ಕೇರಳ ಜಲಪ್ರಳಯಕ್ಕೆ ಎಬಿಡಿ ಕಂಬನಿ

ಐಪಿಎಲ್ ಮೂಲಕ ಈಗಾಗಲೇ ಭಾರತದಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕೇರಳದ ಜಲಪ್ರಳಯದಿಂದ ತತ್ತರಿಸಿರುವ ಸಂತ್ರಸ್ತರಿಗೆ ಮಿಡಿದಿದ್ದು, ಕೇರಳಕ್ಕೆ ನೆರವಾಗಿ ಅಭಿಯಾನಕ್ಕೆ ಕೈಜೋಡಿಸಿ ಮತ್ತೆ ಅಭಿಮಾನಿಗಳ ಮನಗೆದಿದ್ದಾರೆ.

ಕೇರಳದಲ್ಲಿ ಮಹಾಮಳೆಯಿಂದ ಉಂಟಾದ ಪ್ರವಾಹ ವಿಕೋಪದಿಂದ ಸಂಕಷ್ಟದಲ್ಲಿ ಸಿಲುಕಿರುವ ಜನರಿಗಾಗಿ  ಎಬಿ ಡಿವಿಲಿಯರ್ಸ್ ಮನಮಿಡಿದು ಅತೀವ ದುಃಖ ವ್ಯಕ್ತಪಡಿಸಿದ್ದಾರೆ.

ಇನ್ನು ಕೇರಳ ಪ್ರವಾಹದಲ್ಲಿ ಸಿಲುಕಿಪರದಾಡುತ್ತಿರುವವರಿಗಾಗಿ ಕೊಹ್ಲಿ, ಸುನಿಲ್ ಛೆಟ್ರಿ, ಕ್ರೀಡಾ ಬಳಗ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಗೌತಮ್ ಗಂಭೀರ್, ಹರ್ಭಜನ್ ಸಿಂಗ್ ಸೇರಿದಂತೆ ಭಾರತದ ಅನೇಕ ಕ್ರಿಕೆಟಿಗರು ಪ್ರವಾಹ ಸಂತ್ರಸ್ತ ಕೇರಳಿಗರಿಗೆ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದರ ಮಧ್ಯೆ ಭಾರತದಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕೂಡ ಕೇರಳದ ಜನತೆಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದಲ್ಲದೇ ಕೇರಳಕ್ಕೆ ನೆರವಾಗುವಂತೆ ಮನವಿ ಮಾಡಿ ಭಾರತದ ಮೇಲೆ ತಮ್ಮಗಿರುವ ಪ್ರೀತಿ ಅಭಿಮಾನವನ್ನು ತೋರಿಸಿದ್ದಾರೆ.

ನಟ ಸಿದ್ಧಾರ್ಥ್ ಟ್ವಿಟ್ಟರ್‌ನಲ್ಲಿ ಆರಂಭಿಸಿರುವ #KeralaDonationChallenge ಅಭಿಯಾನಕ್ಕೆ ಎಬಿಡಿ ಕೈಜೋಡಿಸಿದ್ದಾರೆ. ಕೇರಳದಲ್ಲಿ ಭೀಕರ ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಜನರ ಪರವಾಗಿ ನನ್ನ ಪ್ರಾರ್ಥನೆ ಇದೆ ಎಂದು ಎಬಿಡಿ ಟ್ವೀಟ್ ಮಾಡಿದ್ದಾರೆ. ೧೦೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು ೨ ಲಕ್ಷಕ್ಕೂ ಅಧಿಕ ಜನರು ಮನೆಕಳೆದುಕೊಂಡಿದ್ದಾರೆ ಎಂದು ಅವರು ಆಘಾತ ವ್ಯಕ್ತಪಡಿಸಿದ್ದಾರೆ.

sonalibendreನೋವಿನಲ್ಲೂ ಸೋನಾಲಿ ಪ್ರಾರ್ಥನೆ

ಕೇರಳದಲ್ಲಿ ವರುಣನ ಮುನಿಸಿಗೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನೇ ದಿನೇ ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗ್ತಾ ಇದೆ. ಕಣ್ಮರೆಯಾದವರ ಸಂಖ್ಯೆ ದ್ವಿಗುಣವಾಗುತ್ತಿದೆ. ನಿರಾಶ್ರಿತರಿಗೆ ಬೇಕಾದ ಸೌಲಭ್ಯಗಳನ್ನು ನೀಡಲು ಸ್ಥಳೀಯ ಸರ್ಕಾರ ಶ್ರಮಿಸುತ್ತಿದೆ.

