156 ಪ್ರೌಢ ಶಾಲಾ ಶಿಕ್ಷಕರ ಕೌನ್ಸೆಲಿಂಗ್ ಪೂರ್ಣ

ಧಾರವಾಡ, ಆ.24 : ಇಲ್ಲಿಯ ಡಯಟ್ ಸಭಾಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಛೇರಿಯು ಹಮ್ಮಿಕೊಂಡಿದ್ದ ಪ್ರೌಢ ಶಾಲಾ ಸಹ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‍ದಲ್ಲಿ ಶುಕ್ರವಾರ 156 ಜನ ಶಿಕ್ಷಕರ ಕೌನ್ಸೆಲಿಂಗ್ ನಡೆಸಿ ವರ್ಗಾವಣೆ ಆದೇಶಗಳನ್ನು ನೀಡಲಾಯಿತು.
ಮಳೆಯ ಕಾರಣದಿಂದ ಮುಂದೂಡಲಾಗಿದ್ದ ಕೌನ್ಸೆಲಿಂಗ್‍ದಲ್ಲಿ ಈಗಾಗಲೇ ಆಗಷ್ಟ 5 ರಂದು 109 ಶಿಕ್ಷಕರಿಗೆ ವರ್ಗಾವಣೆ ಆದೇಶಗಳನ್ನು ಕೊಡಲಾಗಿತ್ತು. ಒಟ್ಟು ಈ ತನಕ 265 ಶಿಕ್ಷಕ-ಶಿಕ್ಷಕಿಯರು ಕೌನ್ಸೆಲಿಂಗ್‍ದಲ್ಲಿ ಸ್ಥಳ ಆಯ್ಕೆ ಮಾಡಿಕೊಂಡಿದ್ದು, ಶನಿವಾರ (ಆಗಷ್ಟ 24 ರಂದು) ಕೇವಲ 58 ಜನರಿಗೆ ಮಾತ್ರ ಸ್ಥಳ ಆಯ್ಕೆಗೆ ಅವಕಾಶವಿದೆ.
ಈಗಾಗಲೇ ಪ್ರಕಟವಾದಂತೆ ಬೆಳಗಾವಿ ವಿಭಾಗದ 9 ಜಿಲ್ಲೆಗಳಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕರ ವರ್ಗಾವಣೆಗೆ ಸರಕಾರದ ನಿಯಮಗಳ ಪ್ರಕಾರ ಒಟ್ಟು 323 ಸ್ಥಳಗಳಿಗೆ ಮಾತ್ರ ವರ್ಗಾವಣೆ ಕೌನ್ಸೆಲಿಂಗ್ ನಡೆಸಲು ಅವಕಾಶವಿದೆ. ಶಿಕ್ಷಕರ ಆದ್ಯತಾ ಕ್ರಮಾಂಕ 501 ರಿಂದ ಕೊನೆಯತನಕ ಶನಿವಾರ ಕೌನ್ಸೆಲಿಂಗ್ ಜರುಗಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ್, ಉಪನಿರ್ದೇಶಕರಾದ ಮೃತ್ಯುಂಜಯ ಕುಂದಗೋಳ, ಆರ್.ಎಸ್. ಮುಳ್ಳೂರ, ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ ಬಮ್ಮಕ್ಕನವರ, ಹಿರಿಯ ಸಹಾಯಕ ನಿರ್ದೇಶಕ ಅರ್ಜುನ ಕಂಬೋಗಿ, ಶಾಂತಾ ಮೀಸಿ, ಮಹಾದೇವಿ ಮಾಡಲಗೇರಿ ಮುಂತಾದ ಸಿಬ್ಬಂದಿ ವರ್ಗದವರು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Leave a Comment