ಯುವವಾಣಿ

ರಾಜ್ಯ ರಾಜಕಾರಣದಲ್ಲೀಗ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪ್ರಚಾರಕ್ಕೆ ರಣಕಹಳೆ ಮೊಳಗಿಸಿದೆ. ಯುವ ಮತದಾರರು ತಮ್ಮ ಹಕ್ಕು ಚಲಾಯಿಸಲು ಕಾತುರರಾಗಿದ್ದಾರೆ.

೨೦೨೩ರ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ಪಡೆಯುವ ಪ್ರೌಢಶಾಲಾ ಮತ್ತು ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ದೇಶ ಮತ್ತು ರಾಜ್ಯದ ಅಚ್ಚುಮೆಚ್ಚಿನ ನಾಯಕನ ಬಗ್ಗೆ ಸಂಜೆವಾಣಿ ನಡೆಸಿದ ಪ್ರಯತ್ನಕ್ಕೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 1. ನಿಮ್ಮ ನೆಚ್ಚಿನ ರಾಷ್ಟ್ರ ನಾಯಕ ಯಾರು ? ಯಾವ ಕಾರಣಕ್ಕಾಗಿ ಸಂಕ್ಷಿಪ್ತವಾಗಿ ವಿವರಿಸಿ
 2. ನಿಮ್ಮ ನೆಚ್ಚಿನ ರಾಜ್ಯ ರಾಜಕಾರಣಿ ಯಾರು ? ಯಾವ ಕಾರಣಕ್ಕಾಗಿ ಸಂಕ್ಷಿಪ್ತವಾಗಿ ವಿವರಿಸಿ
 3. ಕರ್ನಾಟಕದಲ್ಲಿ ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ? ಯಾರು ಮುಖ್ಯಮಂತ್ರಿ ಆಗಬಹುದು ?
 4. ನೀವು ಕಂಡಂತೆ ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳು ಏನು ?
 5. ನೀವು ರಾಜ್ಯದಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತೀರಿ ?
 6. ಕರ್ನಾಟಕದಲ್ಲಿ ಮಹಿಳಾ ಸಿಎಂ ಆಗಬೇಕೆಂದು ಬಯಸುತ್ತೀರಾ ? ಆದರೆ ಯಾರು ಆಗಬಹುದು ?
 7. ಸ್ವಚ್ಛ ಭಾರತ ಆಂದೋಲನದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
 8. ನೀವು ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಯಾದರೆ ನಿಮ್ಮ ಕನಸಿನ ಭಾರತ ಅಥವಾ ಕರ್ನಾಟಕ ಯಾವ ಮಾದರಿಯಲ್ಲಿರುತ್ತದೆ ?

manojkumarಮನೋಜ್ ಕುಮಾರ್,

ದ್ವಿತೀಯ ಪಿಯುಸಿ, ವಿದ್ಯಾಸೌಧ, ಪಿಯು ಕಾಲೇಜು, ಪೀಣ್ಯ, ಬೆಂಗಳೂರು

 1. ನರೇಂದ್ರ ಮೋದಿ, ಅವರು ಅಮೆರಿಕಾ, ರಷ್ಯಾ ಸೇರಿದಂತೆ ವಿವಿಧ ರಾಷ್ಟ್ರಗಳೊಂದಿಗೆ ಬಾಂಧವ್ಯ ವೃದ್ಧಿಸುವ ಜೊತೆಗೆ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ಚಿಂತನೆಗಳನ್ನು ಕ್ರೋಡೀಕರಿಸಿಕೊಂಡು ಭಾರತದ ಅಭಿವೃದ್ಧಿಗಾಗಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
 2. ಸಿದ್ದರಾಮಯ್ಯ, ಯಾಕೆಂದರೆ ಬಡವರಿಗೆ ತಿಂಗಳಿಗೆ ೩೦ ಕೆ.ಜಿ. ಅಕ್ಕಿ ನೀಡುತ್ತಿದ್ದಾರೆ. ವಿದ್ಯಾಸಿರಿ, ಕ್ಷೀರ ಭಾಗ್ಯದಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
 3. ೩. ಜೆಡಿಎಸ್ ಅಧಿಕಾರಕ್ಕೆ ಬರಬಹುದು. ಎಚ್.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಬಹುದು.
 4. ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಪಕ್ಷಪಾತ, ಜಾತೀಯತೆ
 5. ಬಡತನ, ನಿರ್ಮೂಲನೆ, ಗ್ರಾಮಿಣಾಭಿವೃದ್ಧಿ, ಶುದ್ಧ ಕುಡಿಯುವ ನೀರು,
 6. ಆಗಬೇಕು, ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಆಗಬಹುದು.
 7. ಪ್ರಚಾರಕ್ಕಾಗಿ ಎರಡು ದಿನ ಸ್ವಚ್ಛ ಮಾಡಿದರೆ ಆಗಲ್ಲ, ಅದು ನಿರಂತರವಾಗಿ ನಡೆಯಬೇಕು.
 8. ನಾನು ಪ್ರಧಾನಿ ಅಥವಾ ಸಿಎಂ ಆದರೆ, ಭ್ರಷ್ಟಾಚಾರ ನಿರ್ಮೂಲನೆ ಮತ್ತು ವಿದ್ಯಾವಂತರಿಗೆ ರಾಜಕೀಯದಲ್ಲಿ ಅವಕಾಶ ನೀಡುತ್ತೇನೆ.

rohithsರೋಹಿತ್ ಎಸ್.

ದ್ವಿತೀಯ ಪಿಯುಸಿ, ವಿದ್ಯಾಸೌಧ, ಪಿಯು ಕಾಲೇಜು, ಪೀಣ್ಯ, ಬೆಂಗಳೂರು

 1. ನರೇಂದ್ರ ಮೋದಿ ಬಡತನದಿಂದ ಬಂದಿರುವ ಮೋದಿ ಅವರಿಗೆ ಎಲ್ಲರ ಸಮಸ್ಯೆ ಅರಿತು ಕಾರ್ಯ ನಿರ್ವಹಿಸುತ್ತಿದ್ದಾರೆ.
 2. ಸಿದ್ದರಾಮಯ್ಯ, ಅನ್ನ ಭಾಗ್ಯ, ಕೃಷಿ ಭಾಗ್ಯ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿದ್ದಾರೆ.
 3. ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಸಿಎಂ ಆಗಬಹುದು.
 4. ಕೆರೆಗಳ ಒತ್ತುವರಿ, ವಾಯು ಮಾಲಿನ್ಯ
 5. ಉದ್ಯೋಗ ಸೃಷ್ಠಿ, ಪರಿಣಾಮಕಾರಿಯಾಗಿ ಸ್ವಚ್ಛತಾ ಕಾರ್ಯಕ್ರಮ ಜಾರಿ.
 6. ಹೌದು, ಉಮಾಶ್ರೀ ಮುಖ್ಯಮಂತ್ರಿ ಆಗಬೇಕು.
 7. ಸ್ವಚ್ಛ ಭಾರತ ಅಂದರೆ ಬರೀ ಕಸಕಡ್ಡಿ, ತೆಗೆಯುವುದಲ್ಲ, ದೇಶದಲ್ಲಿ ನಡೆಯುವ ಕೊಲೆ-ಸುಲಿಗೆಗಳಿಗೆ ಕಡಿವಾಣ ಹಾಕಬೇಕು.
 8. ನಾನು ರಾಜಕಾರಣಿ ಆಗಲ್ಲ, ಹಾಗೇನಾದರೂ ಆದರೆ, ಚುನಾವಣೆಗೆ ಸ್ಪರ್ಧಿಸಲು ಮಾನದಂಡಗಳನ್ನು ಜಾರಿಗೆ ತರುತ್ತೇನೆ. ಕಳ್ಳಕಾಕರು ನಿಲ್ಲಬಾರದು.

grishmaಗ್ರೀಷ್ಮ

ದ್ವಿತೀಯ ಪಿಯುಸಿ, ವಿದ್ಯಾಸೌಧ, ಪಿಯು ಕಾಲೇಜು, ಪೀಣ್ಯ, ಬೆಂಗಳೂರು.

