15 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಲೂಧಿಯಾನ, ಫೆ 12- ಪ್ರಿಯತಮನೊಂದಿಗೆ ಮದುವೆಯಾಗಲು ಮನೆಬಿಟ್ಟು ಹೋಗಿದ್ದ 15 ವರ್ಷದ ಬಾಲಕಿ ದಾರಿ ತಪ್ಪಿ ಬೇರೆ ಊರನ್ನು ತಲುಪಿ, ಅಲ್ಲಿ ಇಬ್ಬರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ.

ಲುಧಿಯಾನದ ಈ ಬಾಲಕಿಗೆ ಒಂದು ವರ್ಷದ ಹಿಂದೆ ಸಂಬಂಧಿಕರನ್ನು ಭೇಟಿಯಾಗಲು ಲುಧಿಯಾನಗೆ ಬಂದಿದ್ದ ಸಾಹಿಲ್ ಎಂಬಾತನೊಂದಿಗೆ ಗೆಳೆತನ ಬೆಳೆದಿತ್ತು.

ಬಳಿಕ ಅದು ಪ್ರೇಮಕ್ಕೆ ತಿರುಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆತ ದೆಹಲಿಗೆ ಬಾ, ಮದುವೆಯಾಗೋಣ ಎಂದಿದ್ದರಿಂದ ಈಕೆ ಫೆ.3 ರಂದು ಮನೆ ಬಿಟ್ಟು ರೈಲು ಹತ್ತಿದ್ದಳು. ಆದರೆ ಅದು ಫಿರೋಜಾಬಾದ್ ತಲುಪಿತ್ತು.

ನಂತರ ಅಲ್ಲಿಂದ ಆಕೆ ದೆಹಲಿಗೆಂದು ತಪ್ಪಾಗಿ ಅಮೃತಸರ ರೈಲು ಹತ್ತಿದ್ದಳು. ಅಲ್ಲಿ ದೆಹಲಿ ರೈಲಿನ ಬಗ್ಗೆ ಆಟೋ ಚಾಲಕ ಸಾಹಿಬ್ ಸಿಂಗ್ ಬಳಿ ಕೇಳಿದಾಗ, ಇನ್ನು ರೈಲು ಬೆಳಗ್ಗೆಯೇ ಬರುವುದು ಎಂದು ಹೇಳಿ ರಾತ್ರಿ ಹೋಟೆಲೊಂದಕ್ಕೆ ಆಕೆಯನ್ನು ಕರೆದೊಯ್ದು ಸ್ನೇಹಿತರ ಜೊತೆ ಅತ್ಯಾಚಾರವೆಸಗಿದ್ದ. ಬೆಳಿಗ್ಗೆ ಆಕೆಯನ್ನು ಲುಧಿಯಾನ ಬಸ್ ಗೆ ಹತ್ತಿಸಿ ಕಳಿಸಿದ್ದರು. ಈಗ ಬಾಲಕಿ ಕೊಟ್ಟಿರುವ ದೂರಿನ ಮೇರೆಗೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave a Comment