17ರಂದು ಧರಣಿ – ಗ್ರಾಮಸ್ಥರಿಂದ ಆಕ್ರೋಶ

ರಾಯಚೂರ,ಮೇ೧೫ .ದೇವದುರ್ಗ ತಾಲೂಕಿನ ಭೂಮನಗುಂಡ ಗ್ರಾಮದ ಸಾರ್ವಜನಿಕರು ಮತ್ತು ಕೂಲಿ ಕಾರ್ಮಿಕರು ಕಳೆದ ಎರಡು ತಿಂಗಳಿನಿಂದ ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಕುರಿತು ಜಿಲ್ಲಾಧಿಕಾರಿಗೆ ಇಂದು ಮನವಿ ಸಲ್ಲಿಸಿದರು.
ದೇವದುರ್ಗ ತಾಲೂಕಿನ ಭೂಮನಗುಂಡ ಗ್ರಾಮದಲ್ಲಿ ಕಳೆದೆರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಕುಡಿಯುವ ನೀರಿಗೆ ಒಂದು ಕೊಳವೆ ಬಾವಿ ಮತ್ತು ಕೈ ಪಂಪ್ ಇದ್ದು ಜನರಿಗೆ, ಜಾನುವಾರುಗಳಿಗೆ ತುಂಬಾ ತೊಂದರೆ ಆಗಿದೆ.
ಈ ಸಮಸ್ಯೆಯನ್ನು ಗ್ರಾ.ಪಂ, ತಾ.ಪಂ, ಮತ್ತು ಜಿಲ್ಲಾ ಪಂಚಾಯತಿಗಳಿಗೆ ಮನವಿ ಸಲ್ಲಿಸಿದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ತುರ್ತುತಾಗಿ ಬೋರವೆಲ್ ಕೊಡಿಸುವ ಮೂಲಕ ನೀರು ನೀಡಬೇಕೆಂಬ ಕಟ್ಟುನಿಟ್ಟಿನ ಆದೇಶವಿದ್ದರು ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ.
ಆದರಿಂದ ಮೇ 17ರಂದು ಭೂಮನಗುಂಡ ಗ್ರಾ.ಪಂ. ಕಾರ್ಯಾಲಯ ಮುಂದೆ ಗ್ರಾಮಸ್ಥರೆಲ್ಲ ಕೂಡಿ ಧರಣಿ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಬಸವರಾಜ್,ಶಿವಾಗೇನಿ ಕಂಪ್ಲಿ, ಈರಣ್ಣ, ನೀಲಮ್ಮ, ಮಲ್ಲಮ್ಮ, ಮಾಣಿಕಮ್ಮ, ಶಿವಮ್ಮ ಮಾರಮ್ಮ ಲಕ್ಷ್ಮಿ ಆದಪ್ಪ ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment