2019 ರಲ್ಲಿ ಅಫ್ಘಾನಿಸ್ತಾನದಲ್ಲಿ 3,000 ನಾಗರಿಕ ಸಾವು,  7,000 ಜನರಿಗೆ ಗಾಯ-ವಿಶ್ವಸಂಸ್ಥೆ ವರದಿ

ಬೈರುತ್, ಫೆ 22 – ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದ ಕಳೆದ ವರ್ಷ 3,000 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, ಸುಮಾರು 7,000 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ವಿಶ್ವಸಂಸ್ಥೆಯ ಸಹಾಯಕ ಮಿಷನ್ (ಯುಎನ್ ಎಎಂಎ) ಶನಿವಾರ ಪ್ರಕಟಿಸಿದೆ.

ಅಮೆರಿಕ ಮತ್ತು ತಾಲಿಬಾನ್ ಸಂಘಟನೆ ಅಫ್ಘಾನಿಸ್ತಾನದಲ್ಲಿ ಒಂದು ವಾರದವರೆಗೆ ಹಿಂಸಾಚಾರ ತಗ್ಗಿಸುವ ಬಗ್ಗೆ ಒಪ್ಪಂದಕ್ಕೆ ಬಂದಿರುವುದರಿಂದ ಯುಎನ್‌ಎಎಂಎ ಅಂಕಿ-ಅಂಶಗಳನ್ನು ಪ್ರಕಟಿಸಿದೆ. ಇದು ಯಶಸ್ವಿಯಾದರೆ ಫೆ 29 ರಂದು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ.

‘ಹೊಸ ವರದಿಯಲ್ಲಿ ಕಳೆದ ವರ್ಷ3,403 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 6,989 ಮಂದಿ ಗಾಯಗೊಂಡಿದ್ದಾರೆ. ನಾಗರಿಕರ ಹೆಚ್ಚಿನ ಸಾವು ಸರ್ಕಾರ ವಿರೋಧಿ ಶಕ್ತಿಗಳಿಂದ ಉಂಟಾಗಿದೆ. ಸತತ ಆರನೇ ವರ್ಷ ನಾಗರಿಕರ ಸಾವು-ನೋವು ಸಂಖ್ಯೆ 10,000 ಮೀರಿದೆ ಎಂದು ಯುಎನ್‌ಎಎಂಎ ಹೇಳಿಕೆ ತಿಳಿಸಿದೆ.

ಮಿಷನ್ ಪ್ರಕಾರ, ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯಿಂದ (ರಷ್ಯಾದಲ್ಲಿ ನಿಷೇಧಿಸಲ್ಪಟ್ಟಿದೆ)  ನಡೆದ ಹಿಂಸಾಚಾರ ದಾಳಿಗಳಲ್ಲಿ 2018 ಕ್ಕೆ ಹೋಲಿಸಿದರೆ 2019 ರಲ್ಲಿ ನಾಗರಿಕರ ಸಾವುನೋವುಗಳಲ್ಲಿ ಶೇ 5ರಷ್ಟು ಐದು ಕಡಿಮೆಯಾಗಿದೆ. ಇದೇ ವೇಳೆ  ಕಳೆದ ವರ್ಷ ತಾಲಿಬಾನ್ ಉಗ್ರರು ಮತ್ತು ಅಂತಾರಾಷ್ಟ್ರೀಯ ಸೇನಾ ಪಡೆಗಳ ಸಾವು-ನೋವು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

Leave a Comment