15,000 ಬಾಲಿವುಡ್ ಕಾರ್ಮಿಕರಿಗೆ ಹಿಂದಿ ಚಿತ್ರರಂಗದವರ ನೆರವು

ಮುಂಬೈ, ಏ 2- ಬಾಲಿವುಡ್‌ನ 15,000 ದಿನಗೂಲಿ ಕಾರ್ಮಿಕರಿಗೆ ಯಶ್ ರಾಜ್ ಫಿಲಂಸ್ (ವೈ.ಆರ್.ಎಫ್) ಚಿತ್ರ ನಿರ್ಮಾಣ ಸಂಸ್ಥೆಯು ಹಣಕಾಸು ನೆರವು ಒದಗಿಸಲು ಮುಂದೆ ಬಂದಿದೆ.
ಈ ಪ್ರತಿಷ್ಠಿತ ಸಿನಿಮಾ ಕಂಪನಿಯು ಬಾಲಿವುಡ್‌ನ 15,000 ದಿನಗೂಲಿ ನೌಕರರ ಪಟ್ಟಿಯನ್ನು ಕೋರಿದ್ದು ಅದನ್ನು ಕಳುಹಿಸಿಕೊಡಲಾಗಿದೆ ಎಂದು ಪಶ್ಚಿಮ ಭಾರತ ಚಲನಚಿತ್ರ ಕಾರ್ಮಿಕದ ಒಕ್ಕೂಟದ ಅಧ್ಯಕ್ಷ ಬಿ.ಎನ್. ತಿವಾರಿ ಅವರು ದೃಢಪಡಿಸಿದ್ದಾರೆ.
ನಟ, ನಿರ್ಮಾಪಕ ಸಲ್ಮಾನ್ ಖಾನ್ ಅವರು ಚಿತ್ರೋದ್ಯಮದ 25000 ದಿನಗೂಲಿ ಕಾರ್ಮಿಕರಿಗೆ ಹಣಕಾಸು ನೆರವು ನೀಡಿದ್ದು, ನೆರವಿನ ಮೊತ್ತವು ನೇರವಾಗಿ ಕಾರ್ಮಿಕರ ಖಾತೆಗೆ ಜಮಾ ಆಗಲಿದೆ ಎಂದವರು ತಿಳಿಸಿದ್ದಾರೆ.
ಇನ್ನೊಬ್ಬ ಹಿರಿಯ ನಟ ಅಜಯ್ ದೇವಗನ್ ಅವರು 51 ಲಕ್ಷ ರೂಪಾಯಿ ಹಾಗೂ ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಅವರು ಕೂಡ 51 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

Leave a Comment