2018-19 ನೇ ಸಾಲಿನಲ್ಲಿ 80,451 ರೂ ಗಳ ನಿವ್ವಳ ಲಾಭ

ತಿ.ನರಸೀಪುರ : ಸೆ.12: ಷೇರು ದಾರರ ಸಹಕಾರದಿಂದ ಶ್ರೀ ಅಕ್ಕಮಹಾದೇವಿ ಅಭಿವೃದ್ಧಿ ಸಹಕಾರ ಸಂಘವು 2018-19 ನೇ ಸಾಲಿನಲ್ಲಿ 80,451 ರೂ ಗಳ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೊತ್ತೇಗಾಲ ಕೆ.ಜಿ.ಶಿವಪ್ರಸಾದ್ ಹೇಳಿದರು.
ಪಟ್ಟಣದ ಎಪಿಎಂಸಿ ಎದುರು ನೂತನವಾಗಿ ತೆರೆಯಲಾಗಿರುವ ಸಂಘದ ಹೊಸ ಕಚೇರಿಯ ಉದ್ಘಾಟನೆ ಹಾಗು ಎರಡನೇ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2017-18ನೇ ಸಾಲಿನಲ್ಲಿ ಪ್ರಾರಂಭದಲ್ಲಿ 50ಸಾವಿರ ರೂ ಗಳಿದ್ದ ಠೇವಣಿ ಪ್ರಸಕ್ತ ಸಾಲಿನಲ್ಲಿ 1ಲಕ್ಷ ರೂ ಗಳಿಗೇರಿದೆ. ಸದಸ್ಯರ ವೈಯಕ್ತಿಕ ಸಾಲದ ಮಿತಿಯನ್ನು 25 ಸಾವಿರ ರೂಗಳಿಗೆ ನಿಗದಿ ಪಡಿಸಿದ್ದು ಮರು ಪಾವತಿಗೆ 20 ಮಾಸಿಕ ಕಂತುಗಳನ್ನು ನಿಗದಿ ಪಡಿಸಲಾಗಿದೆ.
201-18 ನೇ ಸಾಲಿನಲ್ಲಿ ಸಂಘವು 1,09,939 ರೂ ಗಳ ಲಾಭಗಳಿಸಿದ್ದು ವರ್ಷದಿಂದ ವರ್ಷಕ್ಕೆ ತನ್ನ ಲಾಭದಲ್ಲಿ ಏರಿಕೆ ಮಾಡಿಕೊಂಡು ಲಾಭದಲ್ಲಿ ಮುನ್ನೆಡೆಯುತ್ತಿದೆ. ಸಂಘದ ಸದಸ್ಯರು ಪಡೆದಿರುವ ಸಾಲವನ್ನು ನಿಗದಿ ಸಮಯಕ್ಕೆ ಮರುಪಾವತಿ ಮಾಡಿದಲ್ಲಿ ಮತ್ತೆ ಹೆಚ್ಚಿನ ಸಾಲ ಪಡೆಯಲು ಅವಕಾಶ ಇರುತ್ತದೆ. ಸಂಘದ ಸದಸ್ಯರು ಸಂಘ ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಂಘದ ಏಳಿಗೆಗೆ ಶ್ರಮಿಸುವಂತೆ ಷೇರುದಾರರಲ್ಲಿ ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷರಾದ ಮುಡುಕನ ಪುರ ಮಠಾಧ್ಯಕ್ಷರಾದ ಶ್ರೀ ಷಡಕ್ಷರ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ ಪ್ರಸಕ್ತ ದಿನಗಳಲ್ಲಿ ಯಾವುದೇ ಸಹಕಾರ ಸಂಘಗಳನ್ನು ಯಶಸ್ವಿಯಾಗಿ ಮುನ್ನಡೆಸುವುದು ಕಷ್ಟಕರ ವಾಗಿದ್ದು ಸದರಿ ಸಂಘವು ಈ ಮಾತನ್ನು ಸುಳ್ಳುಮಾಡುವ ನಿಟ್ಟಿನಲ್ಲಿ ಸರ್ವಸದಸ್ಯರು ಸಹಕಾರ ಮನೋಭಾವನೆಯಿಂದ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಲು ಸಹಕರಿಸುವಂತೆ ಸಲಹೆ ನೀಡಿದರು. ಸಂಘದ ಕಾರ್ಯದರ್ಶಿ ಎಂ.ಮಹದೇವಸ್ವಾಮಿ ಸಂಘದ ವಾರ್ಷಿಕ ಮಹಾಸಭೆಯ ಆಯ-ವ್ಯಯ ಮಣ್ಣಿಸಿದರು.
ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪಡೆದ ನಿವೃತ್ತ ವಾಣಿಜ್ಯ ತೆರಿಗೆ ಆಯುಕ್ತ ಡಾ.ಹೆಳವರಹುಂಡಿ ಸಿದ್ದಪ್ಪ, ಡಾ.ಆಲಗೂಡು ಚಂದ್ರಶೇಖರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ನೂತನ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿರವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಮಹದೇವಮ್ಮ,ನಿರ್ದೇಶಕರುಗಳಾದ ಟಿ.ಎಸ್.ರಾಜು,ಎಂ.ಎಸ್.ಶಿವಮೂರ್ತಿ,ಮಹದೇವಪ್ಪ(ಮೂಗಪ್ಪ) ಸುಧಾ,ಚಿಕ್ಕಮಾದಯ್ಯ,ವೀರಶೈವ ಮಹಾಸಭಾದ ಉಪಾಧ್ಯಕ್ಷ ತುರುಗನೂರು ನಾಗರಾಜು,ಶಿಕ್ಷಕ ಬಸವರಾಜು,ಕೆ,ಎಸ್.ನಾಗರಾಜು,ಶಾಂತರಾಜು ಮತ್ತಿತರರಿದ್ದರು.

Leave a Comment