ಈ ಬೆನ್ನೆಲ್ಲೆ ಬಾಲಿವುಟ್ ನಟ ಅಮಿತಾಬ್ ಬಚ್ಚನ್, ವಿದ್ಯಾ ಬಾಲನ್, ಶ್ರದ್ಧಾ ಕಪೂರ್ ಹಾಗೂ ಸಿದ್ದಾರ್ಥ್ ಮಲೋತ್ರಾ ಸೇರಿದಂತೆ ಹಲವು ಸ್ಟಾರ್ ಗಳು ಕೇರಳ ಜನತೆಗೆ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೈ ಜೋಡಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಸೋನಾಲಿ ಬೇಂದ್ರೆ ಸಹ, ಟ್ವಿಟರ್ ನಲ್ಲಿ ಕೇರಳಕ್ಕೆ ನೆರವು ನೀಡುವಂತೆ ಕೇಳಿಕೊಂಡಿದ್ದಾರೆ. ಕೇರಳದ ಜನರ ಸುರಕ್ಷತೆಗಾಗಿ ಪ್ರಾರ್ಥಿಸಿದ್ದಾರೆ. ಅಲ್ಲದೆ ದೇವರ ನಾಡಿನ ಜನರಿಗೆ ಸಹಾಯ ಮಾಡಲು ಇದು ಒಳ್ಳೆಯ ಅವಕಾಶ, ನೊಂದವರ ನೋವಿಗೆ ಸ್ಪಂದಿಸಿ ಎಂದು ಕೇಳಿಕೊಂಡಿದ್ದಾರೆ.

ಪ್ರವಾಹ ಸಂತ್ರಸ್ಥರಿಗೆ  ಗೂಗಲ್ ನೆರವು

ಕೇರಳದಲ್ಲಿ ಪ್ರವಾಹದಲ್ಲಿ ಸಿಲುಕಿರುವವರು, ಇಂಟರ್‌ನೆಟ್ ಸಂಪರ್ಕ ಇಲ್ಲದೆಯೂ ಗೂಗಲ್ ಲೊಕೇಶನ್ ಶೇರ್ ಮಾಡಬಹುದು ಎಂದು ಗೂಗಲ್ ತಿಳಿಸಿದೆ. ಆಂಡ್ರಾಯ್ಡ್ ಅಥವಾ ಟ್ಯಾಬ್ಲೆಟ್  ಬಳಕೆದಾರರು ಗೂಗಲ್‌ನಲ್ಲಿ ಪ್ಲಸ್ ಕೋಡ್ ಬಳಸಿ, ತಾವಿರುವ ಪಕ್ಕಾ ಸ್ಥಳದ ಮಾಹಿತಿಯನ್ನು ಶೇರ್ ಮಾಡಬಹುದಾಗಿದೆ ಎಂದು ಸಂಸ್ಥೆ ಹೇಳಿದೆ.

ಪ್ಲಸ್ ಕೋಡ್‌ಗಳನ್ನು ವಾಯ್ಸ್ ಅಥವಾ ಎಸ್‌ಎಂಎಸ್ ಮೂಲಕ ಕಳುಹಿಸಬಹುದು. ಈ ಸಂಖ್ಯೆಯನ್ನು ಗೂಗಲ್ ಮ್ಯಾಪ್‌ನಲ್ಲಿನ ಅಡ್ರೆಸ್ ಬಾರ್‌ನಲ್ಲಿ ಹಾಕಿದರೆ, ಸ್ಥಳದ ಪಕ್ಕಾ ಮಾಹಿತಿ ಲಭ್ಯವಾಗುತ್ತದೆ ಎಂದು ವಿವರಿಸಲಾಗಿದೆ. ಡಿಸ್‌ಕ್ರಿಪ್ಶನ್ ಅಥವಾ ಅಡ್ರೆಸ್ ಹಾಕುವ ಜಾಗದಲ್ಲಿ ಸ್ಕ್ರಾಲ್ ಮಾಡಿದರೆ, ಪ್ಲಸ್ ಕೋಡ್ ಸಿಗಲಿದೆ. ಅಡ್ರೆಸ್ ಹಾಕಿದರೆ, ಗೂಗಲ್ ಪತ್ತೆ ಹಚ್ಚದೇ ಹೋದಲ್ಲಿ ಪ್ಲಸ್ ಕೋಡ್ ಮೂಲಕ ನಿಖರ ಸ್ಥಳವನ್ನು ಕಾಣಬಹುದಾಗಿದೆ. ಪ್ರವಾಹದಲ್ಲಿ ಸಿಲುಕಿಕೊಂಡಿರುವವರು, ಗೂಗಲ್ ಮ್ಯಾಪ್‌ನ ಸಹಾಯದಿಂದ ರಕ್ಷಣೆಗೆ ಈ ವ್ಯವಸ್ಥೆ ಬಳಸಬಹುದಾಗಿದೆ.

Leave a Comment