15 ರಂದು ರಕ್ತದಾನ ಶಿಬಿರ

 

ಕಲಬುರಗಿ ಆ 13:ಗೆಳೆಯರ ಬಳಗ ಮತ್ತು ಜಿ-99 ಸಂಘಟನೆಗಳ ವತಿಯಿಂದ ಆಗಸ್ಟ್ 15 ರಂದು ನಗರದ ರಾಷ್ಟ್ರಪತಿ ವೃತ್ತ (ಜೇವರಗಿ ಕ್ರಾಸ್ ) ಹತ್ತಿರದ ಸ್ಪರ್ಶ ಆಸ್ಪತ್ರೆ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದೆ ಎಂದು ಜಿ-99 ಸಂಘಟನೆ ನಿರ್ದೇಶಕ ಶರಣಬಸಪ್ಪ ಪಪ್ಪಾ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊಸ ರಕ್ತದಾನಿಗಳನ್ನು ಪ್ರೋತ್ಸಾಹಿಸಲು ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಹಾಗೂ ದಾನಿಗಳು ಕೂಡಾ ಬಂದು ಶಿಬಿರದಲ್ಲಿ ರಕ್ತದಾನ ಮಾಡಬಹುದು.ಕಳೆದ ವರ್ಷದ ಶಿಬಿರದಲ್ಲಿ 155 ಜನ ರಕ್ತದಾನ ಮಾಡಿದ್ದರು.ನಿರಂತರ ರಕ್ತದಾನ ಮಾಡುವದರಿಂದ ರಕ್ತದ ಏರೊತ್ತಡ ( ಹೈ ಬಿಪಿ) ,ಸಂಭವನೀಯ ಹೃದಯಾಘಾತ  ಮತ್ತು ಕೊಲೆಸ್ಟರಾಲ್ ಪ್ರಮಾಣದಲ್ಲಿ ಇಳಿಕೆ ಕಂಡು ಬರುವದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಮೇಶ ಸ್ವಾಮಿ,ಗೌಡಪ್ಪಗೌಡ, ಮಲ್ಲಿಕಾರ್ಜುನ ನಾಗೂರ,ಅಣವೀರ ಪಾಟೀಲ ನಾಗನಳ್ಳಿ,ಶರಣು ಮತ್ತಿಮೂಡ ಮತ್ತು ಕೃಷ್ಣ ಸೇರಿದಂತೆ ಹಲವರಿದ್ದರು..

Leave a Comment