15 ರಂದು ವೀರಶೈವ ಲಿಂಗಾಯತ ನೌಕರರ ಸಮ್ಮೇಳನ

ಕಲಬುರಗಿ, ಜ. 11: ಚಿತ್ರದುರ್ಗದ ರೆಡ್ಡಿ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 8ನೇ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಗುಲಬರ್ಗಾ ಜಿಲ್ಲಾ ವೀರಶೈವ (ಲಿಂಗಾಯತ) ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ರವೀಂದ್ರ ಶಾಬಾದಿ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿಯ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ಬಿ.ಎಸ್. ಯಡಿಯೂರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಹಾಗೂ ಕೇಂದ್ರ ಮಾಜಿ ಸಚಿವರು ಮತ್ತು ಸಂಸದ ಸಿದ್ದೇಶ್ವರ ಅವರು ಸಮ್ಮೇಳನವನ್ನು ಉದ್ಘಾಟಿಸುವರು ಎಂದು ವಿವರಿಸಿದರು.
ಜಿಲ್ಲೆಯ ಎಲ್ಲಾ ತಾಲೂಕಗಳಿಂದ ಮತ್ತು ನಗರದ ಲಿಂಗಾಯತ ನೌಕರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 14 ರಂದು ಸಂಜೆ 4 ಗಂಟೆಗೆ ಶರಣಬಸವೇಶ್ವರ ದೇವಸ್ಥಾನದಿಂದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಸಮ್ಮೇಳನಕ್ಕೆ ತೆರಳಲಾಗುವದು ಎಂದು ರವಿಂದ್ರ ಶಾಬಾದಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ರಾಜ್ಯಾ ಉಪಾಧ್ಯಕ್ಷ ರಾಜು ಲೇಂಗಟಿ, ಗೌರವ ಅಧ್ಯಕ್ಷ ಜಂಬಣ್ಣಗೌಡ ಶೀಲವಂತ,ಮಲ್ಲಿನಾಥ ಮಂಗಲಗಿ, ಸಂಗಮನಾಥ ಕಶೆಟ್ಟಿ, ಎಸ್.ಎಸ್. ಸಜ್ಜನ, ಗುರುಬಸಪ್ಪ ಪಾಟೀಲ, ಶಿವಶರಣಪ್ಪ ಎಸ್. ದೇಗಾಂವ, ಬಸವರಾಜ, ದೇವಿಂದ್ರ ಗಣಮುಖಿ, ಬಸವರಾಜ ಮೊರಬ, ಶಿವಲಿಂಗಪ್ಪ ಬಂಡಕ್ ಹಾಗೂ ಇತರರು ಇದ್ದರು. …

Leave a Comment