2.5 ದಶಲಕ್ಷ ಡಾಲಱ್ಸ್ ಲಂಚ ಪಡೆದು ಸಿಕ್ಕಿಬಿದ್ದ ಭಾಸ್ಕರ್

ವಾಷಿಂಗ್‌ಟನ್, ಆ. ೭- ಭಾರತೀಯ ಮೂಲದ ವ್ಯಕ್ತಿಯೊಬ್ಬ ಸಂಸ್ಥೆಯೊಂದಕ್ಕೆ ಕಾಂಟ್ರಕ್ಟ್ ನೀಡುವ ಹಿನ್ನೆಲೆಯಲ್ಲಿ ಕೆಲವು ಸಂಸ್ಥೆಗಳಿಂದ 2.5 ದಶಲಕ್ಷ ಡಾಲಱ್ಸ್ ಲಂಚ ಪಡೆದಿರುವ ಆರೋಪ ಪ್ರಕರಣದಲ್ಲಿ ನಿನ್ನೆ ಫೆಡರಲ್ ನ್ಯಾಯಾಲಯ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿದೆ.
ಭಾಸ್ಕರ್ ಪಟೇಲ್ (63) ಫ್ಲಾರಿಡಾದಲ್ಲಿಯ ಎಲೆಕ್ಟ್ರಿಕಲ್ ಸಂಸ್ಥೆಯೊಂದರ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅಮೆರಿಕಾ ಸರ್ಕಾರದ ಕಟ್ಟಡಗಳಲ್ಲಿ ವಿದ್ಯುತ್ ಉಳಿತಾಯ ಯೋಜನೆಗಳ ಗುತ್ತಿಗೆ ನೀಡುವಲ್ಲಿ ಕೆಲವು ಕಂಪನಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದು ನಿನ್ನೆ ಫೆಡರಲ್ ನ್ಯಾಯಾಲಯದಿಂದ ಆರೋಪಿಯೆಂದು ಘೋಷಿಸಲ್ಪಟ್ಟಿದ್ದಾನೆ. ಇವರ ವಿರುದ್ಧ 2 ಆರೋಪಗಳು ಸಾಬೀತಾಗಿದ್ದು ಪ್ರತಿ ಆರೋಪದಲ್ಲಿ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಹಾಗೆಯೇ ಲಂಚ ಪಡೆದಿರುವ ದುಪ್ಪಟ್ಟು ಮೊತ್ತದಷ್ಟು ದಂಡವನ್ನು ವಿಧಿಸಲಾಗಿದೆ.
`ಅಪರಾಧಿಯನ್ನು ಶಿಕ್ಷೆಗೆ ಒಳಪಡಿಸುವ ಮುನ್ನ ಅಗತ್ಯವಿರುವ ತನಿಖೆಯನ್ನು ಫೆಡರಲ್ ತನಿಖಾಧಿಕಾರಿಗಳು ಕೈಗೊಳ್ಳುತ್ತಾರೆ ಎಂದು ಫೆಡರಲ್ ನ್ಯಾಯಾಲಯದ ನ್ಯಾಯಮೂರ್ತಿ ಜಿಯೋ ಫೆರಿ ಕ್ರಾಫರ್ಡ್ ಹೇಳಿದ್ದಾರೆ.

Leave a Comment