15 ರಂದು ದೆಹಲಿ,ಕಲಬುರಗಿಯಲ್ಲಿ ಸೇವಾಲಾಲ ಜಯಂತಿ

ಕಲಬುರಗಿ ಪೆ 13: ಸಂತ ಸೇವಾಲಾಲರ ಜಯಂತ್ಯುತ್ಸವವನ್ನು ಫೆಬ್ರವರಿ 15 ಇದೇ ಪ್ರಥಮ ಬಾರಿಗೆ ದೇಶದ ರಾeಧಾನಿ ನವದೆಹಲಿಯಲ್ಲಿ ಮತ್ತು ಅಂದು  ಜಿಲ್ಲಾಡಳಿತದ ವತಿಯಿಂದ ಕಲಬುರಗಿಯಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಮತ್ತು ರಾಮಚಂದ್ರ ಜಾಧವ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನವದೆಹಲಿಯ ಜನಪಥ ರಸ್ತೆ, ಡಾ. ಅಂಬೇಡ್ಕರ್ ಅಂತರ್‍ರಾಷ್ಟ್ರೀಯ ಕೇಂದ್ರದಲ್ಲಿ ಫೆ 15 ರಂದು ಬೆಳಿಗ್ಗೆ 11.45 ಕ್ಕೆ ಸಂತ ಸೇವಾಲಾಲರ ಜಯಂತ್ಯುತ್ಸವವನ್ನು ಮತ್ತು ಫೆ 16 ರಂದು ಬೆಳಿಗ್ಗೆ 10 ಕ್ಕೆ ಬಂಜಾರಾ ತಾಂಡಾಗಳ ವಿಕಾಸ ಕುರಿತು ರಾಷ್ಟೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.ಸಚಿವ ಪ್ರಭು ಚವ್ಹಾಣ, ಸಂಸದ ಡಾ ಉಮೇಶ ಜಾಧವ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೀವ್ ಪಿ ,ಎಂಎಲ್ಸಿ ಪ್ರಕಾಶ ರಾಠೋಡ ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.ಕಲಬುರಗಿ ಜಿಲ್ಲೆಯ ಸುಮಾರು 5 ರಿಂದ 6 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವರು

ಕಲಬುರಗಿಯಲ್ಲಿ ಫೆ 15 ರಂದು ಬೆಳಿಗ್ಗೆ 11 ಗಂಟೆಗೆ ನಗರೇಶ್ವರ ಶಾಲೆಯಿಂದ ಡಾ ಎಸ್ ಎಂ ಪಂಡಿತ ರಂಗಮಂದಿರದವರೆಗೆ ಸಂತ ಸೇವಾಲಾಲರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ.ನಂತರÀ  ಜನಪ್ರತಿನಿಧಿಗಳ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಡಾ ಎಸ್ ಎಂ ಪಂಡಿತ ರಂಗಮಂದಿರದಲ್ಲಿ  ಜಯಂತಿ ಉತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ  ನಾಮದೇವ ರಾಠೋಡ ಕರಹರಿ, ಬಿ.ಬಿ ನಾಯಕ, ಬಿ ಎಲ್ ಚವ್ಹಾಣ, ಆನಂದ ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು..

Leave a Comment