ರಾಹುಲ್ ಸಂವಾದ : ಮಾಧ್ಯಮದವರ ಪರದಾಟ

ಕಲಬುರಗಿ,ಫೆ.13-ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗಿನ ಸಂವಾದ ಕಾರ್ಯಕ್ರಮದ ಸುದ್ದಿ ಸಂಗ್ರಹಕ್ಕಾಗಿ ಮಾಧ್ಯಮದವರು ಪರದಾಡಿದ ಪ್ರಸಂಗ ಇಂದು ನಡೆಯಿತು.

ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಅವರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇನ್ನೊಂದು ಕೋಣೆಯಲ್ಲಿ ಮಾಧ್ಯಮದವರಿಗಾಗಿ ಟೀವಿ ಪರದೆ ಮೇಲೆ ಸಂವಾದ ಕಾರ್ಯಕ್ರಮದ ಪ್ರಸಾರ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆದರೆ ತಾಂತ್ರಿಕ ಕಾರಣದಿಂದಾಗಿ ಟಿ.ವಿ. ಪರದೇ ಮೇಲೆ ರಾಹುಲ್ ಗಾಂಧಿ ಅವರ ಸಂವಾದ ಕಾರ್ಯಕ್ರಮದ ದೃಶ್ಯಾವಳಿ ಬರದೆ, ಧ್ವನಿಯೂ ಸರಿಯಾದ ರೀತಿಯಲ್ಲಿ ಕೇಳದೆ ಇರುವುದರಿಂದ ಸುದ್ದಿ ಸಂಗ್ರಹಕ್ಕಾಗಿ ಮಾಧ್ಯಮದವರು ತೀವ್ರ ಪರದಾಡಬೇಕಾಯಿತು.

 

Leave a Comment