153 ಜಿಲ್ಲೆಗಳಲ್ಲಿ ಬತ್ತಿದ ಜಲಮೂಲ

ನವದೆಹಲಿ.ಏ.೧೬-ಮುಂಬರುವ ದಿನಗಳಲ್ಲಿ ಬೇಸಿಗೆ ತೀವ್ರಗೊಳ್ಳಲಿದ್ದು,ಈಗಾಗಲೇ ದೇಶದ ೧೫೩ ಜಿಲ್ಲೆಗಳಲ್ಲಿ ನೀರಿನ ಮೂಲಗಳು ಬತ್ತಿಹೋಗಿದ್ದು  ಜಲಕ್ಷಾಮ ತಲೆದೋರಿದೆ.

ಹವಮಾನ ಇಲಾಖೆ ಮಾಹಿತಿಯನ್ವಯ ದೇಶದ ೧೪೦ ಜಿಲ್ಲೆಗಳಲ್ಲಿ೨೦೧೭ ಅ ಅಕ್ಟೋಬರ್‌ನಿಂದಲೂ ಕಡಿಮೆ ಪ್ರಮಾಣದ ಮಳೆಯಾಗಿರುವ ಕಾರಣ ನೀರಿನ ಕ್ಷಾಮ ತಲೆದೋರಿದೆ.ಕಳೆದ ಜನವರಿಯಿಂದ ಮಾರ್ಚವರೆಗೆ ೫೮೮ ಜಿಲ್ಲೆಗಳಲ್ಲಿನ ಮಳೆ ಪ್ರಮಾಣ ಕುರಿತಂತೆ ಮಾಹಿತಿ ಸಂಗ್ರಹಿಸಿದ್ದ ಹವಮಾನ ಇಲಾಖೆ ಇವುಗಳಲ್ಲಿ ೧೫೩ ಜಿಲ್ಲೆಗಳಲ್ಲಿ  ಅತೀ ಕಡಿಮೇ ಮಳೆಯಾಗಿರುವುದನ್ನು ಬಹಿರಂಗ ಪಡಿಸಿದೆ.

ನೀರಿನ ಅಭಾವವನ್ನು ಪೆಸಿಪಿಟೇಷನ್ ಇಂಡೇಕ್ಸೆ ಮೂಲಕ ಖಚಿತ ಪಡಿಸಿಕೊಳ್ಳಲಾಗುತ್ತಿದೆ.ಈ ಲೆಕ್ಕಚಾರದಿಂದ ದೇಶದಾದ್ಯಂತ ಎಲ್ಲ ಪ್ರದೇಶಗಳಲ್ಲಿ ಬೀಳುವ ಮಳೆಯ ಪ್ರಮಾಣವನ್ನು ನಿಖರವಾಗಿ ಕಂಡುಕೊಳ್ಳಬಹುದಾಗಿದೆ. ಪ್ರತಿವರ್ಷ ದೇಶದ ಆನೇಕ ಪ್ರದೇಶಗಳು  ಅದರಲ್ಲೂ ಬೇಸಿಗೆ ಸಂದರ್ಭಗಳಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತೀವೆ.

ಅದರೆ ಈ ಹಿಂದಿಗಿಂತಲೂ ಈ ಬಾರಿ ಬಿದ್ದ ಕಡಿಮೆ ಮಳೆಯಿಂದ ನೀರಿನ ಅತೀಯಾದ ಕೊರತೆ ಉಂಟಾಗಿದೆ. ಹವಮಾನ ಇಲಾಖೆ ನೀಡಿರುವ ವರದಿ ಪ್ರಕಾರ ದೇಶದಾದ್ಯಂತ ಶೇ ೬೩ ರಷ್ಟು ಮಳೆ ಕೊರತೆಯಾಗಿದೆ.ಮಾರ್ಚನಿಂದ ಏಪ್ರೀಲ್‌ವರೆಗೆ ಕೇವಲ ಶೇ ೧೦ ರಷ್ಟು ಪ್ರಮಾಣದ ಮಳೆಯಾಗಿದೆ.

ನೀರಿನ ಕೊರತೆ ಎದುರಿಸುತ್ತೀರುವ ಬಹುತೇಕ ಜಿಲ್ಲೆಗಳು ಉತ್ತರ ಭಾರತಕ್ಕೆ ಸೇರಿದ್ದು, ಪ್ರಮುಖವಾಗಿ ಬಿಹಾರ್,ಜಾರ್ಕಂಡ್,ಸೇರಿದಂತೆ ಪಂಜಾಬ್,ಹರಿಯಾಣ,ಉತ್ತರ ಪ್ರದೇಶ,ಮತ್ತು ರಾಜಸ್ಥಾನ ರಾಜ್ಯಗಳಿಗೆ ಸೇರಿದ ಜಿಲ್ಲೆಗಳಾಗಿವೆ,

Leave a Comment