1993ರ ‘ನಿಷ್ಕರ್ಷ’ ಡಿಜಿಟಲ್ ರೂಪದಲ್ಲಿ ಮರು ಬಿಡುಗಡೆ

ಬೆಂಗಳೂರು, ಸೆ 6 – ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೆ ಕೆಲವೇ ದಿನ ಬಾಕಿಯಿದ್ದು, ಈ ಸಂದರ್ಭದಲ್ಲಿ ಅವರ ಅಭಿನಯದ ‘ನಿಷ್ಕರ್ಷ’ ಚಿತ್ರ ಡಿಜಿಟಲ್ ರೂಪದೊಂದಿಗೆ, ಹಿಂದಿಗೂ ಡಬ್ಬಿಂಗ್ ಆಗಿ ಪ್ರೇಕ್ಷಕರನ್ನು ರಂಜಿಸಲಿದೆ ಚಿತ್ರಕ್ಕೆ ಹೊಸ ಮೆರುಗು ತುಂಬಲು ನಿರ್ಮಾಪಕ ಬಿ ಸಿ ಪಾಟೀಲ್ ಒಂದು ಕೋಟಿ ರೂಪಾಯಿ ಖರ್ಚು ಮಾಡಿದ್ದಾರಂತೆ ಹಾಗಾದರೆ 25 ವರ್ಷದ ಹಿಂದೆ ಕನ್ನಡ ಚಿತ್ರರಂಗದಲ್ಲಿ ಹೊಸ ಆಯಾಮ ಸೃಷ್ಟಿಸಿದ ಈ ಚಿತ್ರ ನಿರ್ಮಾಣಕ್ಕೆ ಎಷ್ಟು ಖರ್ಚಾಗಿತ್ತು? ಚಿತ್ರೀಕರಣಕ್ಕೆ ಅಡೆತಡೆ ಉಂಟಾಗಿದ್ದೇಕೆ ಎಂದು ಸ್ವತಃ ಬಿ ಸಿ ಪಾಟೀಲ್ ಹಾಗೂ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ವಿವರಿಸಿದ್ಧಾರೆ

“ನಿಷ್ಕರ್ಷ ಎಂದ ಕೂಡಲೇ ಮಣಿಪಾಲ್ ಸೆಂಟರ್, ನಿಶಾಚರರಂತೆ ರಾತ್ರಿಯ ವೇಳೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದುದು, ನಿರ್ದೇಶಕರ ಬೈಗುಳ, ಕೋರ್ಟ್ ಗೆ ಅಲೆದಾಟ, ಶತದಿನೋತ್ಸವದ ಸಂಭ್ರಮ ಇತ್ಯಾದಿ ಟೆರರಿಸ್ಟ್ ಗಳ ಗನ್ ಪಾಯಿಂಟ್ ನಲ್ಲಿ ಕಟ್ಟಡವೊಂದರಲ್ಲಿ ಬಂಧಿಯಾಗುವ ಬ್ಯಾಂಕ್ ಸಿಬ್ಬಂದಿ, ಅವರ ರಕ್ಷಣೆಗೆ ಬರುವ ಕಮಾಂಡೊ (ವಿಷ್ಣುವರ್ಧನ್) ಪಡೆ ಇದು ಚಿತ್ರದ ಕಥಾಹಂದರ 1993ರಲ್ಲಿ ಈ ಚಿತ್ರ ನಿರ್ಮಿಸಿದಾಗ ಚಿತ್ರೋದ್ಯಮದ ಬಗ್ಗೆ ಹೆಚ್ಚು ಅರಿವಿರಲಿಲ್ಲ 60 ಲಕ್ಷ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಯಿತು ಈ ಚಿತ್ರ ನಿರ್ಮಿಸುವುದಾದಲ್ಲಿ ನನಗೆ ವಿಲನ್ ಪಾತ್ರ ನೀಡಬೇಕು ಎಂದು ನಿರ್ದೇಶಕರಿಗೆ ಷರತ್ತು ವಿಧಿಸಿದ್ದೆ” ಎಂದು ಬಿ ಸಿ ಪಾಟೀಲ್ ಹೇಳಿದರು

