150 ಕೋಟಿ ರೂ ಬಾಚಿದ ‘ಮಿಷನ್ ಮಂಗಲ್’

ಮುಂಬೈ, ಆಗಸ್ಟ್ 26. ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ ‘ಮಿಷನ್ ಮಂಗಲ್’ 150 ಕೋಟಿ ರೂ ಗಲ್ಲಾಪೆಟ್ಟಿಗೆ ತುಂಬಿಸುವ ಮೂಲಕ ಯಶಸ್ವಿ ಪ್ರದರ್ಶನ ಕಾಣುತ್ತಿದೆ

ಜಗನ್ ಶಕ್ತಿ ನಿರ್ದೇಶನದ ‘ಮಿಷನ್ ಮಂಗಲ್’ ಆಗಸ್ಟ್ 15ಕ್ಕೆ ಬಿಡುಗಡೆಗೊಂಡಿತು. ಅಕ್ಷಯ್ ಕುಮಾರ್ ಹೊರತಾಗಿ ನಟಿಯರಾದ ವಿದ್ಯಾ ಬಾಲನ್, ತಾಪ್ಸಿ ಪನ್ನು, ಕೀರ್ತಿ ಕುಲ್ಹಾರಿ, ಸೋನಾಕ್ಷಿ ಸಿನ್ಹಾ, ನಿತ್ಯಾ ಮೆನನ್ ಮತ್ತು ಶರ್ಮನ್ ಜೋಶಿ ಮುಖ್ಯ ಪಾತ್ರದಲ್ಲಿದ್ದಾರೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ಮೊದಲ ಬಾರಿಗೆ ನಡೆಸಿದ್ದ ಮಂಗಳಯಾನ ಯಶಸ್ವಿ ಉಡಾವಣಾ ಪ್ರಯೋಗ ಕುರಿತಾದ ನೈಜ ಕಥಾಹಂದರವನ್ನು ಈ ಚಿತ್ರ ಹೊಂದಿದೆ

ಈ ಚಿತ್ರವು ಮೊದಲ ವಾರದಲ್ಲಿಯೇ 128 ಕೋಟಿ ರೂ ಕಬಳಿಸುವ ಮೂಲಕ ಅದ್ಭುತ ಪ್ರದರ್ಶನ ಕಂಡಿತು. ಈ ವರ್ಷ ಪ್ರದರ್ಶನಗೊಂಡಿರುವ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’, ‘ಟೋಟಲ್ ಧಮಾಲ್’, ‘ಕೇಸರಿ’, ‘ಭಾರತ್’ ಹಾಗೂ ‘ಕಬೀರ್ ಸಿಂಗ್’ ನಂತರ 150 ಕೋಟಿ ರೂ ಗಲ್ಲಾಪೆಟ್ಟಿಗೆ ತುಂಬಿಸಿದ ಚಿತ್ರಗಳಲ್ಲಿ ಇದೂ ಒಂದಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Leave a Comment