15 ದಿನದೊಳಗೆ ತಿಹಾರ್ ಜೈಲಿಂದ ಡಿಕೆಶಿ ಬಿಡುಗಡೆ

ಕೊಪ್ಪಳ: ಇನ್ನು 15 ದಿನದೊಳಗೆ ತಿಹಾರ್ ಜೈಲ್ ನಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಿಡುಗಡೆಯಾಗಲಿದ್ದಾರೆ.

ಹೀಗೆಂದು ಹೇಳಿದ್ದು ಲಾಲ್ ಸಾಬ್ ದೇವರು. ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ಲಾಲ್ ಸಾಬ್ ದೇವರು ಭವಿಷ್ಯ ಹೇಳಿದ್ದಾರೆ.

ಮೊಹರಂ ಕೌಡೆಪೀರ್ ವಿಸರ್ಜನೆಯ ಸಂದರ್ಭದಲ್ಲಿ ಸ್ಥಳೀಯರು ತಿಹಾರ್ ಜೈಲಿನಲ್ಲಿರುವ ಡಿ.ಕೆ. ಶಿವಕುಮಾರ್ ಯಾವಾಗ ಬಿಡುಗಡೆಯಾಗುತ್ತಾರೆ ಎಂದು ಲಾಲ್ ಸಾಬ್ ದೇವರನ್ನು ಪ್ರಶ್ನಿಸಿದ್ದು, ಇನ್ನು 15 ದಿನದೊಳಗೆ ಡಿಕೆಶಿ ಅವರು ಬಿಡುಗಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.

Leave a Comment