ಕೋಮುವಾದಿ ಸಂಘಟನೆ ನಿಷೇಧಿಸಿ

ಕಲಬುರಗಿ: ದೇಶದಾದ್ಯಂತ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಬೇಕು. ಗೌರಿ ಲಂಕೇಶ, ಡಾ.ಎಂ.ಎಂ.ಕಲಬುರಗಿ, ಡಾ.ದಾಬೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಹತ್ಯಾಚಾರಿಗಳನ್ನು ಮತ್ತು ಹತ್ಯೆಯ ಪ್ರಾಯೋಜಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಗತ್ ವೃತ್ತದ ಅಂಬೇಡ್ಕರ್ ಪ್ರತಿಮೆ ಬಳಿ ಇಂದು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ಪ್ರೊ.ಆರ್.ಕೆ.ಹುಡುಗಿ, ಕೆ.ನೀಲಾ, ರವೀಂದ್ರ ಶಾಬಾದಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.-ಸಂಜೆವಾಣಿ ಚಿತ್ರ

Leave a Comment