 1. ನನ್ನ ನೆಚ್ಚಿನ ರಾಷ್ಟ್ರ ರಾಜಕಾರಣಿ ನರೇಂದ್ರ ಮೋದಿ, ಅವರು ಪ್ರಧಾನಿಯಾದ ಮೇಲೆ ಭಾರತ ವಿಶ್ವದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ. ನೋಟ್ ಬ್ಯಾನ್ ನಿಂದಾಗಿ ಸಾಕಷ್ಟು ಕಪ್ಪು ಹಣ ಆಚೆ ಬಂದಿದೆ.
 2. ಬಿ.ಎಸ್.ಯಡಿಯೂರಪ್ಪ, ರೈತ ಚಳವಳಿಯಿಂದ ಬಂದಿರುವ ಇವರು ರೈತರ ಬಗ್ಗೆ ನಿಜವಾದ ಕಾಳಜಿ ಹೊಂದಿದವರು.
 3. ಬಿಜೆಪಿ ಅಧಿಕಾರಕ್ಕೆ ಬರಬಹುದು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬಹುದು.
 4. ಭ್ರಷ್ಟಾಚಾರ, ಹಸಿವು, ವಸತಿ ಸಮಸ್ಯೆ
 5. ಬಡತನ ನಿರ್ಮೂಲನೆ, ರೈತರ ಸಮಸ್ಯೆಗಳ ಪರಿಹಾರ, ಮಹಿಳೆಯರ ಸಮಸ್ಯೆಗಳ ಪರಿಹಾರ
 6. ಹೌದು, ಶೋಭಾ ಕರಂದ್ಲಾಜೆ ಸಿಎಂ ಆಗಬಹುದು.
 7. ಸ್ವಚ್ಛ ಭಾರತ ಆಂದೋಲನ ಶುರುವಾದ ಮೇಲೆ ರಸ್ತೆ ಚರಂಡಿಗಳು ಸ್ವಚ್ಛವಾಗಿವೆ. ರೋಗ ರುಜಿನಗಳು ಕಡಿಮೆ ಆಗಿವೆ.
 8. ನಾನು ಪ್ರಧಾನಿ ಅಥವಾ ಮುಖ್ಯಮಂತ್ರಿ ಆದರೆ, ಸರ್ಕಾರಿ ಶಾಲಾ ಕಾಲೇಜುಗಳಿಗೆ ಆದ್ಯತೆ ನೀಡುತ್ತೇನೆ. ಉತ್ತಮ ಆರೋಗ್ಯ ಸೇವೆ ಒದಗಿಸುತ್ತೇವೆ.

