19ರೊಳಗಿನ ಐಸಿಸಿ ವಿಶ್ವಕಪ್‌ಕ್ಕೆ ಭಾರತ ತಂಡ ಪ್ರಕಟ ಕನ್ನಡಿಗ ಶುಬಾಂಗ್ ಹೆಗ್ಡೆಗೆ ಅವಾಕಾಶ

ನವದೆಹಲಿ, ಡಿ ೨- ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ೧೯ ವಯೋಮಿತಿ ವಿಶ್ವಕಪ್ ಪಂದ್ಯಾವಳಿಗೆ ಕನ್ನಡಿಗ ಶುಬಾಂಗ್ ಹೆಗ್ಡೆ ಸೇರಿದಂತೆ ೧೫ ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

ಈ ಬಾರಿ ಚಾಂಪಿಯನ್ ಭಾರತ ತಂಡವನ್ನು ಉತ್ತರಪ್ರದೇಶ ಬ್ಯಾಟ್ಸ್‌ಮನ್ ಪ್ರಿಯಮ್ ಗಾರ್ಗ್ ನಾಯಕರಾಗಿ ಮುನ್ನಡೆಸಿ, ಮತ್ತೆ ಟ್ರೋಪಿ ಹಿಡಿಯಲು ಸಜ್ಜಾಗಿದ್ದಾರೆ. ಮುಂಬರುವ ೨೦೨೦ರ ಜ ೧೭ ರಿಂದ ಫೆ ೯ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಪಂದ್ಯಾವಳಿ ನಡೆಯಲಿದೆ. ತಂಡದಲ್ಲಿ ಈ ಬಾರಿ ಧೃವ್‌ಚಾಂದ್‌ಜುರೆಲ್ ಅವರು ಉಪ ನಾಯಕ ಹಾಗೂ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಕುಮಾಲ್ ಕುಶಾಗ್ರ ಕೂಡ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.

ಭಾರತ ತಂಡ, ಜಪಾನ್, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಒಟ್ಟು ೧೬ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದು, ನಾಲ್ಕು ಗುಂಪುಗಳಲ್ಲಿ ವಿಭಜನೆಯಾಗಿವೆ.
ಮುಂಬೈನ ಯಶಸ್ವಿ ಜೈಸ್ವಾಲ್, ದಿವ್ಯಾಂಶ್ ಸೆಕ್ಸೇನಾ, ಉತ್ತರಖಾಂಡ್‌ನ ಶಶಾಂತ್ ರಾವತ್ ಹಾಗೂ ಹೈದರಾಬಾದ್‌ನ ತಿಲಕ್ ವರ್ಮಾ ಬ್ಯಾಟ್ಸ್‌ಮ್ಯಾನ್‌ಗಳಾಗಿ ಸ್ಥಾನ ಪಡೆದಿದ್ದಾರೆ. ಅದ್ಭುತ ಲಯದಲ್ಲಿರುವ ಯಶಸ್ವಿ ಜೈಸ್ವಾಲ್ ಮುಂಬೈ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ್ದರು. ೧೫೪ ಎಸೆತಗಳಲ್ಲಿ ೨೦೩ ರನ್ ಸಿಡಿಸಿದ್ದರು. ಇದರೊಂದಿಗೆ ಲಿಸ್ಟ್ ಎ ನಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮ್ಯಾನ್ ಎಂಬ ಸಾಧನೆಗೆ ಭಾಜನರಾಗಿದ್ದರು. ಪೃಥ್ವಿ ಶಾ ನಾಯಕತ್ವ ಹಾಗೂ ರಾಹುಲ್ ದ್ರಾವಿಡ್ ಸಾರಥ್ಯದಲ್ಲಿ ಭಾರತ ತಂಡ ೨೦೧೮ರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.
ಅಂಡರ್-೧೯ ಭಾರತ ತಂಡ
ಪ್ರಿಯಮ್ ಗಾರ್ಗ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ದಿವ್ಯಾಂಶ್ ಸೆಕ್ಸೇನಾ, ಧೃವ್ ಚಾಂದ್ ಜುರೆಲ್ (ಉಪ ನಾಯಕ, ವಿ.ಕೀ), ಶಶಾಂತ್ ರಾವತ್, ದಿವ್ಯಾಂಶ್ ಜೋಶಿ, ಶುಬಾಂಗ್ ಹೆಗ್ಡೆ, ರವಿ ಬಿಷ್ನೋಯಿ, ಆಕಾಶ್ ಸಿಂಗ್, ಕಾರ್ತಕ್ ತ್ಯಾಗಿ, ಅಥರ್ವ ಅಂಕೋಲೆಕರ್, ಕುಮಾರ್ ಕುಶಾಗ್ರಾ (ವಿ.ಕೀ) ಸುಶಾಂತ್ ಮಿಶ್ರಾ, ವಿದ್ಯಾಧರ್ ಪಾಟೀಲ್.
ಶುಬಾಂಗ್ ಹೆಗ್ಡೆ
ಬೆಂಗಳೂರಿನ ಮೂಲದ ಶುಬಾಂಗ್ ಹೆಗ್ಡೆ(೧೮) ಅವರು ೨೦೧೮-೧೯ರ ರಣಜಿ ಟ್ರೋಪಿಯಲ್ಲಿ ಕ್ರಿಕೆಟ್ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿ ಆಕರ್ಷಕ ಆಟದ ಗಮನ ಸೆಳೆದಿದ್ದರು. ಅಲ್ಲದೇ ಐಪಿಎಲ್‌ನಲ್ಲೂ ಭರವಸೆ ಆಟ ಪ್ರದರ್ಶಿಸಿದ್ದರು. ಬಲಗೈ ಬಾಟ್ಸ್ ಮ್ಯಾನ್ ಆಗಿರುವ ಶುಬಾಂಗ್ ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲೂ ತಂಡಕ್ಕೆ ಆಸರೆಯಾಗಲಿದ್ದಾರೆ.

Leave a Comment