20ರಂದು 6ಟು 6 ಚಲನಚಿತ್ರ ರಾಜ್ಯಾದ್ಯಂತ

ಹುಬ್ಬಳ್ಳಿ,ಏ16: ಅನ್ನಪೂಣೆಶ್ವರಿ ಆಟ್ರ್ಸ್ ಅವರ ಎ.ಎನ್.ಅನುಶ್ರೀ ರಘುನಂದನ್ ಅನೇಕಲ್ ಅರ್ಪಿಸುವ  6ಟು 6 ಚಲನಚಿತ್ರವನ್ನು ಏ 20ರಂದು ರಾಜ್ಯಾದ್ಯಂತ ಸುಮಾರು 50 ಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಾರ್ಯಕಾರಿ ನಿರ್ಮಾಪಕ ಶಂಖನಾದ ಅರವಿಂದ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನೈಜ ಘಟನೆಯಾಧಾರಿತ ಚಲನಚಿತ್ರವಾಗಿದೆ ಬೆಳಗ್ಗೆ 6ರಿಂದ ಸಂಜೆ 6ರ ಸಮಯದಲ್ಲಿ ಆಗುವ ಘಟನೆಗಳನ್ನೇ ಆಧಾರಿಸಿ ಈ ಚಿತ್ರ ರಚಿತವಾಗಿದ್ದು 46 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ ನಿಮ್ಮದೆ ಸಮಯ ನಿಮ್ಮದೆ ಅನುಭವ ಎಂಬ ಟ್ಯಾಗ್ ಲೈನ್ ಹೊಂದಿದೆ ಎಂದು ಹೇಳಿದರು.
ಅಭಿಷೇಕ್ ಎಂ.ಎ.ನಿರ್ಮಾಪಕರಾಗಿದ್ದು ಶ್ರೀನಿವಾಸ ಶಿಡ್ಲಘಟ್ಟ ಅವರು ಚಿತ್ರದ ಚಿತ್ರಕತೆ ನಿರ್ದೇಶಕ ಮಾಡಿದ್ದಾರೆ ತಾರಕ್ ಪೊನ್ನಪ್ಪ ನಾಯಕ ನಟನಾಗಿ ಅಭಿನಯಿಸಿದ್ದು ಸೂರುಪಿಣಿ ಆರೋಹಿಣಿ ನಾಯಕ ನಟಿಯಾಗಿ ಪಾತ್ರ ನಿರ್ವಹಿಸಿದ್ದಾರೆ ಎಂದು ಅವರು ಚಿಕ್ಕಮಂಗಳೂರು, ಶಿವಮೊಗ್ಗ, ಹೊರನಾಡು ಕಳಸ ಸೇರಿದಂತೆ ನಕ್ಸಲೇಟ್ ಏರಿಯಾಗಳಲ್ಲಿ ಚಲನಚಿತ್ರವನ್ನು ಚಿತ್ರಿಕರಿಸಲಾಗಿದೆ ಎಂದರು. ಮಾಸನಕ ಹೊಳ್ಳ ಮಾತನಾಡಿ 6 ಟು 6 ಚಲನಚತ್ರಿ ಸಂಗೀತ ನಿರ್ದೇಶನದ ನನ್ನ ಮೊದಲನೇ ಚಿತ್ರವಾಗಿದ್ದು ಒಟ್ಟಾರೆಯಾಗಿ 4 ಹಾಡುಗಳನ್ನು ಹೊಂದಿದೆ ಇದಕ್ಕೂ ಮೊದಲು ಶಿವಲಿಂಗ ಇದಕ್ಕೂ ಮೊದಲು ಶಿವಲಿಂಗ ಸಿದ್ದಾರ್ಥ ಸೂಪರ್ ರಂಗ ಅಶ್ವಿನಿ ನಕ್ಷತ್ರ ಧಾರವಾಹಿ ಸೇರಿದಂತೆ ಹಲವಾರು ಚಲನಚಿತ್ರ ಹಾಗೂ ಧಾರವಾಹಿಗಳ ಹಾಡುಗಳಿಗೆ ಧ್ವನಿ ನೀಡಿದ್ದೇನೆ ಎಂದು ತಿಳಿಸಿದರು ವಿನಾಯಕ ಇದ್ದರು.

Leave a Comment