hujaif-mdಎಂ.ಡಿ. ಹುಜೈಫ್

ದ್ವಿತೀಯ ಪಿಯುಸಿ, ವಿದ್ಯಾ ಸೌಧ, ಪಿಯು ಕಾಲೇಜು, ಪೀಣ್ಯ, ಬೆಂಗಳೂರು

 1. ಟಿಪ್ಪು ಸುಲ್ತಾನ್, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು.
 2. ನರೇಂದ್ರ ಮೋದಿಯಂತಹ ವ್ಯಕ್ತಿ ಬೇಕು.
 3. ಕಾಂಗ್ರೆಸ್ ಅಥವಾ ಬಿಜೆಪಿ ಅಧಿಕಾರಕ್ಕೆ ಬರಬಹುದು. ಸಿಎಂ ಯಾರು ಅಂತಾ ಹೇಳೋಕ್ಕಾಗಲ್ಲ.
 4. ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು.
 5. ಜಯಂತಿಗಳ ಆಚರಣೆಗೆ ರಜೆ ಕೊಡುವುದನ್ನು ನಿಲ್ಲಿಸಬೇಕು.
 6. ಬೇಕೇ ಬೇಕು. ರಮ್ಯ ಸಿಎಂ ಮಾಡಬೇಕು.
 7. ಒಳ್ಳೆಯ ಯೋಜನೆ, ಎಲ್ಲರೂ ಪಾಲಿಸಬೇಕು.
 8. ನಾನು ಪ್ರಧಾನಿ ಆದರೆ, ಭಾರತ ನಂ. ೧ ಸ್ಥಾನದಲ್ಲಿರುತ್ತದೆ.

abhilashdcಡಿ.ಸಿ. ಅಭಿಲಾಷ್

ದ್ವಿತೀಯ ಪಿಯುಸಿ, ವಿದ್ಯಾಸೌಧ ಪಿಯು ಕಾಲೇಜು, ಪೀಣ್ಯ, ಬೆಂಗಳೂರು.

 1. ಎಪಿಜೆ ಅಬ್ದುಲ್ ಕಲಾಂ ಮತ್ತು ನರೇಂದ್ರ ಮೋದಿ ಅವರ ಸರಳ ಸಜ್ಜನಿಕೆ ಹಾಗೂ ಜ್ಞಾನ ತುಂಬಾ ಇಷ್ಟ. ಹಾಗೆಯೇ ವಿಜ್ಞಾನ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವ ಮೋದಿಯವರೂ ಸಹ ಇಷ್ಟ.
 2. ಸಿದ್ದರಾಮಯ್ಯ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ, ಯಾವುದೇ ಕಳಂಕ ಇಲ್ಲ.
 3. ಬಿಜೆಪಿ ಬರಹುದು, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಬಹುದು.
 4. ವಿದ್ಯುತ್ ಸಮಸ್ಯೆ, ಒಳಚರಂಡಿ ಸಮಸ್ಯೆ, ರಸ್ತೆಗಳ ಸಮಸ್ಯೆ, ನಿರುದ್ಯೋಗ.
 5. ನಿರುದ್ಯೋಗ ಸಮಸ್ಯೆ ನೀಗಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ಶಿಕ್ಷಣಾಭಿವೃದ್ಧಿ.
 6. ಮಹಿಳೆ ಸಿಎಂ ಆಗಬೇಕು, ನನ್ನ ಪ್ರಕಾರ ರಮ್ಯ ಸಿಎಂ ಆಗಬಹುದು.
 7. ನಮ್ಮ ನಗರ ಸ್ವಚ್ಚವಾಗಿದ್ದರೆ, ನಾವು ಆರೋಗ್ಯವಾಗಿರುತ್ತೇವೆ.
 8. ನಾನು ಪ್ರಧಾನ ಮಂತ್ರಿ ಆದರೆ ಮೊದಲಿಗೆ ಸುರಕ್ಷತೆ ಒದಗಿಸುವುದು, ವಿದೇಶಿ ವಸ್ತುಗಳಿಗೆ ಕಡಿವಾಣ ಹಾಕುತ್ತೇನೆ.
 • ಆಸಕ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ
 • ಭಾವಚಿತ್ರದೊಂದಿಗೆ ಕಳುಹಿಸಿದರೆ ನಿಮ್ಮ ಅಭಿಪ್ರಾಯಗಳನ್ನು ಪ್ರಕಟಿಸಲಾಗುವುದು.
 • ಶಾಲೆಯ ಹೆಸರು ಮತ್ತು ವಿಳಾಸ ಕಡ್ಡಾಯ
 • ವಿವರಗಳಿಗಾಗಿ ಸಂಪರ್ಕಿಸಿ : 9449871871

Leave a Comment