18 ರೌಡಿಶೀಟರ್ ಮನೆ ಮೇಲೆ ಪೊಲೀಸ್ ದಾಳಿ

ಹುಬ್ಬಳ್ಳಿ,ಅ.9- ಹು-ಧಾ ಮಹಾನಗರದಲ್ಲಿ ಕಳೆದ ಹಲವು ದಿನಗಳಿಂದ ನಡೆದ ಚಾಕು ಇರಿತ ಹಾಗೂ ಶೂಟೌಟಗಳಿಂದ ಬೇಸತ್ತಿರುವ ಪೊಲೀಸ್ ಇಲಾಖೆಯೂ ತನ್ನ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಇಂದು ಬೆಳ್ಳಂಬೆಳಗ್ಗೆ ಅವಳಿನಗರದಲ್ಲಿ 18ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದಾರೆ.
ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ
ಡಿ. ಎಲ್. ನಾಗೇಶ, ಸಹಾಯಕ ಪೊಲೀಸ್ ಆಯುಕ್ತರಾದ ಎಸ್.ಎಂ.ಸಂದಿಗವಾಡ  ನೇತೃತ್ವದಲ್ಲಿ  ನಗರದಲ್ಲಿ ಒಟ್ಟು 14 ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಲಾಗಿದ್ದು,
ಅದೇ ರೀತಿ ಧಾರವಾಡ ಉಪ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಉಪ ಪೊಲೀಸ್ ಆಯುಕ್ತರಾದ ಡಾ. ಶಿವಕುಮಾರ ಗುಣಾರೆ ಮಾರ್ಗದರ್ಶನದಲ್ಲಿ ಎಸಿಪಿ ಎಂ. ಎನ್. ರುದ್ರಪ್ಪ ನೇತೃತ್ವದಲ್ಲಿ  ಸಿಬ್ಬಂದಿಯೊಂದಿಗೆ ಒಟ್ಟು 04 ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.

Leave a Comment