15 ರಂದು ವಲಯಮಟ್ಟದ ಬಿಎಸ್ಪಿ ಸಭೆ

 

ಕಲಬುರಗಿ ಜ 11: ಬಹುಜನ ಸಮಾಜ ಪಕ್ಷದ ಕಲಬುರಗಿ ವಲಯದ 9 ಲೋಕಸಭೆ ಕ್ಷೇತ್ರಗಳ  ಪದಾಧಿಕಾರಿಗಳ ಸಭೆ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ 63 ನೆಯ ಹುಟ್ಟು ಹಬ್ಬ ಕಾರ್ಯಕ್ರಮವನ್ನು ಜನವರಿ 15 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಜಗತ್ ವೃತ್ತದಲ್ಲಿ ಆಯೋಜಿಸಲಾಗಿದೆ ಎಂದು ಬಹುಜನ ಸಮಾಜ ಪಕ್ಷದ   ಕಲಬುರಗಿ ವಲಯ ಉಸ್ತುವಾರಿ ಮತ್ತು ರಾಜ್ಯ ಕಾರ್ಯದರ್ಶಿ ಸೂರ್ಯಕಾಂತ ನಿಂಬಾಳಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ರಾಜ್ಯ ಉಸ್ತುವಾರಿಗಳಾದ ಎಂ ಎಲ್ ತೋಮರ್ ಉದ್ಘಾಟಿಸುವರು. ರಾಜ್ಯ ಮುಖಂಡರಾದ ಕೆ ಬಿ ವಾಸು, ಡಾ ರಾಜೀವ ಕಾಂಬಳೆ, ಮಹಾದೇವ ಧನ್ನಿ ,ವೈಜನಾಥ ರ್ಸೂವಂಶಿ, ಯಶವಂತ ಪೂಜಾರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ 63 ಮಹಿಳೆಯರನ್ನು 63 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವದು. ಸಭೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯ ರಣತಂತ್ರದ ಬಗ್ಗೆ ಚರ್ಚೆ ನಡೆಯಲಿದೆ.

ಚುನಾವಣೆಗಾಗಿ ಜನಸಾಮಾನ್ಯರಿಂದಲೇ ನಿಧಿ ಸಂಗ್ರಹಿಸಿ, ಚುನಾವಣಾ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶ ಪಕ್ಷ ಹೊಂದಿದೆ. ಆದ್ದರಿಂದ ಪಕ್ಷವು  1 ನೋಟು ಕೊಡಿ, 1 ಓಟು ಕೊಡಿ. ನಮಗೆ ನೋಟು ಓಟು ಕೊಟ್ಟರೆ ನಿಮಗೆ ಒಳ್ಳೆಯ ಸರ್ಕಾರ ಕೊಡುತ್ತೇವೆ ಎಂಬ ಘೋಷವಾಕ್ಯವನ್ನು ಪ್ರಚುರ ಪಡಿಸುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಎಲ್ ಆರ್ ಭೋಸ್ಲೆ, ಗೌತಮ ಬೊಮ್ನಳ್ಳಿ, ಪ್ರಕಾಶ ಸಾಗರ ಜೈಭೀಮ ಸಿಂಧೆ ಉಪಸ್ಥಿತರಿದ್ದರು..

Leave a Comment