16ರ ಮನುಭಕರ್‌ಗೆ ಮತ್ತೊಂದು ಸ್ವರ್ಣ

ನವದೆಹಲಿ, ಮಾ. ೬- ಮೆಕ್ಸಿಕೊದ ಗುಡ್ಲಾಜರಾದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ ಮಿಶ್ರ ಸ್ಪರ್ಧೆಯಲ್ಲಿ ಹದಿನಾರು ವರ್ಷದ ಮನು ಭಕರ್ ಎರಡನೇ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ.

10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಓಂ ಪ್ರಕಾಶ್ ಮಿಥರ್ ವಾಲ್ ಮಿಶ್ರ ತಂಡ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಹಿಳೆಯರ ವಿಭಾಗದಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಎರಡನೇ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಹನ್ನೊಂದನೆ ತರಗತಿಯಲ್ಲಿ ಓದುತ್ತಿರುವ ಮನು, ಹಿರಿಯ ವಿಶ್ವ ಕಪ್ ಚಿನ್ನ ಪದಕಗಳ ಪಟ್ಟಿಯಲ್ಲಿ ಎರಡು ಚಿನ್ನ ಪದಕಗಳಿಸಿದ ಅತ್ಯಂತ ಹಿರಿಯ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದೀಪಕ್ ಕುಮಾರ್ ಮತ್ತು ಮೆಹೂಲಿ ಘೋಷ್ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕಗಳಿಸುವ ಮೂಲಕ ಆರನೇ ಪದಕಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment