯದಿಂದ ಆಗುವ ಅನಾರೋಗ್ಯವನ್ನು, ಯಾರೂ ಸಹ ತಡೆಯಲು ಸಾಧ್ಯವಿಲ್ಲ. ಮಾಲಿನ್ಯವನ್ನು ಮುಕ್ತಗೊಳಿಸಿ, ಆರೋಗ್ಯವನ್ನು ಸುಧಾರಿಸಿಕೊಳ್ಳುವ, ಹೊಸ ದಾರಿಗಳನ್ನು ನಾವಿಂದು ಹುಡುಕಿಕೊಳ್ಳಬೇಕಾಗಿದೆ.ಪೆÇೀಷಕರಿಗೆ, ಮಕ್ಕಳಲ್ಲಿ ಜಂತು ಹುಳವಿದೇ ಎಂಬ ಅರಿವು, ಜಾಗೃತಿಯೇ ಇಲ್ಲ, ಹಾಗಾಗಿ ಇನ್ನೂ ಸಹ ನಮಗೆ ಮೂಲ ಆರೋಗ್ಯ ತತ್ತ್ವಗಳ ಪರಿಚಯವಾಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಎಂ. ಎಸ್. ರಾಥೋಡ್, ಸಹ ಶಿಕ್ಷಕರು ಪಂಪಣ್ಣ, ರವಿಕುಮಾರ್, ಬಸವರಾಜ್, ನಾಗಲಾಂಬಿಕಾ, ಸುವರ್ಣ, ಕೋಮಲ, ಸಂಧ್ಯಾ, ದೈಹಿಕ ಶಿಕ್ಷಕರಾದ ಶಂಕರ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೊನೆಯ ಭಾಗದಲ್ಲಿ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಆರೋಗ್ಯ ಚಿಹ್ನೆಯಾದ ಪ್ಲಸ್ ಅನ್ನು ಸಾಂಕೇತಿಕವಾಗಿ ನಿರ್ಮಿಸಿ, ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.

Leave a Comment