“ಚಿತ್ರ ತೆರೆ ಕಾಣಲು ಸಿದ್ಧವಾದಾಗ “ಇದು ಮುಂದಿನ 25 ವರ್ಷಗಳ ನಂತರದ ಪೀಳಿಗೆ ನೋಡಬೇಕಾದ ಚಿತ್ರ” ಎಂದು ಮೂಗು ಮುರಿದಿದ್ದರು ಹೀಗಾಗಿ 25 ವರ್ಷದ ನಂತರ ಅದಕ್ಕೆ ಡಿಜಿಟಲ್ ರೂಪ ಕೊಟ್ಟು, ಇಂದಿನ ಪೀಳಿಗೆಯ ವೀಕ್ಷಣೆಗಾಗಿ ಮರು ಬಿಡುಗಡೆಯಾಗುತ್ತಿದೆ” ಎಂದರು

ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ, “ನಿಷ್ಕರ್ಷ ಚಿತ್ರೀಕರಣದ ಅನೇಕ ವಿಷಯಗಳು ನೆನಪಾಗುತ್ತಿದೆ ಒಂದೇ ದಿನ, ಒಂದೇ ಕಟ್ಟಡದಲ್ಲಿ ಚಿತ್ರೀಕರಣಗೊಳ್ಳಬೇಕಿತ್ತು ಇದಕ್ಕಾಗಿ ನಾವು ಆಯ್ಕೆ ಮಾಡಿಕೊಂಡ ಸ್ಥಳ ಮಣಿಪಾಲ್ ಸೆಂಟರ್ ಬೆಳಗ್ಗೆ ಅಲ್ಲಿನ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದುದರಿಂದ ರಾತ್ರಿ ಹಾಗೂ ವಾರದ ಕೊನೆಯ ಎರಡು ದಿನ ಹಗಲು ಮತ್ತು ರಾತ್ರಿ ಚಿತ್ರೀಕರಣ ನಡೆಸುತ್ತಿದ್ದೆವು ಇನ್ನೇನು ಒಂದು ವಾರದಲ್ಲಿ ಶೂಟಿಂಗ್ ಮುಗಿಯುವ ಹಂತದಲ್ಲಿದ್ದಾಗ ಅಲ್ಲಿನ ಹುಡ್ಕೋ ಸಂಸ್ಥೆಯವರು ಕೋರ್ಟ್ ಮೆಟ್ಟಿಲೇರಿದರು “ದಿನಾ ರಾತ್ರಿ ಶೂಟಿಂಗ್ ವೇಳೆ ಕಿರುಚಾಡುವ ಕಾರಣ ಚಿತ್ರೀಕರಣಕ್ಕೆ ತಡೆ ನೀಡಬೇಕು” ಎಂದು ಕೋರಿದ್ದರಿಂದ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು ಕೊನಗೆ ಅದರಿಂದ ಹೊರಬರುವಷ್ಟರಲ್ಲಿ ತಿಂಗಳಾಗಿತ್ತು ಆನಂತರ ಚಿತ್ರೀಕರಣ ನಡೆಸಿ ಸಂತೋಷ್ ಚಿತ್ರಮಂದಿರದಲ್ಲಿ 50 ದಿನ ಹಾಗೂ ತ್ರೀವೇಣಿ ಚಿತ್ರಮಂದಿರದಲ್ಲಿ 50 ದಿನ ಪ್ರದರ್ಶನ ಕಂಡಿತ್ತು” ಎಂದು ತಿಳಿಸಿದರು

ಸುದ್ದಿಗೋಷ್ಠಿಯಲ್ಲಿದ್ದ ಸಂಗೀತ ನಿರ್ದೇಶಕ ಗುರುಕಿರಣ್, ನಟಿ ಸುಮನ್ ನಗರ್ ಕರ್ ಕೂಡ ‘ನಿಷ್ಕರ್ಷ’ ಚಿತ್ರೀಕರಣದ ನೆನಪನ್ನು ಹಂಚಿಕೊಂಡರು.

Leave a Comment