15 ಕೋಟಿ ರೂ. ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣದ ಅಭಿವೃದ್ಧಿ

ಮೈಸೂರು – ಕುಶಾಲನಗರ ಸವೆ ಕಾರ್ಯ ಪೂರ್ಣ
ಮೈಸೂರು, ಆ.17- ಪಾರಂಪರಿಕ ಹಿನ್ನೆಲೆ ಹೊಂದಿರುವ ಮೈಸೂರು ರೈಲು ನಿಲ್ದಾಣವನ್ನು 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕರಾದ ಅಪರ್ಣಾ ಗಾರ್ಗ್ ತಿಳಿಸಿದರು.
ನೈರುತ್ಯ ರೈಲ್ವೆ ವಿಭಾಗದಲ್ಲಿ ಜಾರಿಗೆ ತರಲಾಗಿರುವ ರೈಲು ಸಂಚಾರದ ಪರಿಷ್ಕೃತ ವೇಳಾಪಟ್ಟಿಯನ್ನು ಹುಬ್ಬಳ್ಳಿ ಕೇಂದ್ರಸ್ಥಾನದಲ್ಲಿ ಏರ್ಪಡಿಸಲಾಗಿದ್ದ ವೀಡೀಯೋ ಕಾನ್ಫೆರನ್ಸ್ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು-ಬೆಂಗಳೂರು ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣದ ನಂತರ ಹೆಚ್ಚಿದ ರೈಲು ಸಂಚಾರ ದಟ್ಟಣೆಯನ್ನು ನಿರ್ವಹಿಸಲು ಹಾಲಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸ್ಥಳಾವಕಾಶದ ಕೊರತೆ ಇದ್ದು, ಸಮೀಪದ ನಾಗನಹಳ್ಳಿಯಲ್ಲಿ ಸೆಟಲೈಟ್ ಟರ್ಮಿನಲ್ ಸ್ಥಾಪಿಸುವ ಸಂಬಂದ ಡಿಪಿಆರ್ ಸಿದ್ಧವಾಗಿದೆ. ಕೆಲದಿನಗಳಲ್ಲೇ ಈ ಸಂಬಂಧ ಟೆಂಡರ್ ಕರೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು.
@12bc = ಮೈಸೂರು – ಕುಶಾಲನಗರ ಸರ್ವೆ ಪೂರ್ಣ
ಮೈಸೂರು – ಮಡಿಕೇರಿ ಕುಶಾಲನಗರ ಮಾರ್ಗ ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು. ಈ ಮಾರ್ಗದಲ್ಲಿ ಸರ್ವೇ ಸಂಪೂರ್ಣ ಮುಗಿದಿದ್ದು, ಕೇಂದ್ರ ರೈಲ್ವೆ ಇಲಾಖೆಗೆ ವರದಿ ನೀಡಲಾಗಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಪಾಲು ವೆಚ್ಚ ಮಾಡಲಿದ್ದು, ಎರಡು ಸಾವಿರದ ಆರುನೂರು ಕೋಟಿ ವೆಚ್ಚವಾಗಲಿದೆ ಎಂದರು.
ಮೈಸೂರು ನಿಲ್ದಾಣದಲ್ಲಿ ಜನವರಿಯಿಂದ ಜುಲೈವರೆಗೆ ಮನೆ ಬಿಟ್ಟು ಹಾಗೂ ತಪ್ಪಿಸಿಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಿದ್ದ 14 ಮಹಿಳೆಯರು ಮತ್ತು 134 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದರು.
ಕಳೆದ ಬಾರಿ ಸ್ವಚ್ಛತೆಯಲ್ಲಿ ಮೈಸೂರು ನಿಲ್ದಾಣ 14ನೇ ಸ್ಥಾನ ಪಡೆದಿತ್ತು. ಈ ಬಾರಿ 9 ನೇ ಸ್ಥಾನಗಳಿಸಿದ್ದು, ಸ್ವಚ್ಛತೆಯತ್ತ ಹೆಚ್ಚಿನ ಗಮನ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ರೈಲು ಸಂಚಾರದ ಹೊಸ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ಮೈಸೂರು ರೈಲ್ವೆ ವಿಭಾಗದ ಅಧಿಕಾರಿಗಳು ಇದ್ದರು.

Leave a Comment