17 ರಂದು ಯುಗಾದಿ  ಶಿವಾನುಭವ ಚಿಂತನೆ

ಕಲಬುರಗಿ ಮಾ 14 :ಯುಗಾದಿ  ಅಮವಾಸ್ಯೆ ಪ್ರಯುಕ್ತ ಮಾರ್ಚ 17  ರಂದು ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ ವಿವಿಧ ಮಠಗಳಲ್ಲಿ ಶಿವಾನುಭವ ಚಿಂತನೆ ಗೋಷ್ಠಿ ಹಮ್ಮಿಕೊಳ್ಳಲಾಗಿದೆ.

ಯಾದಗಿರಿ ಜಿಲ್ಲೆ ಅಬ್ಬೆತುಮಕೂರಿನ ವಿಶ್ವರಾಧ್ಯಮಠದಲ್ಲಿ ರಾತ್ರಿ8.30 ಕ್ಕೆ 393 ನೆಯ ಗೋಷ್ಠಿ ನಡೆಯಲಿದ್ದು ಗಂಗಾಧರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು

ಜೇವರಗಿ ತಾಲೂಕಿನ ಶಾಖಾಪುರದ ವಿಶ್ವರಾಧ್ಯ ತಪೋವನ ಮಠದಲ್ಲಿ ರಾತ್ರಿ 8 ಕ್ಕೆ 283 ನೆಯ ಗೋಷ್ಠಿ ನಡೆಯಲಿದ್ದು ಸಿದ್ಧರಾಮ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು

ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಚಿಕ್ಕವಿರೇಶ್ವರ ಹಿರೇಮಠದಲ್ಲಿ ರಾತ್ರಿ 8 ಕ್ಕೆ 230 ನೆಯ ಗೋಷ್ಠಿ ನಡೆಯಲಿದ್ದು ರೇವಣಸಿದ್ಧ ಶಿವಾಚಾರ್ಯರು ನೇತೃತ್ವ ವಹಿಸುವರು

ಕಲಬುರಗಿ  ತಾಲೂಕಿನ  ಮಹಾಗಾಂವ ಕಳ್ಳಿಮಠ ಸಂಸ್ಥಾನದಲ್ಲಿ   ರಾತ್ರಿ 8.30  ಕ್ಕೆ 351 ನೆಯ ಗೋಷ್ಠಿ ನಡೆಯಲಿದ್ದು ಗುರುಲಿಂಗ  ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಭೀಮರಾಯನಗುಡಿಯಿಂದ 1 ಕಿಮೀ ದೂರದಲ್ಲಿರುವ ಅಪ್ಪನ ಶಾಖಾಪುರ ಮಠದಲ್ಲಿ ಮಾರ್ಚ22 ರಂದು ರಾತ್ರಿ 8.50 ಕ್ಕೆ ನಡೆಯುವ 210 ನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ಅಬ್ಬೆತುಮಕೂರು ಮಠದ ಗಂಗಾಧರ ಮಹಾಸ್ವಾಮಿಗಳು ವಹಿಸುವರು ಎಂದು ವಿಶ್ವರಾಧ್ಯ ಸೇವಾ ಸಮಿತಿಯ ನಗರ ಘಟಕದ ವಕ್ತಾರ ಹಾಗೂ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅಂಬಲಗಿ ತಿಳಿಸಿದ್ದಾರೆ. ಮಾಹಿತಿಗೆ 9449933735 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ

Leave a Comment