2020 ನವಂಬರ್‍ನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ

ಮೈಸೂರು.ಫೆ.23. ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶವು ಯಶಸ್ವಿಯಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಅವರು ಇಂದು ಬೆಳಿಗ್ಗೆ ಮೈಸೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ಹುಬ್ಬಳ್ಳಿಯಲ್ಲಿ ನೆಡೆದ ಬಂಡವಾಳ ಹೂಡಿಕೆದಾರರ ಸಮಾವೇಶವು ಯಶಸ್ವಿಯಾಗಿರುವುದನ್ನು ಗಮನಿಸಿದ ರಾಜ್ಯಸರ್ಕಾರ ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಇನ್ನಿತರ ಪ್ರಮುಖ ನಗರಗಳಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಉದ್ದಿಮೆದಾರರಿಗೆ ಮನವರಿಕೆ ಮಾಡಿಕೊಡುತ್ತಿದೆ. ಮುಂಬೈನಲ್ಲಿ ನಡೆದ ರೋಡ್ ಷೋ ಸಹಾ ಈ ಬಗ್ಗೆ ಸಾರಷ್ಟು ಪರಿಣಾಮ ಬೀರಿದೆ ಎಂದು ಶೆಟ್ಟರು ನುಡಿದರು.
ರಾಜ್ಯದ ಪ್ರಮುಖ ನಗರಗಳಲ್ಲಿ ಕೈಗಾರಿಕೆಗಳನ್ನ ಸ್ಥಾಪಿಸಲು ಹಲವಾರು ಉದ್ದಿಮೆದಾರರು ಒಲವು ತೋರುತ್ತಿರುವುದು ಕೈಗಾರಿಕಾ ರಂಗದಲ್ಲಿ ಪ್ರನತಿಕಾಣಲು ಉತ್ತಮ ವೇದಿಕೆಯಾಗಿದೆ ಈ ಬಗ್ಗೆ ಈ ವರ್ಷದ ನವಂಬರ್ 3 ಮತ್ತು 4ರಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನೆಡೆಯಲಿದೆ ಎಂದರು.
ಬಂಡವಾಳ ಹೂಡಿಕೆ ವಿಷಯದಲ್ಲಿ ಇದುವರೆಗೂ ಬೆಂಗಳೂರು ಮಾತ್ರ ಮುಂಚೂಣಿಯಲ್ಲಿತ್ತು. ಆದರೆ ಪ್ರಸ್ತುತ ರಾಜ್ಯದ ಇತರ ನಗರಗಳಲ್ಲಿಯೂ ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣ ನಿರ್ಮಾಣಗೊಂಡಿದ್ದು ಮಹಾರಾಷ್ಟ್ರದ ಉದ್ದಿಮೆದಾರರು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದಾಗಿರುವುದು ಸ್ವಾಗತಾರ್ಹಸಂಗತಿ ಎಂದು ಜಗದೀಶ್ ಶೆಟ್ಟರು ತಿಳಿಸಿದರು.

Leave a Comment